ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಅವಳಿ ಶಿಶುಗಳ ಸಾವು

7
ಥೈರಾಯ್ಡ್‌ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿ

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಅವಳಿ ಶಿಶುಗಳ ಸಾವು

Published:
Updated:
Deccan Herald

ಚಾಮರಾಜನಗರ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ತಾಯಿ ಹಾಗೂ ನವಜಾತ ಅವಳಿ ಶಿಶುಗಳು ಮೃತಪಟ್ಟಿರುವ ಪ್ರಕರಣ ನಡೆದಿದೆ.

ಪಟ್ಟಣದ ಭಗೀರಥ ನಗರದ ಹೇಮಂತ್‌ ಪತ್ನಿ ರಂಜಿತಾ (19) ಮೃತಪಟ್ಟವರು.

‘ಮಹಿಳೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಮಗು ಗರ್ಭದಲ್ಲೇ ಮೃತಪಟ್ಟರೆ, ಇನ್ನೊಂದು ಮಗು ಸಂಜೆ ಮೃತಪಟ್ಟಿತು ಎಂದು ಜಿಲ್ಲಾ ಆಸ್ಪತ್ರೆಯ ಮುಖ್ಯ ಸರ್ಜನ್‌ ಡಾ. ರಘುರಾಮ್‌ ಸರ್ವೇಗಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಥೈರಾಯ್ಡ್‌ ಸಮಸ್ಯೆ ಇತ್ತು: ರಂಜಿತಾ ಅವರು ಥೈರಾಯ್ಡ್‌ ಸಮಸ್ಯೆಯಿಂದ ಬಳಲುತ್ತಿದ್ದರು. ಗರ್ಭಿಣಿಯಾಗಿದ್ದ ಮಹಿಳೆಗೆ 9 ತಿಂಗಳು ಪೂರ್ತಿಯಾಗಲೂ ಇನ್ನೂ 15 ದಿನಗಳು ಇದ್ದವು ಎಂದು ವೈದ್ಯರು ಹೇಳಿದ್ದಾರೆ.

‘ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ರಂಜಿತಾ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮನೆಗೆ ಹೋಗಿದ್ದರು. ಬೆಳಿಗ್ಗೆ ತೀವ್ರವಾಗಿ ಕೆಮ್ಮು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಕ್ಷಣ ವೈದ್ಯರು ಅವರನ್ನು ನೇರವಾಗಿ ಹೆರಿಗೆ ಕೊಠಡಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಹಠಾತ್‌ ಆಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರಿಗೆ ಸಿಜೇರಿಯನ್‌ ಮಾಡಿಸಲು ವೈದ್ಯರು ಮುಂದಾದರು. ಅಷ್ಟೊತ್ತಿಗೆಗಾಲೇ ಹೆರಿಗೆ ನೋವು ಕಾಣಿಸಿಕೊಂಡಿತು. ಒಂದು ಮಗು ಹೊಟ್ಟೆಯಲ್ಲಿಯೇ ಮೃತಪ‍ಟ್ಟಿತು. ಆ ಹೊತ್ತಿಗೆ ತಾಯಿಯೂ ಮೃತಪಟ್ಟರು’ ಎಂದು ರಘುರಾಮ್‌ ಅವರು ತಿಳಿಸಿದರು.

‘ಈ ಸಂದರ್ಭದಲ್ಲಿ ನಮ್ಮ ಎಲ್ಲ ಸಿಬ್ಬಂದಿ ಇದ್ದರು. ನಾನು ಕೂಡ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದೆ. ಆದರೆ ಅಷ್ಟೊತ್ತಿಗೆ ಎಲ್ಲವೂ ಮುಗಿದು ಹೋಗಿತ್ತು’ ಎಂದು ಅವರು ಮಾಹಿತಿ ನೀಡಿದರು.

‘ಮತ್ತೊಂದು ಮಗುವಿನ ಸ್ಥಿತಿಯೂ ಚಿಂತಾಜನಕವಾಗಿತ್ತು. ವೈದ್ಯರು ಮಗುವನ್ನು ಉಳಿಸಲು ಎಲ್ಲ ಪ್ರಯತ್ನ ಮಾಡಿದರು. ಆದರೆ, ಪ್ರಯೋಜನವಾಗಲಿಲ್ಲ. ಸಂಜೆ ಅದು ಕೂಡ ಮೃತಪಟ್ಟಿತು’ ಎಂದು ಅವರು ಹೇಳಿದರು.

‘ತಾಯಿಯ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ, ಅವರು ಥೈರಾಯ್ಡ್‌ ಸಮಸ್ಯೆಯಿಂದ ಬಳಲುತ್ತಿದ್ದುದರಿಂದ ಹೃದಯ ದುರ್ಬಲಗೊಂಡಿರಬಹುದು. ಗರ್ಭದಲ್ಲಿ ಅವಳಿ ಶಿಶುಗಳು ಇರುವುದರಿಂದ ಒತ್ತಡವೂ ಜಾಸ್ತಿಯಾಗಿ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂಬುದು ನಮ್ಮ ಅನುಮಾನ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 2

  Frustrated
 • 0

  Angry

Comments:

0 comments

Write the first review for this !