ರಾಜದ್ರೋಹ ಪ್ರಕರಣ: ರಖೈನ್‌ ನಾಯಕನಿಗೆ 20 ವರ್ಷ ಜೈಲು

ಶುಕ್ರವಾರ, ಏಪ್ರಿಲ್ 26, 2019
32 °C

ರಾಜದ್ರೋಹ ಪ್ರಕರಣ: ರಖೈನ್‌ ನಾಯಕನಿಗೆ 20 ವರ್ಷ ಜೈಲು

Published:
Updated:
Prajavani

ಸಿಟ್ವೆ, ಮ್ಯಾನ್ಮಾರ್‌: ದೇಶದ್ರೋಹದ ಆರೋಪದ ಮೇಲೆ ರಖೈನ್‌ ಜನಾಂಗದ ಮುಖಂಡರೊಬ್ಬರಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಮಂಗಳವಾರ 20 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ. ಈ ಬೆಳವಣಿಗೆ ಜನಾಂಗೀಯ ಗುಂಪು ಹಾಗೂ ಸೇನೆಯ ನಡುವೆ ಹೊಸ ಸಂಘರ್ಷ ಹುಟ್ಟುಹಾಕಿದೆ.

ರೋಹಿಂಗ್ಯಾ ಮುಸಲ್ಮಾನರ ವಿರುದ್ಧ ನಿಲುವು ಹೊಂದಿರುವ  ಅರಕಾನ್‌ ನ್ಯಾಷನಲ್‌ ಪಕ್ಷದ ಮಾಜಿ ಮುಖ್ಯಸ್ಥ ಅಯ್‌ ಮೌಂಗ್‌ ಶಿಕ್ಷೆಗೆ ಒಳಗಾದ ವ್ಯಕ್ತಿ. 2018ರ ಜನವರಿಯಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಮೌಂಗ್‌ ಭಾಷಣದ ಬಳಿಕ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸಲ್ಮಾನರ ವಿರುದ್ಧ ದೊಡ್ಡ ಮಟ್ಟದ ಹಿಂಸಾಚಾರ ನಡೆದಿತ್ತು. ಇದರಿಂದ ಮ್ಯಾನ್ಮಾರ್‌ನಲ್ಲಿದ್ದ 7.5 ಲಕ್ಷ ರೋಹಿಂಗ್ಯಾ ಮುಸಲ್ಮಾನರು ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದರು.

ರಖೈನ್‌ ರಾಜ್ಯದಲ್ಲಿ ಬೌದ್ಧ ರಖೈನ್‌ ಮೂಲನಿವಾಸಿ ಗುಂಪು ಬಹುಸಂಖ್ಯಾತರು. ರಾಜ್ಯಕ್ಕೆ ಹೆಚ್ಚಿನ ಸ್ವಾಯತ್ತೆ ನೀಡಬೇಕು ಎಂಬುದು ಇಲ್ಲಿನ ನಿವಾಸಿಗಳ ಒತ್ತಾಯ.

ಮೇಲ್ಮನವಿ: ಶಿಕ್ಷೆ ಕುರಿತಂತೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಮೌಂಗ್‌ ಜೊತೆ ಚರ್ಚೆ ನಡೆಸಲಾಗುವುದು ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ದೇಶದ್ರೋಹ ಪ್ರಕರಣದಲ್ಲಿ ಅಪರಾಧಿಗೆ ಗರಿಷ್ಠ ಗಲ್ಲುಶಿಕ್ಷೆ ವಿಧಿಸಲು ಇಲ್ಲಿನ ಕಾನೂನಿನಲ್ಲಿ ಅವಕಾಶವಿದೆ. ಮೌಂಗ್‌ ಅವರಿಗೆ ಜೈಲುಶಿಕ್ಷೆ ವಿಧಿಸಿರುವ ನ್ಯಾಯಾಲಯದ ಕ್ರಮವನ್ನು ಅವರ ಅಭಿಮಾನಿಗಳು ಕಟುವಾಗಿ ಖಂಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !