ಅಬ್ಬರದ ಸಂಗೀತ; ವ್ಯವಸ್ಥಾಪಕ ಬಂಧನ

7

ಅಬ್ಬರದ ಸಂಗೀತ; ವ್ಯವಸ್ಥಾಪಕ ಬಂಧನ

Published:
Updated:

ಬೆಂಗಳೂರು: ಔತಣಕೂಟದಲ್ಲಿ ಅಬ್ಬರದ ಸಂಗೀತ ಬಳಸಿದ್ದ ಆರೋಪದಡಿ ಮೀರನ್ ಕನ್ನಾ ಎಂಬುವರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಅವರು, ಖಾಸಗಿ ಕಂಪನಿಯೊಂದರ ಕಾರ್ಯಕ್ರಮ ಸಂಯೋಜನೆ ವಿಭಾಗದ ವ್ಯವಸ್ಥಾಪಕ. ಯಾವುದೇ ಅನುಮತಿ ಇಲ್ಲದೇ ಅಬ್ಬರದ ಸಂಗೀತ ಬಳಕೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ವಿಠಲ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು. ಮ್ಯಾರಿಯೆಟ್ ಹೋಟೆಲಿನಲ್ಲಿ ಶನಿವಾರ ರಾತ್ರಿ ಔತಣಕೂಟ ಆಯೋಜಿಸಲಾಗಿತ್ತು. ಅಲ್ಲಿಯೇ ಅಬ್ಬರದ ಸಂಗೀತ ಹಚ್ಚಲಾಗಿತ್ತು. ಸಾರ್ವಜನಿಕರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ಸಂಗೀತ ಪರಿಕರಗಳನ್ನು ಜಪ್ತಿ ಮಾಡಲಾಯಿತು’ ಎಂದರು.

‘ಆರೋಪಿಯೇ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರನ್ನೇ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಹೋಟೆಲ್ ವ್ಯವಸ್ಥಾಪಕರಿಗೂ ನೋಟಿಸ್‌ ನೀಡಲಾಗಿದೆ. ಮೀರನ್‌ ಅವರನ್ನು ಸದ್ಯ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !