ಪಾಲಿಕೆ ಸದಸ್ಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

7

ಪಾಲಿಕೆ ಸದಸ್ಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

Published:
Updated:
Deccan Herald

ಬೆಂಗಳೂರು: ನಾಲ್ವರು ದುಷ್ಕರ್ಮಿಗಳು ಕೆ.ಜಿ.ಹಳ್ಳಿಯ ಬಿಬಿಎಂಪಿ ಕಚೇರಿಗೆ ನುಗ್ಗಿ ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಜೆ.ವಿಲಿಯಂ (40) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೀವ್ರ ಗಾಯಗೊಂಡಿರುವ ಪಾಲಿಕೆ ಸದಸ್ಯ ವಿಲಿಯಂ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಮಂಗಳವಾರ ರಾತ್ರಿ 7.30 ಗಂಟೆಯಲ್ಲಿ ವಿಲಿಯಂ ಅವರು ಕೆ.ಜಿ.ಹಳ್ಳಿಯ ಪಾಲಿಕೆ ಕಚೇರಿಯಲ್ಲಿದ್ದರು. ಅವರು ಕಚೇರಿಯಿಂದ ಹೊರ ಬರುವುದನ್ನೇ ಆರೋಪಿಗಳು ಕಾಯುತ್ತಿದ್ದರು. ಹೆಲ್ಮೆಟ್‌ ಹಾಕಿಕೊಂಡಿದ್ದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ತಲೆಗೆ ಹೊಡೆದಿದ್ದಾರೆ. ನಂತರ ಕೈಗೆ ಚಾಕುವಿನಿಂದ ಇರಿದಿದ್ದಾರೆ. ಅವರನ್ನು ರಕ್ಷಿಸಲು ಸ್ಥಳೀಯರು ಬರುವುದನ್ನು ಗಮನಿಸಿದ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ’ ಎಂದು ‍ಪೊಲೀಸರು ಹೇಳಿದರು.

ವಿಲಿಯಂ ಅವರ ನೂರಾರು ಬೆಂಬಲಿಗರು ಅವರ ನಿವಾಸದ ಮುಂದೆ ಬುಧವಾರ ಬೆಳಿಗ್ಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕೃತ್ಯ ಎಸಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಇದರಿಂದ ಅಲ್ಲಿ ಉದ್ವಿಗ್ನ ವಾತಾರಣ ನಿರ್ಮಾಣವಾಗಿತ್ತು. ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸುವ ಭರವಸೆ ಕೊಡುತ್ತಿದ್ದಂತೆಯೇ ಕಾರ್ಯಕರ್ತರು ಪ್ರತಿಭಟನೆ ವಾಪಸ್‌ ಪಡೆದರು.

‘ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ’ ಎಂದು ಡಿಸಿಪಿ ರಾಹುಲ್‌ ಕುಮಾರ್‌ ಹೇಳಿದರು.

ಬರಹ ಇಷ್ಟವಾಯಿತೆ?

  • 2

    Happy
  • 2

    Amused
  • 1

    Sad
  • 0

    Frustrated
  • 1

    Angry

Comments:

0 comments

Write the first review for this !