ಮುಶ್ರೀಫ್‌ ಕಾಲಿಗೆ ಬಿದ್ದವರು ನಾಲಾಯಕರು..!

7
ಉಪ ಮೇಯರ್‌ ಗೋಪಾಲ ಘಟಕಾಂಬಳೆ ಹೆಸರು ಪ್ರಸ್ತಾಪಿಸದೆ ಟೀಕಿಸಿದ ಶಾಸಕ ಯತ್ನಾಳ

ಮುಶ್ರೀಫ್‌ ಕಾಲಿಗೆ ಬಿದ್ದವರು ನಾಲಾಯಕರು..!

Published:
Updated:

ವಿಜಯಪುರ: ‘ವಿಜಯಪುರ ಮಹಾನಗರ ಪಾಲಿಕೆಯ ವಿಷಯ ಮುಗಿದೋಗಿದ್ದು. ಮುಶ್ರೀಫ್‌ ಕಾಲಿಗೆ ಬಿದ್ದವ ನಾಲಾಯಕ್‌’ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಉಪ ಮೇಯರ್‌ ಗೋಪಾಲ ಘಟಕಾಂಬಳೆ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

‘ಪಕ್ಷದ ನೀತಿ–ನಿಯಮ ಉಲ್ಲಂಘನೆಯಾದ ಕುರಿತಂತೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ಶೀಘ್ರದಲ್ಲೇ ಮತ್ತೊಂದು ಪತ್ರ ಬರೆಯಲಿದ್ದೇನೆ. ಅದರಲ್ಲಿ ಎಲ್ಲಾ ಚಿತ್ರಣವನ್ನು ವಿವರಿಸಲಿರುವೆ’ ಎಂದು ಸೋಮವಾರ ಪತ್ರಕರ್ತರಿಗೆ ತಿಳಿಸಿದರು.

‘ಮುಸ್ಲಿಮರು ಎಂದೆಂದಿಗೂ ಕಾಂಗ್ರೆಸ್‌ಗೆ ಮತ ಹಾಕಲಿದ್ದಾರೆ. ಇದರಲ್ಲಿ ಏನು ವ್ಯತ್ಯಾಸವಾಗಲ್ಲ. ಆದರೂ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಅಲ್ಪಸಂಖ್ಯಾತರ ಓಲೈಕೆಗೆ ಏಕೆ ಮುಂದಾಗುತ್ತಿದ್ದಾರೆ ಎಂಬುದೇ ತಿಳಿಯದು. ಇನ್ನಾದರೂ ಶೋಷಣೆಗೊಳಗಾಗಿದ್ದ ಹಿಂದೂಗಳ ಪರ ಧ್ವನಿ ಎತ್ತಲು ಮುಂದಾಗಲಿ’ ಎಂದು ಬಸನಗೌಡ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !