ಶುಕ್ರವಾರ, ಮೇ 27, 2022
22 °C

ನಗರದಲ್ಲಿ ಇಂದು: ‘ದೇವದಾಸಿ ಪದ್ಧತಿ ನಿಷೇಧ’ ಕುರಿತು ಸಮಾಲೋಚನೆ, ಸಿಜಿಕೆ ರಾಷ್ಟ್ರೀಯ ರಂಗೋತ್ಸವ

‘ದೇವದಾಸಿ ಪದ್ಧತಿ ನಿಷೇಧ’ ಕುರಿತು ಸಮಾಲೋಚನೆ: ಉದ್ಘಾಟನೆ–ಎಚ್.ಶಶಿಧರ್ ಶೆಟ್ಟಿ, ಅಧ್ಯಕ್ಷತೆ–ಪ್ರೊ.ಎಸ್.ಜಾಫೆಟ್‌, ಅತಿಥಿಗಳು–ಉಮಾ ಮಹಾದೇವನ್, ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಚ್.ಪುಷ್ಪಲತಾ, ಆಯೋಜನೆ–ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ವಿಮುಕ್ತ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ವೇದಿಕೆ ಹಾಗೂ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಷನ್‌, ಸ್ಥಳ–ಪರಾಗ್ ಹೋಟೆಲ್‌, ರಾಜಭವನ ರಸ್ತೆ, ಬೆಳಿಗ್ಗೆ 10.30

ಕುಮಾರವ್ಯಾಸ ಜಯಂತಿ ಅಂಗವಾಗಿ ಕುಮಾರವ್ಯಾಸ ನಮನ: ಉದ್ಘಾಟನೆ–ಮಹೇಶ್‌ ಜೋಶಿ, ಅಧ್ಯಕ್ಷತೆ–ಮಲ್ಲೇಪುರಂ ಜಿ.ವೆಂಕಟೇಶ, ಅತಿಥಿಗಳು–ಎಲ್.ಎ.ರವಿಸುಬ್ರಹ್ಮಣ್ಯ, ಬೈರಮಂಗಲ ರಾಮೇಗೌಡ, ಸಂತೋಷ್ ಹಾನಗಲ್, ರತ್ನಾ ಮೂರ್ತಿ, ಎಲ್ಲೇಗೌಡ ಬೆಸಗರಹಳ್ಳಿ, ಆಯೋಜನೆ–ವಿಶ್ವಮಾನವ ಸಂಗೀತ ಯಾನ, ಸ್ಥಳ–ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3.30

ಯುವ ರಂಗ–ಬೆಂಗಳೂರು ನಗರ ಜಿಲ್ಲಾ ಕಾಲೇಜು ರಂಗೋತ್ಸವ: ಆರ್‌ಬಿಎಎನ್‌ಎಂಎಸ್‌ ಪ್ರಥಮ ದರ್ಜೆ ಕಾಲೇಜು ತಂಡದಿಂದ ‘ಗಿಡಗಿಡುಗ’ ನಾಟಕ ಪ್ರದರ್ಶನ, ಆಯೋಜನೆ–ಶಿವಮೊಗ್ಗ ರಂಗಾಯಣ, ಸ್ಥಳ–ಜನಪದರು ರಂಗಮಂದಿರ, ನಿಂಬೆಕಾಯಿಪುರ, ಸಂಜೆ 5

ಭರತನಾಟ್ಯ ರಂಗಪ್ರವೇಶ: ಅನಿಕಾ ಆರ್.ಆನಂದ್, ಅತಿಥಿಗಳು–ವಸುಂಧರಾ ದೊರೆಸ್ವಾಮಿ, ಸುಗ್ಗನಹಳ್ಳಿ ಷಡಕ್ಷರಿ, ನವಿಯಾ ನಟರಾಜನ್, ಕೆ.ಚಂದ್ರಕಲಾ, ಆಯೋಜನೆ–ಶಿವೋಹಂ ಪ್ರದರ್ಶನ ಕಲಾ ಶಾಲೆ, ಸ್ಥಳ–ಶಿವರಾತ್ರೀಶ್ವರ ಕೇಂದ್ರ, ಜಯನಗರ 8ನೇ ಬ್ಲಾಕ್, ಸಂಜೆ 6

ಸಿಜಿಕೆ ರಾಷ್ಟ್ರೀಯ ರಂಗೋತ್ಸವ: ‘ಹುಲಿಯ ನೆರಳೊಳಗೆ’ ನಾಟಕ ಪ್ರದರ್ಶನ, ರಂಗರೂಪ‍–ಮಹಾದೇವ ಹಡಪದ, ತಂಡ:ಆಟ–ಮಾಟ,  ಆಯೋಜನೆ–ರಂಗನಿರಂತರ, ಸ್ಥಳ–ಡಿ.ಕೆ.ಚೌಟ ವೇದಿಕೆ, ರವೀಂದ್ರ ಕಲಾಕ್ಷೇತ್ರ, ಸಂಜೆ 7