ನ್ಯೂಜಿಲೆಂಡ್‌ನ ಮಸೀದಿ ಮೇಲೆ ಗುಂಡಿನ ದಾಳಿ:49 ಸಾವು,ಬಾಂಗ್ಲಾ ಕ್ರಿಕೆಟ್ ತಂಡ ಪಾರು

ಶನಿವಾರ, ಮಾರ್ಚ್ 23, 2019
31 °C

ನ್ಯೂಜಿಲೆಂಡ್‌ನ ಮಸೀದಿ ಮೇಲೆ ಗುಂಡಿನ ದಾಳಿ:49 ಸಾವು,ಬಾಂಗ್ಲಾ ಕ್ರಿಕೆಟ್ ತಂಡ ಪಾರು

Published:
Updated:

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ದಕ್ಷಿಣ ಐಲೆಂಡ್ ಹಾಗೂ ಕ್ರೈಸ್ಟ್ಚರ್ಚ್ ನಗರದಲ್ಲಿ ಬಂದೂಕುಧಾರಿಯೊಬ್ಬ ಕ್ಕಿಕ್ಕಿರಿದ ಮಸೀದಿಯತ್ತ ಗುಂಡಿನ ದಾಳಿ ನಡೆಸಿದ್ದು, 49 ಜನ ಮೃತಪಟ್ಟಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಬಾಂಗ್ಲಾ ಕ್ರಿಕೆಟ್ ತಂಡದ ಆಟಗಾರರು ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿದ್ದಾರೆ.

ಎರಡು ಮಸೀದಿಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 49 ಜನ ಸಾವಿಗೀಡಾಗಿದ್ದಾರೆ ಎಂದು ನ್ಯೂಜಿಲೆಂಡ್‌ನ ಪೊಲೀಸ್‌ ಕಮಿಷನರ್‌ ಮೈಕ್‌ ಬುಷ್‌ ತಿಳಿಸಿದ್ದಾರೆ. ಘಟನೆಯ ಪೂರ್ಣವಿವರಗಳನ್ನು ರಾತ್ರಿ 9ಕ್ಕೆ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮಸೀದಿ ಸಮೀಪ 6 ಮಂದಿ ಮೃತಪಟ್ಟಿದ್ದಾಗಿ ನ್ಯೂಜಿಲೆಂಡ್‌ ಮಾಧ್ಯಮಗಳು ವರದಿ ಮಾಡಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೊಂದು ಭಯೋತ್ಪಾದನಾ ದಾಳಿ ಎನ್ನಲಾಗುತ್ತಿದೆ. ಜನರು ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ನಗರದಲ್ಲಿನ ಯಾವುದೇ ಮಸೀದಿಗೂ ಹೋಗದಂತೆ ಇಲ್ಲಿನ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ದಾಳಿಗೆ ಸಾಕಷ್ಟು ಮಂದಿ ಖಂಡನೆ ವ್ಯಕ್ತವಾಗಿದೆ. 

ಮಧ್ಯಾಹ್ನದ ಪ್ರಾರ್ಥನೆ ಸಮಯದಲ್ಲಿ ಈ ದಾಳಿ ನಡೆದಿದೆ. ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವಣದ ಟೆಸ್ಟ್ ಪಂದ್ಯಕ್ಕಾಗಿ ಇಲ್ಲಿಗೆ ಬಂದಿದ್ದ ಬಾಂಗ್ಲಾದೇಶ ತಂಡ, ಹ್ಯಾಗ್ಲೆ ಓವಲ್‌ ಕ್ರೀಡಾಂಗಣದ ಸಮೀಪದಲ್ಲೇ ಇದ್ದ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದರು. ಗುಂಡಿನ ದಾಳಿಯನ್ನು ಕಂಡು ಅಲ್ಲಿಂದ ಓಡಿದ್ದಾರೆ.

‘ಬಂಧೂಕುದಾರಿಯಿಂದ ತಂಡ ಎಲ್ಲರೂ ಪಾರಾಗಿದ್ದೇವೆ. ಅದೊಂದು ಭಯಾನಕ ಅನುಭವ ಮತ್ತು ನಮಗಾಗಿ ಪ್ರಾರ್ಥಿಸಿ’ ಎಂದು ಬಾಂಗ್ಲಾದೇಶ ತಂಡದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಟ್ಟಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಮಸೀದಿ ಒಳಗೆ ಹೋಗಬೇಕೆನ್ನುವಾಗ ಶೂಟೌಟ್‌ ನಡೆಸಿದರು. ತಕ್ಷಣವೇ ಅಲ್ಲಿಂದ ತಪ್ಪಿಸಿಕೊಂಡೆವು. ಅಲ್ಲಾನೇ ನಮ್ಮನ್ನು ಕಾಪಾಡಿದ್ದಾನೆ’ ಎಂದು ಮತ್ತೊಬ್ಬ ಆಟಗಾರ ಮುಷ್ಫಿಕರ್ ರಹೀಂ ಟ್ವೀಟ್‌ ಮಾಡಿದ್ದಾರೆ.

‘ಆಟಗಾರರು ಸುರಕ್ಷಿತವಾಗಿದ್ದಾರೆ. ಆದರೆ, ಎಲ್ಲರಲ್ಲಿಯೂ ಭಯ ಆವರಿಸಿದೆ. ಸದ್ಯ ಹೋಟೆಲ್‌ನಲ್ಲಿಯೇ ಇರುವಂತೆ ಆಟಗಾರರಿಗೆ ತಿಳಿಸಿದ್ದೇವೆ’ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ವಕ್ತಾರ ಜಲಾಲ್ ಯೂನಸ್‌ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 6

  Sad
 • 2

  Frustrated
 • 9

  Angry

Comments:

0 comments

Write the first review for this !