ಮಂಗಳವಾರ, ನವೆಂಬರ್ 12, 2019
20 °C

‘ಬುದ್ಧಿವಂತ ಕಾರು’ ಉಪನ್ಯಾಸ

Published:
Updated:

ಬೆಂಗಳೂರು: ವಾಹನ ಚಲಾಯಿಸುವಾಗ ಚಾಲಕನಿಗೆ ನಿದ್ದೆ ಬಂದರೆ ಅಥವಾ ಓರೆಕೋರೆಯಾಗಿ ಚಲಿಸುವ ಬಗ್ಗೆ ಬುದ್ಧಿವಂತ ವಾಹನ ಕೂಡಲೇ ಚಾಲಕ
ನನ್ನು ಎಚ್ಚರಿಸುವಂತಿದ್ದರೆ ಹೇಗೆ?

‘ಚಾಲಕನಿಗೆ ನೆರವಾಗುವ ಅತ್ಯಾಧುನಿಕ ವ್ಯವಸ್ಥೆ ಮತ್ತು ಸ್ವಯಂಚಾಲಿತ ವಾಹನಗಳು’ (ಅಡಾಸ್‌) ತಂತ್ರಜ್ಞಾನ ಪ್ರಯಾಣವನ್ನು ಮತ್ತಷ್ಟು ಸಲೀಸು ಮಾಡಬಲ್ಲುದು. ಇದೇ 8ರಂದು ಬೆಳಿಗ್ಗೆ 11.30ಕ್ಕೆ ಏರ್ಪಡಿಸಿರುವ ‘ಮುನ್ನೋಟ ಮಾತುಕತೆ’ಯಲ್ಲಿ ನಗರದ ‘ಮಿಸ್ತ್ರಾಲ್ ಸಲ್ಯೂಷನ್ಸ್’ ಸಾಫ್ಟ್‌ವೇರ್ ಸಂಸ್ಥೆಯ ಸ್ಥಾಪಕ ರಾಜೀವ್ ರಾಮಚಂದ್ರ ಈ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲೇ ತಿಳಿಸಲಿದ್ದಾರೆ.

ಚಾಲಕನ ನೆರವಿಲ್ಲದೇ ಓಡಿಸಬಹುದಾದ ಸ್ವಯಂಚಾಲಿತ ಕಾರುಗಳು ನಮ್ಮ ರಸ್ತೆಗಳಲ್ಲಿ ಓಡಾಡಿದರೆ ಪರಿಸ್ಥಿತಿ ಹೇಗಿರಬಹುದು ಎಂಬ ಬಗ್ಗೆಯೂ ಅವರು ಮಾತನಾಡಲಿದ್ದಾರೆ.

ವಿಳಾಸ: ‘ಮುನ್ನೋಟ’ ಸೌತ್‌ ಅವೆನ್ಯೂ ಕಾಂಪ್ಲೆಕ್ಸ್‌, ಡಿವಿಜಿ ರಸ್ತೆ, ನಾಗಸಂದ್ರ ವೃತ್ತದ ಬಳಿ, ಬಸವನಗುಡಿ

 

ಪ್ರತಿಕ್ರಿಯಿಸಿ (+)