ಇದು ಬುಟ್ಟಿ ಅಲ್ಲಣ್ಣಾ!

7

ಇದು ಬುಟ್ಟಿ ಅಲ್ಲಣ್ಣಾ!

Published:
Updated:
ಬಾಸ್ಕೆಟ್ ಬಿಲ್ಡಿಂಗ್‌

ಇದು ವಿಭಿನ್ನತೆಯ ಯುಗ. ಜನರು ತಿನ್ನುವ ಊಟದ ತಟ್ಟೆಯಿಂದ ಉಣ್ಣುವ ಅಗಳಿನಲ್ಲೂ ವಿಭಿನ್ನತೆಯನ್ನು ಬಯಸುತ್ತಾರೆ. ಎಲ್ಲರೂ ತಮ್ಮತ್ತ ಒಮ್ಮೆ ಕಣ್ಣು ಹಾಯಿಸಬೇಕು ಎಂದುಕೊಂಡು ಏನೇನೋ ಮಾಡುತ್ತಾರೆ. ಹಾಗೆಯೇ ಇಲ್ಲೊಂದು ಕಟ್ಟಡ ಇದೆ. ಈ ಕಟ್ಟಡದ ಎದುರು ಹೋದರೆ ನೀವು ಅದರತ್ತ ಕಣ್ಣು ಹಾಯಿಸದೇ ಸುಮ್ಮನೇ ಬರಲು ಸಾಧ್ಯವೇ ಇಲ್ಲ. 

ಅದೇನಪ್ಪಾ ಅಂತಹ ಕಟ್ಟಡ ಎಂದುಕೊಳ್ಳುತ್ತಿದ್ದೀರಾ? ಕಟ್ಟಡ ಎಂದರೆ ಕಲ್ಲು, ಮಣ್ಣು, ಸಿಮೆಂಟ್‌, ಇಟ್ಟಿಗೆ ಇಷ್ಟೇ ಅಲ್ಲವೇ? ಅದರಲ್ಲೇನಿದೆ ವಿಶೇಷ ಎಂದು ಅಸಡ್ಡೆ ಮಾಡಬೇಡಿ. ಇದು ಬುಟ್ಟಿ ಕಟ್ಟಡ. ಅಂದರೆ ಬುಟ್ಟಿಯೇ ಕಟ್ಟಡವಾದುದಲ್ಲ. ಬದಲಾಗಿ ಕಟ್ಟಡವನ್ನು ಬುಟ್ಟಿಯ ಆಕಾರದಲ್ಲಿ ವಿನ್ಯಾಸ ಮಾಡಲಾಗಿದೆ.

ಈ ಬುಟ್ಟಿ ಕಟ್ಟಡ ಇರುವುದು ಅಮೆರಿಕದ ಓಹಿಯೊನಲ್ಲಿ. 1997ರಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದು ದಿ ಲಾಂ‌ಗಾ ಬರ್ಗರ್ ಕಂಪನಿ. ಸಂಶ್ಲೇಷಿತ ಪ್ಲಾಸ್ಟರ್ ವ್ಯವಸ್ಥೆ ಹೊಂದಿರುವುದಕ್ಕೆ 1998 ಬಿಲ್ಡ್ ಓಹಿಯೋ ಪ್ರಶಸ್ತಿಯನ್ನು ಕಟ್ಟಡ ಪಡೆದುಕೊಂಡಿತು. ಅಮೆರಿಕದ ಎನ್‌ಬಿಬಿಜೆ ಕಂಪನಿಯು ಕಟ್ಟಡವನ್ನು ವಿನ್ಯಾಸ ಮಾಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !