ಎದೆಗೆ ಇರಿದು ಕೊಂದಿದ್ದವರ ಬಂಧನ

ಶುಕ್ರವಾರ, ಏಪ್ರಿಲ್ 26, 2019
24 °C

ಎದೆಗೆ ಇರಿದು ಕೊಂದಿದ್ದವರ ಬಂಧನ

Published:
Updated:
Prajavani

ಬೆಂಗಳೂರು: ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಆರ್.ಭರತ್  (20) ಎಂಬಾತನನ್ನು ಡ್ರ್ಯಾಗರ್‌ನಿಂದ ಇರಿದು ಕೊಂದಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

‘ಮತ್ತಿಕೆರೆಯ ವಿನೋದ್ ಸಾಗರ್ ಅಲಿಯಾಸ್ ವಿನು (20) ಹಾಗೂ ಜ್ಞಾನಭಾರತಿ ಮಾರುತಿನಗರದ ಆಕಾಶ್ ಅಲಿಯಾಸ್ ಕೆಂಚ (22) ಬಂಧಿತರು. ಇನ್ನೊಬ್ಬ ಆರೋಪಿ ನಾಗರಾಜ್ ತಲೆಮರೆಸಿಕೊಂಡಿದ್ದಾನೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.

‘ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಭರತ್, ಏಪ್ರಿಲ್ 6ರಂದು ಹೊರಗೆ ಬಂದಿದ್ದ. ಮರುದಿನ ರಾತ್ರಿ ಸ್ನೇಹಿತರನ್ನು ಭೇಟಿಯಾಗಲು ಹೋಗಿದ್ದ. ಅದೇ ವೇಳೆ ಭರತ್‌ಗೂ ಆರೋಪಿಗಳಿಗೂ ಜಗಳವಾಗಿತ್ತು. ಬಿಯರ್‌ ಬಾಟಲಿ ಹಿಡಿದು ಹೊಡೆದಾಡಿದ್ದರು. ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು’ ಎಂದರು.

‘ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಆರೋಪಿಗಳು, ಏಪ್ರಿಲ್ 12ರಂದು ರಾತ್ರಿ 8.30ರ ಸುಮಾರಿಗೆ ಕಾಳಿದಾಸ್ ವೃತ್ತದಲ್ಲಿ ಭರತ್‌ನನ್ನು ಅಡ್ಡಗಟ್ಟಿದ್ದರು. ಡ್ರ್ಯಾಗರ್‌ನಿಂದ ಎದೆಗೆ ಇರಿದು ಕೊಂದಿದ್ದರು’ ಎಂದು ತಿಳಿಸಿದರು.

‘ಬಂಧಿತ ವಿನೋದ್ ಮೇಲೆ ನಗರದ ಹಲವು ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ. ಇನ್ನೊಬ್ಬ ಆರೋಪಿ ಆಕಾಶ್, ಕೆ.ಪಿ.ಅಗ್ರಹಾರ ಠಾಣೆಯ ರೌಡಿ ಶೀಟರ್’ ಎಂದು ಅವರು ಹೇಳಿದರು. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !