ವಸ್ತು ಸಂಗ್ರಹಾಲಯಗಳು ಮೌನ ವಿ.ವಿಗಳು: ಸಂಶೋಧಕ ಡಾ.ಆನಂದ ಜೆ.ಕುಲಕರ್ಣಿ

ಮಂಗಳವಾರ, ಜೂನ್ 25, 2019
26 °C

ವಸ್ತು ಸಂಗ್ರಹಾಲಯಗಳು ಮೌನ ವಿ.ವಿಗಳು: ಸಂಶೋಧಕ ಡಾ.ಆನಂದ ಜೆ.ಕುಲಕರ್ಣಿ

Published:
Updated:
Prajavani

ವಿಜಯಪುರ: ‘ವಸ್ತು ಸಂಗ್ರಹಾಲಯಗಳು ಮೌನ ವಿಶ್ವವಿದ್ಯಾಲಯಗಳಿದ್ದಂತೆ’ ಎಂದು ಸಂಶೋಧಕ ಡಾ.ಆನಂದ ಜೆ.ಕುಲಕರ್ಣಿ ಹೇಳಿದರು.

ನಗರದ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ಈಚೆಗೆ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

‘ವಸ್ತು ಸಂಗ್ರಹಾಲಯ ಮನುಷ್ಯನ ಅದ್ಭುತ ಪರಿಕಲ್ಪನೆಯೇ ಸರಿ. ಮಾನವನ ಸಂಗ್ರಹ ಬುದ್ಧಿಯ ಸಾಕಾರ ರೂಪವೇ ವಸ್ತು ಸಂಗ್ರಹಾಲಯಗಳು’ ಎಂದರು.

‘ವಸ್ತು ಸಂಗ್ರಹಾಲಯಗಳು ಮೌನ ವಿಶ್ವವಿದ್ಯಾಲಯವೇ ಆದರೂ ಅವು ಮಾತನಾಡುತ್ತವೆ. ಅದನ್ನು ಆಲಿಸುವ ಕರ್ಣಗಳು ನಮ್ಮಲ್ಲಿರಬೇಕು. ಇತಿಹಾಸ ಶ್ರದ್ಧೆಯ ಕರ್ಣಗಳಿದ್ದರೆ ನಿಜಕ್ಕೂ ವಸ್ತು ಸಂಗ್ರಹಾಲಯಗಳು ಇತಿಹಾಸ ರೋಚಕ ಕಥೆಯನ್ನು ಹೇಳುತ್ತವೆ’ ಎಂದರು.

‘ವಿಜಯಪುರದ ಗೋಳಗುಮ್ಮಟ, ಬಾರಾ ಕಮಾನ್, ಇಬ್ರಾಹಿಂ ರೋಜಾದಂತಹ ಸ್ಮಾರಕಗಳನ್ನಾದರೂ ಅಂತರರಾಷ್ಟ್ರೀಯ ಸ್ಮಾರಕಗಳಾಗಿ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದರು.‌

‘ಆನಂದ ಮಹಲ್‌ನಲ್ಲಿ ಇನ್ನೊಂದು ವಸ್ತು ಸಂಗ್ರಹಾಲಯ ನಿರ್ಮಾಣವಾಗಬೇಕಿದೆ. ಆದಿಲ್‌ಶಾಹಿ ಕಾಲದ ಪೇಂಟಿಂಗ್ ಪ್ರದರ್ಶಿಸಲು ಅತ್ಯಂತ ಸೂಕ್ತ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳನ್ನು ಸ್ಥಳಾಂತರಿಸಿ ಪುರಾತತ್ವ ಸ್ಮಾರಕಗಳನ್ನು ಜನರು ನೋಡುವ ಅವಕಾಶ ಕಲ್ಪಿಸುವ ದಿಸೆಯಲ್ಲಿ ಪುರಾತತ್ವ ಇಲಾಖೆ ಗಂಭೀರವಾಗಿ ಹೆಜ್ಜೆ ಇಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ವಿಜಯಪುರದ ವಸ್ತು ಸಂಗ್ರಹಾಲಯ ಒಂದು ಅಪರೂಪದ ಹಾಗೂ ಮಹತ್ವದ ವಸ್ತು ಸಂಗ್ರಹಾಲಯ. ಹತ್ತಾರು ವೈವಿಧ್ಯಮಯ ಹಾಗೂ ಇತಿಹಾಸ ದೃಷ್ಟಿಯಿಂದ ಮಹತ್ವದ ದಾಖಲೆ, ಕುರುಹುಗಳು ಇಲ್ಲಿರುವುದು ಹೆಮ್ಮೆಯ ಸಂಗತಿ’ ಎಂದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿವೃತ್ತ ಉಪ ಅಧೀಕ್ಷಕ ಕೆ.ವಿ.ರಾವ್ ಮಾತನಾಡಿದರು. ‘ಹಿಂದಿನ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ ರಾಜಮನೆತನಗಳ ಸಂಸ್ಕೃತಿ, ಆಚಾರ-ವಿಚಾರ, ವ್ಯಾಪಾರ-ವಾಣಿಜ್ಯೋದ್ಯಮ ಮೊದಲಾದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ವಸ್ತು ಸಂಗ್ರಹಾಲಯಗಳು ಸಹಕಾರಿಯಾಗಿವೆ. ಸಂಸ್ಕೃತಿ, ಪರಂಪರೆಯ ರಾಯಭಾರಿಗಳಂತಿರುವ ವಸ್ತುಸಂಗ್ರಹಾಲಯ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ’ ಎಂದರು.

ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ಭಗತ್, ವಸ್ತುಸಂಗ್ರಹಾಲಯ ಅಧಿಕಾರಿ ಎ.ವಿ.ನಾಗನೂರ ಉಪಸ್ಥಿತರಿದ್ದರು. ಉಪನ್ಯಾಸಕ ಎ.ಎಂ.ಕನ್ನೂರ ಸ್ವಾಗತಿಸಿದರು. ಸುಮಂಗಲಾ ಕೋಟಿ ನಿರೂಪಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !