ಮೊಬೈಲ್ ಟವರ್‌ ಅಳವಡಿಸುವುದಾಗಿ ₹7.82 ಲಕ್ಷ ವಂಚನೆ

7

ಮೊಬೈಲ್ ಟವರ್‌ ಅಳವಡಿಸುವುದಾಗಿ ₹7.82 ಲಕ್ಷ ವಂಚನೆ

Published:
Updated:

ಬೆಂಗಳೂರು: ಮೊಬೈಲ್‌ ಟವರ್‌ ಅಳವಡಿಸುವುದಾಗಿ ಹೇಳಿ ನಂಬಿಸಿದ್ದ ಖದೀಮನೊಬ್ಬ, ನಗರದ ನಿವಾಸಿ ವಿಶ್ವನಾಥ್‌ ಎಂಬುವರಿಂದ ₹7.82 ಲಕ್ಷ ಪಡೆದು ವಂಚಿಸಿದ್ದಾನೆ.

ಈ ಸಂಬಂಧ ನಗರದ ಸೈಬರ್ ಕ್ರೈಂ ಠಾಣೆಗೆ ವಿಶ್ವನಾಥ್‌ ದೂರು ನೀಡಿದ್ದಾರೆ.

‘ದೂರುದಾರರಿಗೆ ಜುಲೈ 19ರಂದು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ‘ನಾನು ಏರ್‌ಟೆಲ್‌ ಕಂಪನಿಯ ಪ್ರತಿನಿಧಿ. ನಿಮ್ಮ ಒಡೆತನದ ಜಾಗದಲ್ಲಿ ಟವರ್‌ ಅಳವಡಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ನಿಮ್ಮ ಒಪ್ಪಿಗೆ ಅಗತ್ಯ’ ಎಂದು ಹೇಳಿದ್ದ. ಅದಕ್ಕೆ ದೂರುದಾರರು ಒಪ್ಪಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಟವರ್‌ ಅಳವಡಿಸಲು ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಬೇಕು. ನೋಂದಣಿ ಸೇರಿ ಹಲವು ಶುಲ್ಕಗಳನ್ನು ಪಾವತಿ ಮಾಡಬೇಕು’ ಎಂದು ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ವಿಶ್ವನಾಥ್, ಆತ ಸೂಚಿಸಿದ್ದ ಬ್ಯಾಂಕ್‌ಗಳ ಖಾತೆಗಳಿಗೆ ಹಣ ಜಮೆ ಮಾಡಿದ್ದರು. ನಂತರ, ಆರೋಪಿ ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.’

‘ಏರ್‌ಟೆಲ್ ಕಂಪನಿ ಹೆಸರು ದುರ್ಬಳಕೆ ಮಾಡಿಕೊಂಡು ಆರೋಪಿ ಕೃತ್ಯ ಎಸಗಿದ್ದಾನೆ. ಟವರ್‌ ಅಳವಡಿಕೆ ಹೆಸರಿನಲ್ಲಿ ಈ ಹಿಂದೆಯೂ ನಗರದ ಹಲವರನ್ನು ವಂಚಿಸಲಾಗಿದೆ. ಇದರ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಅನುಮಾನವಿದೆ. ಅದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !