ಗುರುವಾರ , ಡಿಸೆಂಬರ್ 12, 2019
27 °C

ಅನಾರೋಗ್ಯ: ಪಾಕ್‌ಗೆ ಮುಷರಫ್‌ ಸದ್ಯ ಮರಳುವುದಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರು ಅನಾರೋಗ್ಯದಿಂದ ದುರ್ಬಲರಾಗುತ್ತಿದ್ದು, ದೇಶದ್ರೋಹ ಪ್ರಕರಣದ ವಿಚಾರಣೆಗೆ ಹಾಜರಾಗಲು ಪಾಕಿಸ್ತಾನಕ್ಕೆ ಸದ್ಯ ಮರಳುವುದಿಲ್ಲ ಎಂದು ಅವರ ಪಕ್ಷದ ಮುಖಂಡರು ತಿಳಿಸಿದ್ದಾರೆ.

75 ವರ್ಷದ ಮುಷರಫ್‌ ಅವರು 2016ರಿಂದಲೂ ದುಬೈನಲ್ಲಿ ನೆಲೆಸಿದ್ದಾರೆ. 2007ರಲ್ಲಿ ಸಂವಿಧಾನ ರದ್ದುಗೊಳಿಸಿ, ತುರ್ತು ಪರಿಸ್ಥಿತಿ ಹೇರಿದ ಆರೋಪದಲ್ಲಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು.

‘ತಮ್ಮ ರೋಗದ ಚಿಕಿತ್ಸೆಗಾಗಿ ಮುಷರಫ್ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಲಂಡನ್‌ಗೆ ಭೇಟಿ ನೀಡುತ್ತಿದ್ದಾರೆ’ ಎಂದು ಆಲ್‌ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ (ಎಪಿಎಂಎಲ್‌) ಮುಖಂಡ ಮುಹಮ್ಮದ್‌ ಅಮ್ಜದ್‌ ಹೇಳಿರುವುದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.

‘ಮುಷರಫ್‌ ಅವರು ಯಾವ ರೋಗದಿಂದ ಬಳಲುತ್ತಿದ್ದಾರೆ ಎಂಬುದನ್ನು ನಾವು ದೇಶದ ಜನರಿಗೆ ತಿಳಿಸಲಾರೆವು ಆದರೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಅವರ ರೋಗದ ದಾಖಲೆಗಳನ್ನು ಸಲ್ಲಿಸಲಿದ್ದೇವೆ’ ಎಂದೂ ಅವರು ಹೇಳಿರುವುದಾಗಿ ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ವಿಚಾರಣೆಯಿಂದ ಮುಕ್ತಗೊಳಿಸಿದರೆ ಹಾಗೂ ಚಿಕಿತ್ಸೆಗಾಗಿ ದೇಶ ಬಿಟ್ಟು ತೆರಳಲು ಅನುಮತಿ ನೀಡುವ ಭರವಸೆ ನೀಡಿದರೆ ಮುಷರಫ್‌ ಪಾಕಿಸ್ತಾನಕ್ಕೆ ಮರಳುವರು’ ಎಂದು ಮುಹಮ್ಮದ್‌ ಹೇಳಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು