‘ಭಾರತ–ಪಾಕ್‌ ಬಿಕ್ಕಟ್ಟಿಗೆ ಮೋದಿ ಸರ್ಕಾರದ ಆಕ್ರಮಣಕಾರಿ ಮನೋಭಾವ ಕಾರಣ’

7
ದಿ ಪಾಕಿಸ್ತಾನ್‌ ತೆಹ್ರರೀಕ್‌–ಎ–ಇನ್ಸಾಫ್‌ ಮುಖ್ಯಸ್ಥ ಇಮ್ರಾನ್‌ ಖಾನ್‌ ಅಭಿಮತ

‘ಭಾರತ–ಪಾಕ್‌ ಬಿಕ್ಕಟ್ಟಿಗೆ ಮೋದಿ ಸರ್ಕಾರದ ಆಕ್ರಮಣಕಾರಿ ಮನೋಭಾವ ಕಾರಣ’

Published:
Updated:
ಇಮ್ರಾನ್‌ ಖಾನ್

ಕರಾಚಿ: ‘ಭಾರತ–ಪಾಕಿಸ್ತಾನ ನಡುವಣ ಸದ್ಯದ ಬಿಕ್ಕಟ್ಟಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಕ್ರಮಣಕಾರಿ ಮನೋಭಾವವೇ ಕಾರಣ’ ಎಂದು ದಿ ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಅಭಿಪ್ರಾಯಪಟ್ಟಿದ್ದಾರೆ.

‘ಡಾನ್‌‘ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಶರೀಫ್ ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಶಕ್ತಿಮೀರಿ ಪ್ರಯತ್ನಿಸಿದರು. ಆದರೆ, ಪಾಕಿಸ್ತಾನವನ್ನು ದೂರವಿಡುವ ಉದ್ದೇಶ ನರೇಂದ್ರ ಮೋದಿ ಸರ್ಕಾರದ್ದಾಗಿರುವುದರಿಂದ ಬಿಕ್ಕಟ್ಟು ಬಗೆಹರಿದಿಲ್ಲ’ ಎಂದು ಹೇಳಿದ್ದಾರೆ.

2015ರ ಡಿಸೆಂಬರ್‌ನಲ್ಲಿ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆದರೆ, ಪಾಕಿಸ್ತಾನ ಮೂಲಕ ಉಗ್ರರು 2016ರ ಜನವರಿಯಲ್ಲಿ ಪಠಾಣ್‌ಕೋಟ್‌ ಮತ್ತು ಉರಿಯಲ್ಲಿ ದಾಳಿ ನಡೆಸಿದ್ದರಿಂದ ಉಭಯ ದೇಶಗಳ ನಡುವಣ ಸಂಬಂಧ ಮತ್ತೆ ಹಳಸಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !