‘ಜನರನ್ನು ಗೊಂದಲಕ್ಕೆ ತಳ್ಳಿದ ಕೇಂದ್ರ’

7

‘ಜನರನ್ನು ಗೊಂದಲಕ್ಕೆ ತಳ್ಳಿದ ಕೇಂದ್ರ’

Published:
Updated:
Prajavani

ಬೆಂಗಳೂರು: ‘ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡುವ ಮೂಲಕ ಕೇಂದ್ರ ಸರ್ಕಾರ ಜನರನ್ನು ಗೊಂದಲಕ್ಕೆ ತಳ್ಳಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ನ್ಯಾಷನಲ್‌ ಹ್ಯೂಮನ್‌ ರೈಟ್ಸ್‌ ಡಿಫೆಂಡರ್ಸ್‌ ಕೌನ್ಸಿಲ್‌ನ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಆರ್ಥಿಕ ಮೀಸಲಾತಿ ಸಂವಿಧಾನಕ್ಕೆ ಸವಾಲೆಸೆದ ವಿಕೃತಿ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಡತನಕ್ಕೆ ಮೀಸಲಾತಿ ಪರಿಹಾರವಲ್ಲ. ಇದರಿಂದ ಅನಾರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ. ಇದರ ಬದಲಾಗಿ ದೇಶದಲ್ಲಿ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕು. ಉನ್ನತ ಶಿಕ್ಷಣವನ್ನು ಉಚಿತವಾಗಿ ಒದಗಿಸಬೇಕು’ ಎಂದರು.

‘ಸ್ವಾತಂತ್ರ್ಯ ಬಂದ ಹೊಸತರಲ್ಲಿ ಶೇ 70ರಷ್ಟಿದ್ದ ಬಡತನದ ಪ್ರಮಾಣ 2018ಕ್ಕೆ ಶೇ 22ಕ್ಕೆ ಇಳಿದಿದೆ. ಅದಕ್ಕೆ ಯೋಜನೆಗಳು ಕಾರಣ. ಆದ್ದರಿಂದ ಮೀಸಲಾತಿ ನೀಡುವುದಕ್ಕಿಂತ ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಹೇಳಿದರು.  ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜು, ವಿಷಯ ಮಂಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !