7

ಡಿಸ್ನಿಲ್ಯಾಂಡ್‌ನಲ್ಲೂ ಮದುವೆ!

Published:
Updated:
ಒರ್ಲಾಂಡೊದಲ್ಲಿರುವ ಡಿಸ್ನಿಲ್ಯಾಂಡ್‌

ಅಮೆರಿಕದ ಒರ್ಲಾಂಡೊದಲ್ಲಿರುವ ಡಿಸ್ನಿಲ್ಯಾಂಡ್‌ ಬಗ್ಗೆ ಕೇಳಿದ್ದೀರಿ. ಹಲವಾರು ಸಿನಿಮಾಗಳಲ್ಲಿ ಆ ಮಾಯಾ ಜಗತ್ತಿನ ವೈಭೋಗವನ್ನು ಕಂಡಿರುತ್ತೀರಿ. ಅಂತಹ ಡಿಸ್ನಿಲ್ಯಾಂಡ್‌ನಲ್ಲಿ ಅದರಲ್ಲೂ ಸಿಂಡ್ರೆಲಾ ಅರಮನೆಯಲ್ಲೇ ಮದುವೆ ನಡೆದರೆ ಹೇಗಿದ್ದೀತು? 

ಹೌದು, ಸಿಂಡ್ರೆಲಾ ಅರಮನೆಯಲ್ಲಿ ವೈಭವೋಪೇತವಾಗಿ ಮದುವೆಯಾಗಬೇಕು ಎಂದು ಜೋಡಿಯೊಂದು ಕನಸು ಕಂಡಿದೆ. ಅದನ್ನು ನನಸು ಮಾಡಲು ಭಾರತದ ‘ಎಂಪೈರ್ಸ್‌ ಇವೆಂಟ್ಸ್‌’ ಎಂಬ ವೆಡಿಂಗ್‌ ಪ್ಲಾನರ್‌ ಕಂಪೆನಿ ವಾಲ್ಟ್‌ ಡಿಸ್ನಿ ವರ್ಲ್ಡ್‌ನಲ್ಲಿ ಸಕಲ ಸಿದ್ಧತೆಯಲ್ಲಿ ತೊಡಗಿದೆ.

ಲಂಡನ್‌ನ ಜೆನ್ನಿ ಜೇಠ್ವಾನಿ ಮತ್ತು ನ್ಯೂಯಾರ್ಕ್‌ನ ರೋಷನ್‌ ನೈನಾನಿ ಅವರೇ ಈ ಮದುಮಕ್ಕಳು. ಲಾಸ್‌ ಏಂಜೆಲೀಸ್‌ನಲ್ಲಿ ಈ ಜೋಡಿ ನೆಲೆಸಿದೆ. ಎಂಪೈರ್‌ ಇವೆಂಟ್ಸ್‌ನ ವಿಕ್ರಮ್‌ ಮೆಹತಾ ಅವರ ಸ್ನೇಹಿತೆಯೂ ಆಗಿರುವ ಜೆನ್ನಿಗೆ ಡಿಸ್ನಿಲ್ಯಾಂಡ್‌ ಕನಸಿನಲ್ಲೂ ಬಂದು ಕಾಡುವ ತಾಣವಂತೆ. ಈ ಹಿಂದೆ ಅಲ್ಲಿಗೆ ಭೇಟಿ ಕೊಟ್ಟಾಗಲೂ ಅಲ್ಲಿ ಮದುವೆಯಾದರೆ ಹೇಗಿರುತ್ತದೆ ಎಂದು ಆಸೆಪಟ್ಟಿದ್ದರಂತೆ. ಆದರೆ ರೋಷನ್‌ ಜೊತೆಗೆ ಬಹಮಾಸ್‌ನಲ್ಲಿ ಮದುವೆ ನಿಕ್ಕಿಯಾಗಿತ್ತು. ಹಾಗಂತ ಆಮಂತ್ರಣ ಪತ್ರಿಕೆಗಳೂ ಹಂಚಿಯಾಗಿತ್ತು. 

ಇನ್ನೇನು ಮದುವೆಗೆ ಒಂದೇ ತಿಂಗಳು ಬಾಕಿ ಎಂದಾಗ ಅಂದರೆ ಕಳೆದ ತಿಂಗಳು ಡಿಸ್ನಿಲ್ಯಾಂಡ್‌ಗೆ ಮದುವೆ ಸ್ಥಳಾಂತರವಾಯಿತು. ಇದೇ ತಿಂಗಳು 20ರಿಂದ 23ರವರೆಗೂ ವಿವಾಹ ಸಮಾರಂಭಗಳು ನಡೆಯಲಿವೆ. ರಿನೈಸನ್ಸ್‌ ಒರ್ಲಾಂಡೊದ ಸೀ ವರ್ಲ್ಸ್‌ನಲ್ಲಿ ಪ್ರಮುಖ ಸಮಾರಂಭ ನಿಗದಿಯಾಗಿದೆ. ಮೊದಲ ದಿನ ರಾತ್ರಿ ಪಾಶ್ಚಾತ್ಯ ಸಂಗೀತ ಕಾರ್ಯಕ್ರಮ, ಡಿಸ್ನಿಯ ಕಂಟೆಂಪರರಿ ಬಾಲ್‌ರೂಮ್‌ನಲ್ಲಿ ಆರತಕ್ಷತೆಗೆ ಸಿದ್ಧತೆಗಳು ನಡೆದಿವೆ.

ತಮ್ಮ ವೆಡಿಂಗ್‌ ಪ್ಲಾನಿಂಗ್‌ ಕಂಪೆನಿ ಡಿಸ್ನಿಲ್ಯಾಂಡ್‌ನಲ್ಲಿ ಮದುವೆ ಆಯೋಜಿಸುತ್ತಿರುವುದನ್ನು ಸ್ವತಃ ವಿಕ್ರಮ್‌ ಮೆಹ್ತಾಗೇ ನಂಬಲಾಗುತ್ತಿಲ್ಲವಂತೆ. ‘ಡಿಸ್ನಿಲ್ಯಾಂಡ್‌, ಈ ಭೂಮಿ ಮೇಲಿರುವ 10ರಲ್ಲಿ 11 ಎಂಬಂತಹ ತಾಣವಲ್ಲ. ಅದು ಅಭೂತ, ಅದ್ಭುತ ಎಂದಷ್ಟೇ ಹೇಳಬಲ್ಲೆ. ಇಲ್ಲಿ ಇನ್ನಷ್ಟು ಮದುವೆ ಸಮಾರಂಭಗಳನ್ನು ನಾವು ಆಯೋಜಿಸಲಿದ್ದೇವೆ’ ಎಂದು ಅವರು ಹೇಳಿಕೊಂಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !