ಸ್ನೇಹಿತೆಯ ಕೊಂದು ಅಮಾಯಕನಂತೆ ನಟಿಸಿದ್ದ

ಸೋಮವಾರ, ಜೂನ್ 24, 2019
26 °C
ಮರಣೋತ್ತರ ಪರೀಕ್ಷೆಯಿಂದ ಸಿಕ್ಕಿಬಿದ್ದ ಆರೋಪಿ

ಸ್ನೇಹಿತೆಯ ಕೊಂದು ಅಮಾಯಕನಂತೆ ನಟಿಸಿದ್ದ

Published:
Updated:

ಬೆಂಗಳೂರು: ರೂಪೇನ್ ಅಗ್ರಹಾರ ಬಳಿಯ ಎನ್‌.ಜಿ.ಆರ್ ಬಡಾವಣೆಯಲ್ಲಿ ನಡೆದಿದ್ದ ಭಾರತಿ (23) ಎಂಬುವರ ಕೊಲೆ ಪ್ರಕರಣ ಸಂಬಂಧ, ಅವರ ಸ್ನೇಹಿತ ಸೆಲ್ವ ಎಂಬಾತನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತಿ, ಮೇ 10ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಮೇ 16ರಂದು ಮರಣೋತ್ತರ ಪರೀಕ್ಷೆಯ ವರದಿ ಬಂದಾಗ, ಕೊಲೆ ಎಂಬುದು ತಿಳಿಯಿತು. ಸ್ನೇಹಿತ ಸೆಲ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಪೊಲೀಸರು ಹೇಳಿದರು.

’ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಯುವತಿಗೂ ಹಾಗೂ ಆರೋಪಿ ಸೆಲ್ವನಿಗೂ ಪರಿಚಯವಾಗಿತ್ತು. ತನಗೆ ಮದುವೆಯಾಗಿ ಮಕ್ಕಳಿದ್ದರೂ ಎರಡನೇ ಮದುವೆಯಾಗುವಂತೆ ಆತ ಪೀಡಿಸುತ್ತಿದ್ದ. ಇತ್ತೀಚೆಗೆ ಬೇರೊಬ್ಬನ ಹುಡುಗನ ಜೊತೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಅದನ್ನು ಸಹಿಸದ ಆರೋಪಿ, ಈ ಕೊಲೆ ಮಾಡಿದ್ದಾನೆ’ ಎಂದು ತಿಳಿಸಿದರು.

ಅಮಾಯಕನಂತೆ ನಟನೆ: ‘ಯುವತಿಯ ಕೊಠಡಿಗೆ ನುಗ್ಗಿದ್ದ ಆರೋಪಿ, ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆ ಮಾಡಿದ್ದ. ಯಾರಿಗೂ ಅನುಮಾನ ಬರಬಾರದೆಂದು, ಕೋಲು ಬಳಸಿ ಕಿಟಕಿಯ ಮೂಲಕ ಬಾಗಿಲಿನ ಒಳಗಿನ ಚಿಲಕವನ್ನು ಹಾಕಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು. 

‘ಯುವತಿಯನ್ನು ಮದುವೆಯಾಗಬೇಕಾದ ಹುಡುಗ, ಮೇ 11ರಂದು ಬೆಳಿಗ್ಗೆ ಮನೆ ಹತ್ತಿರ ಹೋದಾಗ ಬಾಗಿಲು ಹಾಕಿತ್ತು. ಕಿಟಕಿಯಲ್ಲಿ ನೋಡಿದಾಗ ಬೆಡ್‌ ಮೇಲೆ ಮೃತದೇಹವಿತ್ತು. ಆತ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ಬಾಗಿಲಿನ ಬೀಗ ಮುರಿದು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು’ ಎಂದರು.

‘ಬಾಗಿಲು ಒಳಗಿನಿಂದ ಚಿಲಕ ಹಾಕಿದ್ದರಿಂದ ಇದೊಂದು ಆತ್ಮಹತ್ಯೆ ಇರಬಹುದು ಎಂಬ ಅನುಮಾನವಿತ್ತು. ಮರಣೋತ್ತರ ಪರೀಕ್ಷೆ ವರದಿ ಬಂದಾಗ ಆಶ್ಚರ್ಯವಾಯಿತು. ಯುವತಿಯ ಮೊಬೈಲ್‌ಗೆ ಬಂದ ಕರೆಗಳ ವಿವರ ಸಂಗ್ರಹಿಸಿದಾಗ, ಸೆಲ್ವನ ಬಗ್ಗೆ ಅನುಮಾನ ಬಂತು. ಆರಂಭದಲ್ಲಿ ಅಮಾಯಕನಂತೆ ನಟಿಸಿದ್ದ ಆತ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ’ ಎಂದು ಪೊಲೀಸರು ವಿವರಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !