ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಜ್ಯೂವೆಲ್ಸ್ ಫೇರ್

Last Updated 24 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಅತ್ಯಂತ ಆಕರ್ಷಕ ಆಭರಣ ಪ್ರದರ್ಶನ ‘ಏಷ್ಯಾ ಜ್ಯೂವೆಲ್ಸ್ ಫೇರ್ 2019’ ನಗರದಲ್ಲಿ ಮಾರ್ಚ್ 2ರಿಂದ 4ರವರೆಗೆ ಆಯೋಜನೆಗೊಂಡಿದೆ.

ಈ ಅದ್ಧೂರಿ ಆಭರಣ ಪ್ರದರ್ಶನವು ಯುಬಿ ಸಿಟಿ ಬಳಿ ಇರುವ ಪಂಚತಾರಾ ಹೋಟೆಲ್ ಜೆ.ಡಬ್ಲ್ಯು ಮಾರಿಯಟ್‌ನಲ್ಲಿ ಬೆಳಿಗ್ಗೆ 10.30ರಿಂದ ರಾತ್ರಿ 8ರವರೆಗೆ ನಡೆಯಲಿದೆ.

ಈ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗದ ಆಭರಣ ತಯಾರಕರು ಭಾಗವಹಿಸುವರು. ವಿಶೇಷ ಹಾಗೂ ವೈಶಿಷ್ಟ್ಯದ ವಿನ್ಯಾಸಗಳನ್ನು ಹೊಂದಿರುವ ಆಭರಣಗಳು ಪ್ರದರ್ಶನದಲ್ಲಿ ಒಂದೇ ಸೂರಿನಡಿ ದೊರೆಯಲಿವೆ.

ಇದು ಬ್ರಾಂಡೆಡ್ ಚಿನ್ನ ಮತ್ತು ವಜ್ರಾಭರಣಗಳ ವಿಶೇಷ ಕಾರ್ಯಕ್ರಮ. ಇದರಲ್ಲಿ ಫೈನ್ ಗೋಲ್ಡ್ ಆಭರಣ, ವಜ್ರಾಭರಣ, ಪ್ಲಾಟಿನಂ ಆಭರಣ, ಸಾಂಪ್ರದಾಯಿಕ ಆಭರಣ, ವಿವಾಹದ ಆಭರಣ, ಅಮೂಲ್ಯ ಹರಳಿನ ಆಭರಣ, ಕುಂದನ್, ಜಡೌ ಮತ್ತು ಪೊಲ್ಕಿ ಆಭರಣಗಳು ಇರುತ್ತವೆ.

ಪ್ರದರ್ಶನದಲ್ಲಿ ಬೆಂಗಳೂರು, ನವದೆಹಲಿ, ಮುಂಬೈ, ಜೈಪುರ, ಸೂರತ್‍ನ ಮುಂಚೂಣಿಯ ಬ್ರಾಂಡ್‍ಗಳು ಲಭ್ಯವಿರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT