ದೇಹಕ್ಕೆ ಬಾಧೆ ಕೊಡುವ ಗಾಯವನ್ನು ನಾವು ಮತ್ತೊಬ್ಬರಿಗೆ ತೋರಿಸಲು ಸಾಧ್ಯ. ಹಾಗೇ ನಮ್ಮ ಮನಸ್ಸಿಗಾದ ನೋವನ್ನು ಹೇಳಿಕೊಳ್ಳಬಹುದೇ ವಿನಾ ತೋರಿಸಲು ಸಾಧ್ಯವೇ? ಆದರೆ ನನ್ನ ಕಣ್ಣ ಮುಂದೆ ನಡೆದ ಪ್ರಕರಣವೊಂದು, ಅಂತರಾಳದ ನೋವನ್ನು ಹೀಗೂ ವ್ಯಕ್ತಪಡಿಸಬಹುದೇ ಎಂದು ನಾನು ಅಚ್ಚರಿಯಲ್ಲಿ ಮುಳುಗುವಂತೆ ಮಾಡಿತು.

ಅದೊಂದು ದಂತ ಚಿಕಿತ್ಸಾಲಯ. ಅವರು 20ಕ್ಕೂ ಹೆಚ್ಚು ವರ್ಷಗಳಿಂದ ದಂತ ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದ ಸಂಸ್ಕಾರವಂತ ವೈದ್ಯರು. ಅಂದು ಸಂಜೆ ನಾಲ್ಕೈದು ಜನ ಅವರ ಚಿಕಿತ್ಸಾಲಯದಲ್ಲಿ ಸರದಿಯಲ್ಲಿ ಕಾಯುತ್ತಿದ್ದೆವು. ನಮಗಿಂತ ಮುಂದೆ ಇದ್ದ ವ್ಯಕ್ತಿಯೊಬ್ಬರು ಹೆಂಡತಿಯನ್ನು ಒಳಗೆ ಕರೆದೊಯ್ದು ಹಲ್ಲು ಕೀಳಿಸಿಕೊಂಡು ಹೊರಗೆ ಬಂದು ಕುಳಿತುಕೊಂಡರು. ಅವರ ಜೊತೆಯಲ್ಲಿ ಮೂರ್ನಾಲ್ಕು ಮಂದಿ ಸಂಬಂಧಿಕರೂ ಬಂದಿದ್ದು, ಕುಶಲೋಪರಿ ಕೇಳುತ್ತಾ ಕುಳಿತರು.

ಒಂದೈದು ನಿಮಿಷ ಸುಮ್ಮನಿದ್ದ ಆ ಹೆಣ್ಣುಮಗಳು, ನಂತರ ತನಗೆ ನೋವಾಗುತ್ತಿದೆ ಎಂದು ಹೇಳುತ್ತಾ ನೋಡ ನೋಡುತ್ತಲೇ ಕಿರುಚಾಡತೊಡಗಿದಳು. ವೈದ್ಯರು ಹೊರಗೆ ಬಂದು ಆಕೆಯನ್ನು ಪರೀಕ್ಷಿಸಿ, ಎರಡು ನೋವು ನಿವಾರಕ ಇಂಜೆಕ್ಷನ್ಗಳನ್ನು ಕೊಟ್ಟರು. 5-10 ನಿಮಿಷ ಸುಮ್ಮನೆ ಕುಳಿತ ಆಕೆ ಮತ್ತೆ ನೋವಿನಿಂದ ಕೂಗಾಡುತ್ತಾ ನೆಲದ ಮೇಲೆ ಬಿದ್ದು ಹೊರಳಾಡತೊಡಗಿದಳು. ಸಮಾಧಾನ ಮಾಡಲು ಹೋದ ಗಂಡನನ್ನು ಚೆನ್ನಾಗಿ ಬೈದು, ‘ನನಗೆ ಇಷ್ಟವಿಲ್ಲದಿದ್ದರೂ ಏಕೆ ಹಲ್ಲು ಕೀಳಿಸಿದೆ’ ಎನ್ನುತ್ತಾ ಗುಂಡಿಗಳು ಕಿತ್ತುಬರುವಂತೆ ಆತನ ಅಂಗಿಯನ್ನು ಎಳೆದಾಡಿದಳು. ಸಮಾಧಾನ ಮಾಡಲು ಬಂದ ಸಂಬಂಧಿಕರನ್ನೆಲ್ಲ ಬಾಯಿಗೆ ಬಂದಂತೆ ಬೈದು ಮತ್ತಷ್ಟು ಜೋರಾಗಿ ಕಿರುಚಾಟ ಶುರು ಮಾಡಿದಳು. ವೈದ್ಯರು ಹೊರಬಂದು, ತೆಗೆದ ಹಲ್ಲು ಸಂಪೂರ್ಣ ಸಡಿಲವಾಗಿದ್ದು, ಇಷ್ಟೊಂದು ನೋವು ಬರಲು ಸಾಧ್ಯ ಇಲ್ಲವಲ್ಲ ಎಂದು ಚಡಪಡಿಸುತ್ತಾ ಗಾಬರಿಯಲ್ಲಿ ಬೆವರತೊಡಗಿದರು.

ಆ ಮಹಿಳೆಯ ಗೋಳಾಟ ನೋಡಿ, ಬೇರೆ ರೋಗಿಗಳು ತಮಗೂ ಹೀಗಾಗಬಹುದು ಎಂಬ ಗಾಬರಿಯಲ್ಲಿ ಅಲ್ಲಿಂದ ಹೊರಟುಹೋದರು. ದೂರದ ಊರಿಂದ ವೈದ್ಯರನ್ನು ಭೇಟಿ ಮಾಡಲು ಬಂದಿದ್ದ ಅವರ ಸಂಬಂಧಿಕರು ಸಹ ಗಾಬರಿ ಬಿದ್ದು, ಆ ಹೆಣ್ಣುಮಗಳನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು. ಏನು ಮಾಡಿದರೂ ಆಕೆ ಕಿರುಚಾಟ, ಅಳು ನಿಲ್ಲಿಸದಿದ್ದಾಗ ಅವರ ಸಂಬಂಧಿಕರು ಸಮಾಧಾನ ಮಾಡಿ ಮೆಲ್ಲಗೆ ಮನೆಗೆ ಕರೆದುಕೊಂಡು ಹೋದರು.

ಇದೆಲ್ಲದರಿಂದಾಗಿ ವೈದ್ಯರು ನಮಗೆ ಚಿಕಿತ್ಸೆ ನೀಡುವ ಸ್ಥಿತಿಯಲ್ಲಿ ಇಲ್ಲದಿದ್ದರಿಂದ ನಾವು ಮರುದಿನ ಬರುವುದಾಗಿ ಹೇಳಿ, ತಾತ್ಕಾಲಿಕ ಉಪಶಮನಕ್ಕೆ ಮಾತ್ರೆ ಪಡೆದು ಹೊರಬಂದೆವು. ಮರುದಿನ ನಾವು ವೈದ್ಯರಲ್ಲಿಗೆ ಹೋದಾಗ ಅದೇ ಹೆಣ್ಣುಮಗಳು ತಾಯಿಯ ಜೊತೆ ವೈದ್ಯರ ಕೊಠಡಿ ಪ್ರವೇಶಿಸಿದಳು. ನಿನ್ನೆಯ ದಿನ ಅಷ್ಟು ರಂಪ ರಾಮಾಯಣ ಮಾಡಿದ್ದ ಆಕೆ ಅತ್ಯಂತ ಸಮಾಧಾನ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿ ಇದ್ದುದನ್ನು ಕಂಡು ನನಗೆ ಅಚ್ಚರಿಯಾಯಿತು. ಬಂದವಳೇ ವೈದ್ಯರ ಕಾಲಿಗೆರಗಿ, ‘ನನ್ನ ಗಂಡ ನನ್ನನ್ನು ತುಂಬಾ ಸತಾಯಿಸುತ್ತಾನೆ, ಹೊಡೆಯುತ್ತಾನೆ, ಚಿತ್ರಹಿಂಸೆ ಕೊಡುತ್ತಾನೆ. ಅವನನ್ನು ಹೆದರಿಸಲು, ಬುದ್ಧಿ ಕಲಿಸಲು ಇದೇ ಸಂದರ್ಭ ಎಂದುಕೊಂಡು ನಾನು ಆ ರೀತಿ ನಾಟಕವಾಡಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಅಳತೊಡಗಿದಳು. ಆದರೆ ಪಾಪ, ಆ ವೈದ್ಯರ ಸ್ಥಿತಿಯಂತೂ ಅಯೋಮಯವಾಗಿತ್ತು. ತನ್ನಿಂದ ಚಿಕಿತ್ಸೆಯಲ್ಲಿ ಏನಾದರೂ ಅಚಾತುರ್ಯ ಆಗಿ ಆಕೆಗೆ ಏನಾದರೂ ಹೆಚ್ಚು ಕಡಿಮೆಯಾಗಿಬಿಟ್ಟರೆ ಎಂಬ ಭಯದಲ್ಲಿ ರಾತ್ರಿಯೆಲ್ಲ ನಿದ್ದೆಗೆಟ್ಟು, ನೂರಾರು ದೇವರಿಗೆ ಹರಕೆ ಹೊತ್ತುಕೊಂಡಿದ್ದಾಗಿ ಅವರು ತಿಳಿಸಿದರು. ಅಷ್ಟಾದರೂ ಆ ಹೆಣ್ಣುಮಗಳಿಗೆ ಒಂದು ಮಾತನ್ನೂ ಬೈಯದ ಅವರು, ಆಕೆಗೆ ಸಮಾಧಾನ ಮಾಡುತ್ತಾ, ಇನ್ನೆಂದಿಗೂ ಎಲ್ಲಿಯೂ ಆ ರೀತಿ ಮಾಡದಂತೆ ಬುದ್ಧಿಮಾತು ಹೇಳಿ ಕಳಿಸಿಕೊಟ್ಟರು. ಅದನ್ನು ನೋಡಿ, ಅವರ ಬಗೆಗಿನ ನನ್ನ ಗೌರವ ಮತ್ತಷ್ಟು ಹೆಚ್ಚಾಯಿತು.

ತನ್ನ ನೋವು, ಹತಾಶೆ, ಅವಮಾನ, ಸಂಕಟದ ಕಾರಣದಿಂದ ಆ ಹೆಣ್ಣುಮಗಳು ಅಂತಹ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡಿದ್ದು ಬೇಜಾರಿನ ವಿಚಾರವೇ ಆಗಿದ್ದರೂ ತೀವ್ರತರವಾದ ನೋವು ಆಕೆಯಿಂದ ಅಂತಹ ಕೆಲಸ ಮಾಡಿಸಿತ್ತು. ಗಂಡನನ್ನು ಹೆದರಿಸಲು ಆಕೆ ಈ ರೀತಿ ಮಾಡಿದ್ದರೂ ಏನೂ ತಪ್ಪಿರದ ವೈದ್ಯರಿಗೆ ಶಿಕ್ಷೆ ಕೊಟ್ಟಿದ್ದು ಸರಿಕಾಣಲಿಲ್ಲ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-1585939268

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.