ಕುಡಿದ ಮತ್ತಿನಲ್ಲಿ ಜಗಳ; ಕೊಲೆಯಲ್ಲಿ ಅಂತ್ಯ

7

ಕುಡಿದ ಮತ್ತಿನಲ್ಲಿ ಜಗಳ; ಕೊಲೆಯಲ್ಲಿ ಅಂತ್ಯ

Published:
Updated:

ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳ, ಒಬ್ಬಾತನ ಕೊಲೆಯಲ್ಲಿ ಅಂತ್ಯವಾಗಿದೆ.

ಬ್ಯಾಟರಾಯಪುರ ಠಾಣೆ ವ್ಯಾಪ್ತಿಯ ಹೊಸಗುಡ್ಡದಹಳ್ಳಿ ಬಳಿ ವರುಣ್ ಎಂಬುವರನ್ನು ಕೊಲೆ ಮಾಡಲಾಗಿದೆ. ಆತನ ಸ್ನೇಹಿತ ರವಿ ಎಂಬಾತನೇ ಕೃತ್ಯ ಎಸಗಿರುವ ಅನುಮಾನವಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ.

‘ಸ್ಥಳೀಯ ಸಿಮೆಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವರುಣ್ ಹಾಗೂ ಆರೋಪಿ ರವಿ, ಹಲವು ವರ್ಷಗಳಿಂದ ಒಂದೇ ಕಾಲೊನಿಯಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ರವಿ, ಕೆಂಗೇರಿ ಉಪನಗರಕ್ಕೆ ಮನೆ ಬದಲಾಯಿಸಿದ್ದ. ಮೂರು ದಿನಗಳ ಹಿಂದಷ್ಟೇ ಹಣಕಾಸಿನ ವಿಚಾರಕ್ಕಾಗಿ ಅವರಿಬ್ಬರ ನಡುವೆ ಜಗಳವಾಗಿತ್ತು. ಪರಸ್ಪರ ಹೊಡೆದಾಡಿಕೊಂಡಿದ್ದರು’ ಎಂದು ಬ್ಯಾಟರಾಯಪುರ ಪೊಲೀಸರು ಹೇಳಿದರು.

‘ಭಾನುವಾರ ರಾತ್ರಿ ವರುಣ್‌ಗೆ ಕರೆ ಮಾಡಿದ್ದ ರವಿ, ‘ನನ್ನಿಂದ ತಪ್ಪಾಗಿದೆ. ಹೊಸಗುಡ್ಡದಹಳ್ಳಿ ಬಳಿಯ ಬಾರ್ ಬಳಿ ಬಾ ಮಾತಾಡೋಣ’ ಎಂದು ಹೇಳಿ ಕರೆಸಿಕೊಂಡಿದ್ದ. ಇಬ್ಬರೂ ಜೊತೆಯಾಗಿ ಮದ್ಯ ಕುಡಿದು ಬಾರ್‌ನಿಂದ ಹೊರಗೆ ಬಂದು ನಡೆದುಕೊಂಡು ಮನೆಯತ್ತ ಹೊರಟ್ಟಿದ್ದರು‘.

‘ರಸ್ತೆಯಲ್ಲಿ ಅವರಿಬ್ಬರ ನಡುವೆ ಪುನಃ ಜಗಳ ಶುರುವಾಗಿತ್ತು. ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಅದೇ ವೇಳೆ ರವಿ, ಚಾಕುವಿನಿಂದ ವರುಣ್ ಅವರ ಎದೆಭಾಗಕ್ಕೆ ಮೂರ್ನಾಲ್ಕು ಬಾರಿ ಇರಿದು ಓಡಿ ಹೋಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ವರುಣ್‌ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದು ಪೊಲೀಸರು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !