ಸೋಮವಾರ, ನವೆಂಬರ್ 18, 2019
28 °C

ಮೈಸೂರು ದಸರಾ: ಸಿ.ಎಂಗೆ ಆಹ್ವಾನ

Published:
Updated:
Prajavani

ಬೆಂಗಳೂರು: ಮೈಸೂರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ದಸರಾ ಸಮಿತಿಯ ಸದಸ್ಯರ ನಿಯೋಗವು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿತು.

ನಾಡ ಹಬ್ಬ ಮೈಸೂರು ದಸರಾಕ್ಕೆ ಇದೇ 29 ರಂದು ಬೆಳಿಗ್ಗೆ 9 ಕ್ಕೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತಿದ್ದು, ಅಕ್ಟೋಬರ್‌ 8 ರವರೆಗೆ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ‘ಒಂದು ಕಾರ್ಯಕ್ರಮವನ್ನಷ್ಟೇ ಉದ್ಘಾಟನೆ ಮಾಡುತ್ತೇನೆ. ಉಳಿದ ಕಾರ್ಯಕ್ರಮಗಳಿಗೆ ಉಪಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಆಹ್ವಾನಿಸಿ. ಎಲ್ಲರನ್ನೂ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸೋಮಣ್ಣ, ದಸರಾದಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

ಶಾಸಕ ರಾಮದಾಸ್ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಅವರಿಗೆ ‘ದಸರಾ ಸಮಿತಿಯಲ್ಲಿ ಬೇರೆ ಬೇರೆ ಜವಾಬ್ದಾರಿಗಳು ಇದ್ದುದರಿಂದ ನಮ್ಮ ಜತೆ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)