ನಿಡಗುಂದಿ: ಯುವಕನ ಮುಖ ಜಜ್ಜಿ ಕೊಲೆ

7

ನಿಡಗುಂದಿ: ಯುವಕನ ಮುಖ ಜಜ್ಜಿ ಕೊಲೆ

Published:
Updated:

ನಿಡಗುಂದಿ: ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮೀಪದ ಸ್ಮಶಾನದಲ್ಲಿ ಗುರುವಾರ ಹಾಡಹಗಲೇ ಯುವಕನೊಬ್ಬನ ಮುಖದ ಮೇಲೆ ದೊಡ್ಡ ಕಲ್ಲು ಎಸೆದು, ಕೊಲೆ ಮಾಡಲಾಗಿದೆ.

ಪಟ್ಟಣದ ನಿವಾಸಿ ಮಹಾಂತೇಶ ಹನುಮಂತಪ್ಪ ಗೌಡರ (32) ಕೊಲೆಯಾದ ಯುವಕ.

ಈತ ಇಲ್ಲಿನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವಿವಾಹಿತನಾಗಿದ್ದ ಯುವಕನ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಗುರುವಾರ ಮಧ್ಯಾಹ್ನ ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಎಂ.ಎನ್‌.ಶಿರಹಟ್ಟಿ, ಪಿಎಸ್‌ಐ ಬಸವರಾಜ ಬಿಸನಕೊಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಸಂಜೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದರು.

ಕೊಲೆ ಮಾಡಿದವರನ್ನು ಒಂದೆರೆಡು ದಿನಗಳಲ್ಲಿ ಪತ್ತೆ ಮಾಡಲಾಗುವುದು ಎಂದು ಸಿಪಿಐ ಎಂ.ಎನ್‌.ಶಿರಹಟ್ಟಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !