ಸೋಮವಾರ, ನವೆಂಬರ್ 18, 2019
23 °C

ನಮಿತ ಸಾಗರ ಮುನಿ ಸಮಾಧಿಮರಣ

Published:
Updated:
Prajavani

ಬೆಳಗಾವಿ: ನಮಿತಸಾಗರ ಮುನಿ ಹುಕ್ಕೇರಿ ತಾಲ್ಲೂಕಿನ ಯರನಾಳದಲ್ಲಿ ಶುಕ್ರವಾರ ಬೆಳಿಗ್ಗೆ ಯಮಸಲ್ಲೇಖನ ವ್ರತಧಾರಣೆ ಮಾಡಿ ಸಮಾಧಿ ಮರಣ ಹೊಂದಿದರು.

ತಮ್ಮ 16ನೇ ವಯಸ್ಸಿನಲ್ಲೇ ಆಚಾರ್ಯ ವರ್ಧಮಾನಸಾಗರ ಮುನಿ ಅವರಿಂದ ಬ್ರಹ್ಮಚರ್ಯ ವ್ರತ ಸ್ವೀಕರಿಸಿದ್ದರು. ತಮ್ಮ ಮುನಿ ಜೀವನದಲ್ಲಿ 3 ಸಾವಿರ ಉಪವಾಸ ವ್ರತ ಹಾಗೂ ಅನೇಕ ನಿಯಮಗಳನ್ನು ಪಾಲಿಸಿದ್ದರು.

ಅಂತ್ಯಕ್ರಿಯೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಯರನಾಳ, ಹೊಸೂರು, ಹುಕ್ಕೇರಿ, ಬೆಳಗಾವಿ ಮೊದಲಾದ ಕಡೆಗಳಿಂದ ಭಕ್ತರು ಬಂದಿದ್ದರು.  

ಪ್ರತಿಕ್ರಿಯಿಸಿ (+)