ರಾಮಸಮುದ್ರದ 29ನೇ ವಾರ್ಡ್‌: ಕಟ್ಟಿಕೊಂಡ ದೊಡ್ಡ ಚರಂಡಿ, ಗಮನ ಹರಿಸದ ನಗರಸಭೆ

ಶುಕ್ರವಾರ, ಮೇ 24, 2019
30 °C
ನಗರ ಸಂಚಾರ: ವಾರ್ಡ್‌ ವ್ಯಾಪ್ತಿಯಲ್ಲಿ ರೋಗರುಜಿನದ ಭೀತಿಯಲ್ಲಿ ಜನರು

ರಾಮಸಮುದ್ರದ 29ನೇ ವಾರ್ಡ್‌: ಕಟ್ಟಿಕೊಂಡ ದೊಡ್ಡ ಚರಂಡಿ, ಗಮನ ಹರಿಸದ ನಗರಸಭೆ

Published:
Updated:
Prajavani

ಚಾಮರಾಜನಗರ: ಇಲ್ಲಿನ ನಗರಸಭೆಯ ವ್ಯಾಪ್ತಿಗೆ ಬರುವ ರಾಮಸಮುದ್ರದ 29ನೇ ವಾರ್ಡ್‌ನಲ್ಲಿರುವ ದೊಡ್ಡ ಚರಂಡಿಯಲ್ಲಿ ಪ್ಲಾಸ್ಟಿಕ್‌, ಕಸಕಡ್ಡಿಗಳು ತುಂಬಿ ಕೊಳಚೆ ನೀರು ಕಟ್ಟಿಕೊಂಡಿದ್ದು, ಸರಾಗವಾಗಿ ಹರಿಯುತ್ತಿಲ್ಲ.

ರಾಮಸಮುದ್ರದ ಸುಬೇದಾರ್‌ ಕಟ್ಟೆ (ರಾಮಲಿಂಗೇಶ್ವರ ದೇವಸ್ಥಾನದ ಪಕ್ಕ) ಬಳಿ ಈ ದೊಡ್ಡ ಕಾಂಕ್ರೀಟ್‌ ಚರಂಡಿ ಇದೆ. ಹಲವು ವಾರಗಳಿಂದ ಇಲ್ಲಿ ಕೊಳಚೆ ನೀರು ಕಟ್ಟಿ ನಿಂತಿದೆ. ನಗರಸಭೆ ಆಡಳಿತ ಈ ಬಗ್ಗೆ ಗಮನ ಹರಿಸಿಲ್ಲ ಎಂಬುದು ಸ್ಥಳೀಯರ ಆರೋಪ.

ಇದು ತೆರೆದ ಚರಂಡಿಯಾಗಿರುವುದರಿಂದ ರಸ್ತೆಯಲ್ಲಿ ನಡೆದಾಡುವವರಿಗೆ ಹಾಗೂ ವಾಹನ ಸವಾರರಿಗೆ ಕಟ್ಟಿಕೊಂಡ ಕಸಮಿಶ್ರಿತ ಕೊಳಕು ನೀರಿನ ದರ್ಶನವಾಗುತ್ತದೆ. 

ಕೊಳಚೆ ನೀರು ದೀರ್ಘ ಸಮಯದಿಂದ ನಿಂತಿರುವುದರಿಂದ ಚರಂಡಿಯು ಸೊಳ್ಳೆ ಹಾಗೂ ಕ್ರಿಮಿಕೀಟಗಳ ಆವಾಸಸ್ಥಾನವಾಗಿ ಬದಲಾಗಿದ್ದು, ಸ್ಥಳೀಯರು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಎದುರಿಸುತ್ತದೆ. ಚರಂಡಿಯಿಂದ ಹೊರಬರುತ್ತಿರುವ ಕೆಟ್ಟ ವಾಸನೆಯೂ ಜನರನ್ನು ಬಾಧಿಸುತ್ತಿದೆ. 

ನಗರದಲ್ಲಿರುವ ಪ್ರಮುಖ ಚರಂಡಿಗಳಲ್ಲಿ ಇದೂ ಒಂದು. ಪಿಡಬ್ಲ್ಯುಡಿ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಇದರ ಮೂಲಕ ಹರಿದು ಹೋಗುತ್ತದೆ. ಸುಬೇದಾರ್‌ ಕಟ್ಟೆಯ ಬಳಿ ಆರಂಭವಾಗುವ ಚರಂಡಿ, ಹರಳಕೋಟೆಗೆ ಹೋಗುವ ರಸ್ತೆಯ ಕೆಳಭಾಗದ ಮೂಲಕ ಸಾಗುತ್ತದೆ. ರಸ್ತೆಯಲ್ಲಿ ನಿರ್ಮಿಸಿರುವ ಮೋರಿಯ ಬಳಿ ನೀರಿನ ಹರಿಯುವಿಕೆಗೆ ತಡೆ ಉಂಟಾಗಿದ್ದರಿಂದ ನೀರು ಕಟ್ಟಿಕೊಂಡಿದೆ. ಅದನ್ನು ತೆರವುಗೊಳಿಸಲು ನಗರಸಭೆ ಗಮನ ಹರಿಸಿಲ್ಲ. 

‘ಮೂರು ತಿಂಗಳುಗಳಿಂದ ಚರಂಡಿ ಕಟ್ಟಿಕೊಂಡಿದೆ. ಚರಂಡಿಯನ್ನು ಸ್ವಚ್ಛಗೊಳಿಸಲು ಯಾರೂ ಮುಂದಾಗಿಲ್ಲ. ಪೌರ ಕಾರ್ಮಿಕರ ಬಳಿ ಸ್ವಚ್ಛಗೊಳಿಸುವಂತೆ ಹೇಳಿದರೆ ಅವರು ನಮಗೇ ದಬಾಯಿಸುತ್ತಾರೆ. ಇತ್ತೀಚೆಗೆ ಸೊಳ್ಳೆ ಕಾಟ ವಿಪ‍ರೀತವಾಗಿದೆ. ನಗರಸಭೆ ಆಡಳಿತ ತಕ್ಷಣವೇ ಈ ಬಗ್ಗೆ ಗಮನ ಹರಿಸಬೇಕು' ಎಂದು ಸ್ಥಳೀಯ ನಿವಾಸಿ ರಾಜಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗಮನಕ್ಕೆ ಬಂದಿದೆ: ಸಮಸ್ಯೆಯ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ 29ನೇ ವಾರ್ಡ್‌ ಸದಸ್ಯೆ ಸುಧಾ ಅವರು, ‘ಚರಂಡಿ ನೀರು ಕಟ್ಟಿಕೊಂಡಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳೆಲ್ಲ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದರಿಂದ ಇತ್ತ ಗಮನ ಹರಿಸಲು ಆಗಿಲ್ಲ. ಈ ಚರಂಡಿಯಲ್ಲಿ ಭಾರಿ ಪ್ರಮಾಣದಲ್ಲಿ ಕೊಳಚೆ ನೀರು ಹರಿಯುತ್ತದೆ. ಪ್ಲಾಸ್ಟಿಕ್‌, ಕಸ ಕಡ್ಡಿಗಳೂ ಚರಂಡಿಯಲ್ಲಿ ತುಂಬಿವೆ’ ಎಂದು ಹೇಳಿದರು.

‘ಚರಂಡಿಗೆ ಪೌರಕಾರ್ಮಿಕರನ್ನು ಇಳಿಸುವ ಹಾಗಿಲ್ಲ. ದೊಡ್ಡ ಚರಂಡಿಯಾಗಿರುವುದರಿಂದ ಜೆಸಿಬಿ ಮೂಲಕವೇ ಸ್ವಚ್ಛಗೊಳಿಸಬೇಕಾಗಿದೆ. ಜೆಸಿಬಿ ಹೋಗುವುದಕ್ಕೂ ಅಲ್ಲಿ ಜಾಗ ಇಲ್ಲ. ಚರಂಡಿ ನಿರ್ಮಿಸಿರುವ ಮೇಸ್ತ್ರಿ ಜೊತೆ ಜೊತೆಯೂ ಮಾತನಾಡಿದ್ದೇನೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !