ಇಂದಿನಿಂದ ಮೆಟ್ರೊ ಕಾಮಗಾರಿ ಆರಂಭ

7

ಇಂದಿನಿಂದ ಮೆಟ್ರೊ ಕಾಮಗಾರಿ ಆರಂಭ

Published:
Updated:

ಬೆಂಗಳೂರು: ಮೆಟ್ರೊ ರೈಲು ನಿಗಮವು ರೀಚ್‌–6 ಎತ್ತರಿಸಿದ ಮಾರ್ಗ ನಿರ್ಮಾಣಕ್ಕಾಗಿ ಜಯದೇವ ಜಂಕ್ಷನ್‌ನಲ್ಲಿ ಡಿ.19ರಿಂದ (ಬುಧವಾರದಿಂದ) ಕಾಮಗಾರಿಯನ್ನು ಆರಂಭಿಸುತ್ತಿದೆ. ಅದಕ್ಕಾಗಿ ಈ ಭಾಗದಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ರೀಚ್‌–6 ಮಾರ್ಗವು ಗೊಟ್ಟಿಗೆರೆಯಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿದೆ.

*ಡೈರಿ ವೃತ್ತದಿಂದ ಸಿಲ್ಕ್‌ ಬೋರ್ಡ್‌ ಕಡೆ ಸಂಚರಿಸುವ ವಾಹನಗಳು ಗುರಪ್ಪನಪಾಳ್ಯ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ಈಸ್ಟ್‌ ಎಂಡ್‌ ಮುಖ್ಯರಸ್ತೆಯಲ್ಲಿ ಎಡ ತಿರುವು ಪಡೆದು ಸಾಗಬೇಕು. ಮುಂದೆ ಮಾರೇನಹಳ್ಳಿ ಮುಖ್ಯರಸ್ತೆಯಲ್ಲಿ ಮತ್ತೆ ಎಡ ತಿರುವು
ಪಡೆದು ಸಿಲ್ಕ್‌ ಬೋರ್ಡ್‌ ಕಡೆಗೆ ಸಾಗಬೇಕು.

*ಡೈರಿ ವೃತ್ತದಿಂದ ಬನಶಂಕರಿ ಕಡೆ ಹೋಗುವ ವಾಹನಗಳು ಗುರಪ್ಪನಪಾಳ್ಯ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, 28ನೇ ಮುಖ್ಯರಸ್ತೆ ವರೆಗೆ ಸಾಗಿ ಎಡ ತಿರುವು ಪಡೆಯಬೇಕು. ಮುಂದೆ ಸಿಗುವ ಮಾರೇನಹಳ್ಳಿ ರಸ್ತೆಯಲ್ಲಿ ಮತ್ತೆ ಬಲತಿರುವು ಪಡೆದು ಬನಶಂಕರಿ ಕಡೆಗೆ ಹೋಗಬೇಕು. 

*ಜಯದೇವ ಕೇಳಸೇತುವೆಯ ರಸ್ತೆ ಮಾರ್ಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 

‘ಮಾನದಂಡದಂತೆ ಕಾಮಗಾರಿ ನಡೆಸಿದ್ದೇವೆ’: ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ಮಾರ್ಗದ ವಯಾಡಕ್ಟ್‌ನಲ್ಲಿ ಬಿರುಕು ಕಾಣಿಸಿಕೊಂಡು  ಮೆಟ್ರೊ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಇದನ್ನು ನಿವಾರಿಸಲೆಂದೇ ನಿಗಮ ಕೆಲವು ಸ್ಪಷ್ಟನೆಗಳನ್ನು ನೀಡಿದೆ. 

‘ಮೆಟ್ರೊ ಮಾರ್ಗದ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳು ಮತ್ತು ವಯಾಡಕ್ಟ್‌ಗಳ ರಚನೆಯಲ್ಲಿ ಅನುಸರಿಸಬೇಕಾದ ಮಾನದಂಡಗಳ ಕುರಿತು ಮೇಲ್ವಿಚಾರಣೆ ಮಾಡಲು 2009ರಲ್ಲಿ ಕಾರ್ಯಪಡೆಯೊಂದನ್ನು ರಚಿಸಲಾಗಿತ್ತು. ಆ ಪಡೆ ವಯಾಡಕ್ಟ್‌ಗಳನ್ನು ನಿರ್ಮಾಣ ಮಾಡುವ ಕೇಂದ್ರಗಳಿಗೆ ಭೇಟಿ ಪರಿಶೀಲಿಸಿತ್ತು. ಕೆಲವು ಸಲಹೆಗಳನ್ನೂ ನೀಡಿತ್ತು. ಆ ಕಾರ್ಯಪಡೆಯ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿ, ಮೊದಲ ಮತ್ತು ಎರಡನೇ ಹಂತದ ಮೆಟ್ರೊ ಮಾರ್ಗವನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಮೆಟ್ರೊ ಸಾರಿಗೆ ಬಳಸಲು ಯಾವುದೇ ಆತಂಕ ಪಡಬೇಕಾಗಿಲ್ಲ’ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !