ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

2023–24ನೇ ಸಾಲಿನ ಎಂಬಿಎ ತರಗತಿಗಳ ಉದ್ಘಾಟನೆ: ಅತಿಥಿಗಳು: ವಿಜಯಕೃಷ್ಣನ್ ವೆಂಕಟೇಶನ್, ಸೌಂದರ್ಯ ಪಿ. ಮಂಜಪ್ಪ, ಕೀರ್ತನ್ ಕುಮಾರ್ ಎಂ., ಸುನಿತಾ ಪಿ. ಮಂಜಪ್ಪ, ಪ್ರತೀಕ್ಷ ಕೀರ್ತನ್, ವರುಣ್ ಕುಮಾರ್ ಎಂ., ವಾಸು ಬಿ.ಎ., ಆಯೋಜನೆ ಮತ್ತು ಸ್ಥಳ: ಸೌಂದರ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸೈನ್ಸ್, ಸೌಂದರ್ಯನಗರ, ಸಿದ್ದೇದಹಳ್ಳಿ ನಾಗಸಂದ್ರ, ಬೆಳಿಗ್ಗೆ 10
ಸಂಸ ಪ್ರಶಸ್ತಿ ಪ್ರದಾನ: ‘ಮುಖ್ಯಮಂತ್ರಿ’ ಚಂದ್ರು, ಪ್ರಶಸ್ತಿ ಪುರಸ್ಕೃತರು: ಗಣೇಶ್ ಪಿ.ಬಿ., ಶಶಿಕಲಾ ಎನ್., ಅಧ್ಯಕ್ಷತೆ: ವೆಂಕಟರಾವ್, ಅತಿಥಿ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಭಾರತ ಯಾತ್ರಾ ಕೇಂದ್ರ–ರಂಗಸೌರಭ, ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ. ರಸ್ತೆ, ಸಂಜೆ 4.30
‘ಎಸ್.ಪಿ. ವರದರಾಜು’ ಪ್ರಶಸ್ತಿ ಪ್ರದಾನ:
ದತ್ತಾತ್ರೇಯ(ದತ್ತಣ್ಣ), ಪ್ರಶಸ್ತಿ ಪುರಸ್ಕೃತರು: ಡಿ. ಲಲಿತಮ್ಮ, ಬೆಂಗಳೂರು ನಾಗೇಶ್, ಅತಿಥಿ:
ಬಿ. ಜಯಶ್ರೀ, ಆಶಯ ನುಡಿ:
ಬರಗೂರು ರಾಮಚಂದ್ರಪ್ಪ, ಆಯೋಜನೆ: ಎಸ್.ಪಿ. ವರದರಾಜು ಆತ್ಮೀಯರ ಬಳಗ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30
ಶಾಂತ ಎ. ತಿಮ್ಮಯ್ಯ ಅವರೊಂದಿಗೆ ಸಂವಾದ ಸಭೆ: ಬಿ.ವಿ. ಗೋಪಾಲ್ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಎಫ್‌ಕೆಸಿಸಿಐನ ಎಸ್.ಎಂ.ವಿ ಸಭಾಂಗಣ, ಕೆ.ಜಿ. ರಸ್ತೆ, ಸಂಜೆ 5
ಡಾ. ಎಂ.ಎ. ಜಯಚಂದ್ರ ದತ್ತಿ ಕಾರ್ಯಕ್ರಮ: ವಿಷಯ: ‘ಜೈನ ಸಾಹಿತ್ಯದಲ್ಲಿ ಅಹಿಂಸೆಯ ಪರಿಕಲ್ಪನೆ’, ಉಪನ್ಯಾಸ: ಪದ್ಮಿನಿ ನಾಗರಾಜು, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5
ಪ್ರವಚನ ವಾಹಿನಿ ಕಾರ್ಯಕ್ರಮ: ‘ಇಂದಿನ ಸಮಾಜಕ್ಕೆ ಶಂಕರರ ಕೊಡುಗೆಗಳು’ ಕುರಿತು ಉಪನ್ಯಾಸ: ಮಂಜುನಾಥ್ ಭಟ್ ವಿನಾಯಕ, ಆಯೋಜನೆ ಮತ್ತು ಸ್ಥಳ: ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿಯ ಸಾಂಸ್ಕೃತಿಕ ಮಂದಿರ, ಜಯನಗರ, ಸಂಜೆ 6.30