ಶಾಂತವಾಗಿದ್ದ ದಕ್ಷಿಣ ಕನ್ನಡಕ್ಕೆ ಏನಾಗಿದೆ: ಪ್ರೊ. ಕೆ.ಇ.ರಾಧಾಕೃಷ್ಣ ಪ್ರಶ್ನೆ

7
ಬಿ.ಎ.ಮೊಹಿದೀನ್‌ ಅವರ ಆತ್ಮಕಥೆ ‘ನನ್ನೊಳಗಿನ ನಾನು’ ಕೃತಿ ಬಿಡುಗಡೆ

ಶಾಂತವಾಗಿದ್ದ ದಕ್ಷಿಣ ಕನ್ನಡಕ್ಕೆ ಏನಾಗಿದೆ: ಪ್ರೊ. ಕೆ.ಇ.ರಾಧಾಕೃಷ್ಣ ಪ್ರಶ್ನೆ

Published:
Updated:
Deccan Herald

ಬೆಂಗಳೂರು: ‘ಸುಂದರವಾಗಿ, ಶಾಂತವಾಗಿದ್ದ ದಕ್ಷಿಣ ಕನ್ನಡಕ್ಕೆ ಏನಾಗಿದೆ? ಒಬ್ಬ ವ್ಯಕ್ತಿ ಕೊಳ್ಳಿ ಇಡೋದರಿಂದ ಇಷ್ಟೆಲ್ಲಾ ಆಗುತ್ತಿದೆ. ಕೊಳ್ಳಿ ಇಡಿಸಿಕೊಳ್ಳುವವರಿಗೆ ಬುದ್ಧಿ ಇಲ್ಲವೇ’ ಎಂದು ಶಿಕ್ಷಣತಜ್ಞ ಪ್ರೊ. ಕೆ.ಇ.ರಾಧಾಕೃಷ್ಣ ಪ್ರಶ್ನಿಸಿದರು.

ಬಿ.ಎ.ಮೊಹಿದ್ದೀನ್‌ ಅವರ ಆತ್ಮಕಥೆ ‘ನನ್ನೊಳಗಿನ ನಾನು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಮೊಹಿದ್ದೀನ್‌ ಅವರದ್ದು ವಿಶ್ವರೂಪಿ ವ್ಯಕ್ತಿತ್ವ. ಬಾಲ್ಯದ ದಿನಗಳನ್ನು ಸಹಜವಾಗಿ ಕಳೆದರು. ಅವರನ್ನು ರೂಪಿಸಿದ್ದೇ ಅವರ ಬಾಲ್ಯದ ಆಟ, ಪಾಠಗಳು. ಅವರೆಂದೂ ಅವಕಾಶವಾದಿ ರಾಜಕಾರಣಿಯಾಗಿರಲಿಲ್ಲ. ಇಂದಿರಾ ಗಾಂಧಿಯವರು ಕರೆದಾಗ ಹೋಗಿದ್ದರೆ ಕೇಂದ್ರದ ಮಂತ್ರಿಯಾಗಿರುತ್ತಿದ್ದರು. ಆದರೆ ಅವರು ಹೋಗಲಿಲ್ಲ’ ಎಂದು ಅವರ ವ್ಯಕ್ತಿತ್ವವನ್ನು ಬಿಚ್ಚಿಟ್ಟರು.  

ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌, ‘ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣರಾದ ಮೊಹಿದ್ದೀನ್‌, ಶಿಕ್ಷಣ ಮಂತ್ರಿಯಾಗಿದ್ದಾಗ 800 ಮದರಸಾಗಳನ್ನು ಉನ್ನತ ದರ್ಜೆಗೆ ಏರಿಸಿದರು. ಅವರ ಸರಳ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು’ ಎಂದರು.

‘ಮೊಹಿದ್ದೀನ್‌ ಅವರು ತೀರಿಕೊಳ್ಳುವ ಹಿಂದಿನ ದಿನ ಪುಸ್ತಕದ ಕೊನೆಯ ಭಾಗವನ್ನು ಓದಿ ಹೇಳು ಎಂದು ಕೇಳಿದರು. ನಾನು ಓದಿ ಮುಗಿಸಿದಾಗ ಅಲ್ಲಿದ್ದ ಎಲ್ಲರ ಕಣ್ಣಾಲಿಗಳು ತುಂಬಿಕೊಂಡಿದ್ದವು’ ಎಂದು ಕೃತಿಯ ನಿರೂಪಣೆಕಾರರಲ್ಲಿ ಒಬ್ಬ
ರಾದ ಬಿ.ಎ ಮುಹಮ್ಮದ್‌ ಅಲಿ ಹೇಳಿದರು.

ಕೊನೆಯ ಆಸೆ: ‘ಮೊಹಿದ್ದೀನ್‌ ಅವರು ತಮ್ಮ ಕೊನೆಯ ಆಸೆಯನ್ನು ನನ್ನೊಂದಿಗೆ ಹಂಚಿಕೊಂಡರು. ಸಾಯುವ ವ್ಯಕ್ತಿ ತಮ್ಮ ಕುಟುಂಬದ ಬಗ್ಗೆ ಯೋಚಿಸುತ್ತಾರೆ. ಆದರೆ ಇವರು ಸಮುದಾಯ ಭವನ ಕಟ್ಟಬೇಕು, ಐಎಎಸ್‌ ಓದುವವರಿಗೆ ಸಹಾಯವಾಗಬೇಕು ಎಂದು ಹೇಳಿದರು’ ಎಂದು ಸೈಯದ್ ಬ್ಯಾರಿ ನೆನಪಿಸಿಕೊಂಡು ಕಣ್ಣಾಲಿ ತುಂಬಿಕೊಂಡರು.

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !