ದಾರಿ ಬಿಡದಿದ್ದಕ್ಕೆ ಕೊಲೆ: ಮೂವರ ಸೆರೆ

7

ದಾರಿ ಬಿಡದಿದ್ದಕ್ಕೆ ಕೊಲೆ: ಮೂವರ ಸೆರೆ

Published:
Updated:

ಬೆಂಗಳೂರು: ಮೇರಿ ಮಾತಾ ಉತ್ಸವಕ್ಕೆ ಹೋಗಲು ದಾರಿ ಬಿಡಲಿಲ್ಲವೆಂಬ ಕಾರಣಕ್ಕೆ ಇಮ್ರಾನ್ ಎಂಬುವರನ್ನು ಕೊಲೆ ಮಾಡಿದ್ದ ಆರೋಪದಡಿ ಮೂವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ರಾಜು, ಸುಭಾಷ್ ಮತ್ತು ರಾಜೇಶ್ ಬಂಧಿತರು. 

‘ಬಾಣಸವಾಡಿಯ ಜಾನಕಿರಾಮ್ ಬಡಾವಣೆಯಲ್ಲಿ ಭಾನುವಾರ ರಾತ್ರಿ ಮೇರಿ ಮಾತಾ ಉತ್ಸವ ಆಯೋಜಿಸಲಾಗಿತ್ತು. ಅದರಲ್ಲಿ ಪಾಲ್ಗೊಳ್ಳಲು ಆರೋಪಿಗಳು ಹೊರಟಿದ್ದ ವೇಳೆ, ಇಮ್ರಾನ್ ದಾರಿಯಲ್ಲಿ ನಿಂತುಕೊಂಡಿದ್ದರು. ದಾರಿ ಬಿಡುವ ವಿಚಾರವಾಗಿ ಅವರ ನಡುವೆ ಜಗಳ ಶುರುವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಆರೋಪಿಗಳು, ಇಮ್ರಾನ್‌ರ ಎದೆಗೆ ಚಾಕುವಿನಿಂದ ಇರಿದಿದ್ದರು. ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ವಿವರಿಸಿದರು.

‘ಗಾಂಜಾ ಅಮಲಿನಲ್ಲಿ ಆರೋಪಿಗಳು, ಕೃತ್ಯ ಎಸಗಿದ್ದಾರೆ. ಘಟನೆ ನಡೆದ ಎರಡೇ ಗಂಟೆಯಲ್ಲೇ ಮೂವರನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !