ಬರಡುಭೂಮಿಯ ಗಂಗೆಯರಿಗೆ ಒಲಿದ ನಬಾರ್ಡ್‌ ಪುರಸ್ಕಾರ

ಬುಧವಾರ, ಮಾರ್ಚ್ 27, 2019
26 °C

ಬರಡುಭೂಮಿಯ ಗಂಗೆಯರಿಗೆ ಒಲಿದ ನಬಾರ್ಡ್‌ ಪುರಸ್ಕಾರ

Published:
Updated:
Prajavani

ಬೆಂಗಳೂರು: ಅವರು, ಬರಡು ಭೂಮಿಯಲ್ಲಿ ಹಸಿರು ಹುಟ್ಟಿಸುವ ಕನಸು ಹೊತ್ತವರು. ಬತ್ತಿದ ಜಲಮೂಲಗಳಲ್ಲಿ ಗಂಗೆಯನ್ನು ಹುಡುಕುತ್ತ ಸಾಗಿದವರಿಗೆ ಕೊನೆಗೆ ಸಿಕ್ಕಿದ್ದು, ಜಲಾನಯನ ಯೋಜನೆ.

ಈ ಮೂಲಕ ಕೃಷಿಯಲ್ಲಿ ಮಾದರಿ ಸಾಧನೆ ಮಾಡಿದವರು ಬಿ.ಎಸ್‌.ಇಂದಿರಾ, ಅಂಬಿಕಾ ಹಾಗೂ ಭಾಗ್ಯಮ್ಮ.  

ಗ್ರಾಮೀಣ ಪ್ರದೇಶದಲ್ಲಿ ಜಲಾನಯನ ಪ್ರದೇಶಗಳ ಅಭಿವೃದ್ಧಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಕೈಗೊಂಡ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಈ ಮಹಿಳೆಯರಿಗೆ ನಬಾರ್ಡ್‌ ಮಂಗಳವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ‘ಅತ್ಯುತ್ತಮ ಸಾಧಕಿಯರು’ ಪ್ರಶಸ್ತಿ ಪ್ರದಾನ ಮಾಡಿತು. 

‘ಗೃಹಿಣಿಯಾಗಿದ್ದ ನಾನು, ಕೃಷಿ ಚಟುವಟಿಕೆಗಳಿಗೆ ನಬಾರ್ಡ್‌ನ ಯೋಜನೆಗಳನ್ನು ಬಳಸಿಕೊಳ್ಳುವ ಮೂಲಕ ಇಂದು ಮಾದರಿ ಕೃಷಿಕಳಾಗಿದ್ದು, ಇತರರಿಗೂ ಯೋಜನೆಗಳ ಬಗ್ಗೆ ಮಾಹಿತಿ, ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿ ರೂಪುಗೊಂಡಿದ್ದೇನೆ’ ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಜೋಬಿಗೇನಹಳ್ಳಿಯ ರೈತ ಸಾಧಕಿ ಇಂದಿರಾ ಹೆಮ್ಮೆಯಿಂದ ಹೇಳಿಕೊಂಡರು.

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಹುಚ್ಚಹನುಮೇಗೌಡನ ಪಾಳ್ಯದ ಅಂಬಿಕಾ, ‘ಐದು ಎಕರೆ ಒಣಭೂಮಿಯಲ್ಲಿ ಸಮಗ್ರ ಕೃಷಿ ಅಳವಡಿಸಿಕೊಳ್ಳಲು ನಬಾರ್ಡ್‌ನ ತರಬೇತಿ ಪಡೆದುಕೊಂಡು ಯಶಸ್ವಿಯಾಗಿದ್ದೇನೆ. ರೈತ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುತ್ತಿರುವ ನಬಾರ್ಡ್‌ನ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆ ಕವಳನಹಳ್ಳಿಯ ಭಾಗ್ಯಮ್ಮ, ‘ಯೋಜನೆಗಳ ಬಗೆಗೆ ಜಾಗೃತಿ ಮೂಡಿಸುವುದು, ಹನಿ ನೀರಾವರಿ, ಆಳ ಉಳುಮೆ, ಬದು ನಿರ್ಮಾಣ ಕುರಿತು ಸ್ಥಳೀಯರಿಗೆ ತರಬೇತಿ ನೀಡುತ್ತಿದ್ದೇನೆ. ನಾಯಕನಹಟ್ಟಿ ರೈತ ಉತ್ಪಾದಕ ಸಂಘದ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದರು. 

ನಬಾರ್ಡ್‌ನ ಸಿಜಿಎಂ ಪಿ.ವಿ.ಎಸ್‌ ಸೂರ್ಯಕುಮಾರ್‌, ‘ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !