ಶನಿವಾರ, ನವೆಂಬರ್ 16, 2019
21 °C

ಜಿಂಬಾಬ್ವೆಗೆ ಮುಗಾಬೆ ಪಾರ್ಥಿವ ಶರೀರ

Published:
Updated:
Prajavani

ಸಿಂಗಪುರ: ಜಿಂಬಾಬ್ವೆ ಮಾಜಿ ಅಧ್ಯಕ್ಷ ರಾಬರ್ಟ್‌ ಮುಗಾಬೆ ಅವರ ಮೃತದೇಹವನ್ನು ಬುಧವಾರ ಸಿಂಗಪುರದಿಂದ ಜಿಂಬಾಬ್ವೆಗೆ ಕೊಂಡೊಯ್ಯಲಾಯಿತು. 

ಕಳೆದ ಶುಕ್ರವಾರ ತೀವ್ರ ಅನಾರೋಗ್ಯದಿಂದ ಸಿಂಗಪುರದ ಆಸ್ಪತ್ರೆಯಲ್ಲಿ ಮುಗಾಬೆ ನಿಧನರಾಗಿದ್ದರು.

ಬ್ರಿಟನ್‌ ಆಡಳಿತದಿಂದ ಜಿಂಬಾಬ್ವೆ ಸ್ವಾತಂತ್ರ್ಯ ಪಡೆದ ಬಳಿಕ 2017ರವರೆಗೆ 37 ವರ್ಷಗಳ ಕಾಲ ಮುಗಾಬೆ ಆಡಳಿತ ನಡೆಸಿದ್ದರು. ಮೃತದೇಹವನ್ನು ಕೊಂಡೊಯ್ಯಲು ಜಿಂಬಾಬ್ವೆಉಪಾಧ್ಯಕ್ಷ ಕೆಂಬೊ ಮೊಹದಿ ಅವರಿದ್ದ ನಿಯೋಗ ಮಂಗಳವಾರ ಸಿಂಗಪುರಕ್ಕೆ ಆಗಮಿಸಿತ್ತು.  ಬುಧವಾರ ಬೆಳಗ್ಗೆ ಪೊಲೀಸ್‌ ಬೆಂಗಾವಲಲ್ಲಿ ವಿಮಾನ ನಿಲ್ದಾಣದವರೆಗೆ ಮೃತದೇಹವನ್ನು ಕೊಂಡೊಯ್ಯಲಾಯಿತು. ಶನಿವಾರ ರಾಷ್ಟ್ರೀಯ ಕ್ರೀಡಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. 

 

ಪ್ರತಿಕ್ರಿಯಿಸಿ (+)