ನಾದಜ್ಯೋತಿ ಸಂಗೀತ ಸಂಭ್ರಮ

ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ನಾಲ್ಕು ದಿನಗಳ ಕಾಲ 54ನೇ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಸಂಗೀತ, ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ 50 ವರ್ಷದಿಂದ ಈ ಸಂಸ್ಥೆ ಸೇವೆಯಲ್ಲಿದೆ.
ಫೆಬ್ರುವರಿ 6ರಂದು ಸಂಜೆ 6 ಗಂಟೆಗೆ ಉದ್ಘಾಟನೆ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀರ್. ಅತಿಥಿಗಳು: ಶಾಸಕ ಸಿ.ಎನ್.ಅಶ್ವತ್ಧ್ನಾರಾಯಣ, ಗೋಕುಲ ಎಜುಕೇಷನ್ ಫೌಂಡೇಷನ್ನ ಮುಖ್ಯ ಹಣಕಾಸು ಅಧಿಕಾರಿ ಟಿ.ಎಸ್.ವೇಣುಗೋಪಾಲ್ ಶಾಸ್ತ್ರಿ.
6.30ಕ್ಕೆ ಬೆಂಗಳೂರು ಆರ್.ಮಂಜುನಾಥ್ ಮತ್ತು ಸಂಗಡಿಗರಿಂದ ಸ್ಯಾಕ್ಯೋಫೋನ್. (ನಾಲ್ಕೂ ದಿನ ಸಂಜೆ 6.30ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ).
ಫೆಬ್ರುವರಿ 7ರಂದು ಗಾಯನ: ರುದ್ರಪಟ್ಟಣಂ ಎಸ್.ರಮಾಕಾಂತ್. ಪಿಟೀಲು–ಮತ್ತೂರು ಆರ್.ಶ್ರೀನಿಧಿ, ಮೃದಂಗ–ಆನೂರು ಅನಂತಕೃಷ್ಣ ಶರ್ಮ, ಘಟಂ–ಎಸ್.ಎನ್.ನಾರಾಯಣ ಮೂರ್ತಿ.
ಫೆಬ್ರುವರಿ 8ರಂದು ಗಾಯನ: ಐಶ್ವರ್ಯ ಶ್ರೀನಿವಾಸನ್. ಪಿಟೀಲು–ಎಚ್.ಎಂ.ಸ್ಮಿತ, ಮೃದಂಗ–ಸಿ.ಚೆಲುವರಾಜ್, ಮೋರ್ಚಿಂಗ್–ಭಾಗ್ಯಲಕ್ಷ್ಮಿ ಎಂ.ಕೃಷ್ಣ.
ಫೆಬ್ರುವರಿ 9ರಂದು ಸಂಜೆ 5ರಿಂದ ರಾತ್ರಿ 7ರವರೆಗೆ ’ಖಂಜರಿ ವ್ಯಾಸ ಮಂಜರಿ‘–ವಿಶೇಷ ತಾಳವಾದ್ಯ ಕಚೇರಿ. ನಿರ್ದೇಶನ: ಸಿ.ಪಿ.ವ್ಯಾಸವಿಠಲ, ಜಿ.ಗುರು ಪ್ರಸನ್ನ, ಆರ್.ಕಾರ್ತಿಕ್. ಖಂಜಿರ–ಭಾರ್ಗವ ಹಾಲಂಬಿ, ಮೋರ್ಚಿಂಗ್–ಚಿದಾನಂದ್, ಗಾಯನ–ವಿನಯ್ ಶರ್ವ, ಕೊಳಲು–ಎ.ಸಿ.ಸರ್ವೋತ್ತಮ್.
ಅದೇ ದಿನ ರಾತ್ರಿ 7ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಅತಿಥಿ:ಎನ್.ಕೆ.ಸುಧೀಂದ್ರರಾವ್. ಟಿ.ಅಚುತ್ಥ್ ರಾವ್ ಪಟಕಿ ಕೂಡ ಹಾಜರಿರುತ್ತಾರೆ.
ಪ್ರಶಸ್ತಿ ಪ್ರದಾನ: ಸಂಗೀತ ಸಾಧಕ ರಾಮನಗರ ಬಿ.ಎಸ್.ನಾರಾಯಣ ಐಯ್ಯಂಗಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ₹10 ಸಾವಿರ ನಗದು. ರುದ್ರಪಟ್ನಂ ಎಸ್.ರಮಾಕಾಂತ್ ಅವರಿಗೆ ’ಕಲಾಜ್ಯೋತಿ–2019‘ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ₹20 ಸಾವಿರ ನಗದು ಬಹುಮಾನ ಒಳಗೊಂಡಿದೆ.
ಮೋರ್ಚಿಂಗ್ಗೆ ಪ್ರಸಿದ್ಧರಾಗಿರುವ ಭಾಗ್ಯಲಕ್ಷ್ಮಿ ಎಂ. ಕೃಷ್ಣ ಅವರಿಗೆ ’ನಾದಜ್ಯೋತಿ ಪುರಸ್ಕಾರ‘ ಹಾಗೂ ₹10 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ.
ಆರ್ಥಿಕವಾಗಿ ಹಿಂದುಳಿದಿರುವ ತಬಲಾ ಕಲಾವಿದ ಬಿ.ರುದ್ರಪ್ಪ ಅವರಿಗೆ ’ನಾದಜ್ಯೋತಿ ಆರೋಗ್ಯ ಸಂಪದ‘ ಯೋಜನೆ ಅಡಿ ₹5 ಸಾವಿರ ಬಹುಮಾನ ಮೊತ್ತ ನೀಡಿ ಗೌರವಿಸಲಾಗುತ್ತಿದೆ.
ಫೆಬ್ರುವರಿ 10ರಂದು ಬೆಳಿಗ್ಗೆ 8ಕ್ಕೆ ‘ಊಂಛವೃತ್ತಿ‘ ಕಾರ್ಯಕ್ರಮ ಇದೆ. 10ಕ್ಕೆ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನವನ್ನೂ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಚೆನ್ನೈನ ಎಸ್.ಮಹತಿ ಅವರಿಂದ ಗಾಯನ. ಪಿಟೀಲು–ಬಿ.ಕೆ.ರಘು, ಮೃದಂಗ– ಬಿ.ಎಸ್.ಪ್ರಶಾಂತ್, ಖಂಜಿರ–ಎ.ಎಸ್.ಎನ್.ಸ್ವಾಮಿ.
ನಡೆಯುವ ದಿನಾಂಕ: ಫೆಬ್ರುವರಿ 6ರಿಂದ 10.
ಸಹಯೋಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಲ್ಲೇಶ್ವರಂ ಆರ್ಯವೈಶ್ಯ ಸಂಘ, ಪ್ರಜಾವಾಣಿ ಮಾಧ್ಯಮ ಸಹಯೋಗ ನೀಡಿದೆ.
ಸ್ಥಳ–ಆರ್.ಪಿ.ರವಿಶಂಕರ್ ಸಭಾಂಗಣ, ಕನ್ನಿಕಾಪರಮೇಶ್ವರಿ ದೇವಸ್ಥಾನ ಸಭಾಂಗಣ, 8ನೇ ಕ್ರಾಸ್, ಮಲ್ಲೇಶ್ವರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.