ಸೋಮವಾರ, ಮಾರ್ಚ್ 27, 2023
23 °C

ಮಾರ್ಚ್ 18, 2023: ಬೆಂಗಳೂರಲ್ಲಿ ಇಂದು ನಡೆಯುವ ಕಾರ್ಯಕ್ರಮಗಳು

34ನೇ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‍ಗಳ ತಂಡ ಮತ್ತು 8ನೇ ಸಿವಿಲ್‌ ಪೊಲೀಸ್ ಕಾನ್‌ಸ್ಟೆಬಲ್‍ಗಳ ತಂಡದ ನಿರ್ಗಮನ ಪಥಸಂಚಲನ: ಅತಿಥಿ: ಪಿ. ರವೀಂದ್ರನಾಥ್, ಆಯೋಜನೆ: ಪೊಲೀಸ್‌ ಇಲಾಖೆ, ಸ್ಥಳ: ತರಬೇತಿ ಶಾಲೆಯ ಕವಾಯತು ಮೈದಾನ, ಯಲಹಂಕ, ಬೆಳಿಗ್ಗೆ 8

ಯುವ ಕ್ರೀಡೋತ್ಸವ: ಉದ್ಘಾಟನೆ: ಸಹನಾ ಕುಮಾರಿ ಎನ್., ನಾ. ತಿಪ್ಪೇಸ್ವಾಮಿ, ಅತಿಥಿಗಳು: ಪುನೀತ್ ನಂದಕುಮಾರ್, ಎಸ್. ಬಾಲಕೃಷ್ಣ, ಉಪಸ್ಥಿತಿ: ರಾಜಶೇಖರ್ ಭಾವಿಮನಿ, ಆಯೋಜನೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸ್ಥಳ: ವಿದ್ಯಾಶಿಲ್ಪ ಅಕಾಡೆಮಿ, ಜಕ್ಕೂರು, ಬೆಳಿಗ್ಗೆ 10

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಉದ್ಘಾಟನೆ: ಬಸವರಾಜ ಬೊಮ್ಮಾಯಿ, ಉಪಸ್ಥಿತಿ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಸ್ಥಳ: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಆವರಣ, ಅರಮನೆ ರಸ್ತೆ, ಬೆಳಿಗ್ಗೆ 10.30

ಬೆಳ್ಳಿ ಮಹೋತ್ಸವ ಮತ್ತು ಕಾಲೇಜು ದಿನಾಚರಣೆ: ಅತಿಥಿಗಳು: ಎ.ಎಸ್. ಕಿರಣ್‌ ಕುಮಾರ್, ಕೆ.ಪಿ. ನರಸಿಂಹಮೂರ್ತಿ, ಆಯೋಜನೆ ಮತ್ತು ಸ್ಥಳ: ಎ.ಪಿ.ಎಸ್. ಎಂಜಿನಿಯರಿಂಗ್‌ ಕಾಲೇಜು, ಸೋಮನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10.30

ಸಂಸ್ಥಾಪನಾ ದಿನಾಚರಣೆ, ನದಾಫ್–ಪಿಂಜಾರ ಸಮುದಾಯದ ಸಮಾವೇಶ: ಉದ್ಘಾಟನೆ: ಬಸವರಾಜ ಬೊಮ್ಮಾಯಿ, ಅಧ್ಯಕ್ಷತೆ: ಜಿ.ಡಿ. ನದಾಫ್, ಅತಿಥಿಗಳು: ಸಿದ್ದರಾಮಯ್ಯ, ಜಲೀಲ್‌ ಸಾಬ್, ಸಿ.ಎಂ. ಇಬ್ರಾಹಿಂ, ಕೆ. ರೆಹಮಾನ್ ಖಾನ್, ಎಲ್. ಹನುಮಂತಯ್ಯ, ಸೈಯ್ಯದ್ ನಾಸೀರ್ ಹುಸೇನ್, ಎಚ್.ಸಿ. ಮಹದೇವಪ್ಪ, ಯು.ಟಿ. ಖಾದರ್, ನಸೀರ್ ಅಹ್ಮದ್, ಜಮೀರ್ ಅಹ್ಮದ್ ಖಾನ್, ಉದಯ್ ಬಿ. ಗರುಡಾಚಾರ್, ಆಯೋಜನೆ: ಕರ್ನಾಟಕ ರಾಜ್ಯ ನದಾಫ್–ಪಿಂಜಾರ ಸಂಘ, ಸ್ಥಳ: ಪಟ್ಟಣ್ಣ ಚೆಟ್ಟಿ ಟೌನ್ ಹಾಲ್‌, ಬೆಳಿಗ್ಗೆ 10.30

ನವೀಕರಣಗೊಂಡ ಕಟ್ಟದ ಉದ್ಘಾಟನಾ ಸಮಾರಂಭ: ಅಧ್ಯಕ್ಷತೆ: ಬಿ.ಎನ್. ರವಿಚಂದ್ರ ರೆಡ್ಡಿ, ಅತಿಥಿಗಳು: ತೇಜಸ್ವಿನಿ ಅನಂತ್ ಕುಮಾರ್, ಸದಾನಂದ ಮಯ್ಯ, ಆಯೋಜನೆ ಮತ್ತು ಸ್ಥಳ: ಮಾಡೆಲ್‌ ಎಜುಕೇಷನ್‌ ಸೊಸೈಟಿ, ಜಯನಗರ, ಬೆಳಿಗ್ಗೆ 10.30

‘ಉನ್ನತ ಶಿಕ್ಷಣದ ಮೇಲೆ ಆರ್ಥಿಕ ಸ್ವಾಯತ್ತತೆಯ ಪರಿಣಾಮ’ದ ಕುರಿತು ವಿಚಾರಸಂಕಿರಣ: ಮಾತನಾಡುವವರು: ಬಿ. ನಾರಾಯಣಪ್ಪ, ಟಿ.ಆರ್. ಚಂದ್ರಶೇಖರ್, ಎಂ.ಎನ್. ಶ್ರೀಹರಿ ಎಚ್.ಎಂ. ಸೋಮಶೇಖರಪ್ಪ, ಸುಜಿತ್ ಕುಮಾರ್, ಅಭಯಾ ದಿವಾಕರ್, ಅಪೂರ್ವ ಸಿ.ಎಂ., ನಿರ್ವಹಣೆ: ಕಲ್ಯಾಣ್ ಕುಮಾರ್, ಆಯೋಜನೆ: ಇಗ್ನೈಟ್- ಆಲ್ ಕರ್ನಾಟಕ ಎಂಜಿನಿಯರಿಂಗ್ ಸ್ಟೂಡೆಂಟ್ಸ್ ಫೋರಂ, ಎಗ್ಫಾ- ಎಂಜಿನಿಯರಿಂಗ್ ಕಾಲೇಜಸ್ ಫ್ಯಾಕಲ್ಟಿ ಅಸೋಸಿಯೇಷನ್, ಸ್ಥಳ: ಯು.ವಿ.ಸಿ.ಇ. ಅಲುಮ್ನಿ ಅಸೋಸಿಯೇಶನ್ ಸಭಾಂಗಣ, ಬೆಳಿಗ್ಗೆ 11ರಿಂದ

‘ಹಸಿರು ಹಬ್ಬ’ ಅಂತರರಾಷ್ಟ್ರೀಯ ತ್ಯಾಜ್ಯ ಆಯುವವರ ದಿನಾಚರಣೆ: ಕೋಟ ಶ್ರೀನಿವಾಸ ಪೂಜಾರಿ, ದಿನೇಶ್ ಗುಂಡೂರಾವ್, ಸೌಮ್ಯಾ ರೆಡ್ಡಿ, ಕೆ. ನಾಗಣ್ಣ ಗೌಡ, ತುಷಾರ್ ಗಿರಿನಾಥ್, ಆಯೋಜನೆ: ತ್ಯಾಜ್ಯ ಶ್ರಮಿಕ ಸಂಘ, ಹಸಿರು ದಳ, ಸ್ಥಳ: ಸ್ವಾತಂತ್ರ್ಯ ಉದ್ಯಾನದ ವಾಹನ ನಿಲ್ದಾಣ, ಬೆಳಿಗ್ಗೆ 11ರಿಂದ

ರಂಜಾನ್‌ ಸಾಬ್‌’ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ: ಪ್ರಶಸ್ತಿ ಪ್ರದಾನ: ಬರಗೂರು ರಾಮಚಂದ್ರಪ್ಪ, ಪ್ರಶಸ್ತಿ ಪುರಸ್ಕೃತರು: ಬೆಲಗೂರು ಸಮೀವುಲ್ಲಾ, ಕೃತಿ ಬಿಡುಗಡೆ: ಸಿ. ಸೋಮಶೇಖರ್, ಪುಸ್ತಕ ಪರಿಚಯ: ಶ್ರ.ದೇ. ಪಾರ್ಶ್ವನಾಥ್, ಅತಿಥಿಗಳು: ಟಿ. ವೆಂಕಟೇಶ್, ಸಂತೋಷ್ ಹಾನಗಲ್, ಆಶಯ ನುಡಿ: ಸಮೀವುಲ್ಲಾ ಖಾನ್, ನಿರೂಪಣೆ: ಎಸ್. ಪಿನಾಕಪಾಣಿ, ಆಯೋಜನೆ: ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ, ಸ್ಥಳ: ಪ್ರೆಸ್‌ಕ್ಲಬ್‌ ಆವರಣ, ಕಬ್ಬನ್ ಪಾರ್ಕ್‌, ಬೆಳಿಗ್ಗೆ 11

‘ಹಾರ್ಟ್‌ ಆಫ್‌ ದಿ ಮೈಂಡ್‌ ಆ್ಯಂಡ್ ಮೈಂಡ್‌ ಆಫ್‌ ದಿ ಹಾರ್ಟ್‌’: ನಂದಕಿಶೋರ್ ತಿವಾರಿ, ಡಾ.ಸಿ.ಎನ್. ಮಂಜುನಾಥ್, ಆಯೋಜನೆ: ದರ್ಪಣ ಫೌಂಡೇಷನ್, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ,
ಬೆಳಿಗ್ಗೆ 11

ವೈವಿಧ್ಯಮಯ ಸಂಗೀತೋತ್ಸವ: ಉದ್ಘಾಟನೆ: ಮೃತ್ಯುಂಜಯ ದೊಡ್ಡವಾಡ, ಅಧ್ಯಕ್ಷತೆ: ರವಿ ಕಮಲಾಪುರಕರ, ಅತಿಥಿಗಳು: ಶ್ರೀಶೈಲ ಮಾದಣ್ಣವರ್, ಶಾಂತಮಲ್ಲಪ್ಪ ಎನ್. ಭೂತೆ, ಮು. ಮುರಳೀಧರ್, ಗಾಯಕರು: ಮೃತ್ಯುಂಜಯ ದೊಡ್ಡವಾಡ, ಬಸವರಾಜ ಮುಗಳಖೋಡ, ರವೀಂದ್ರ ಸೋರಗಾಂವಿ, ಕೀರ್ತಿ ದುನಿಯಾ ವಿಜಯ್, ಆಯೋಜನೆ: ಇಂಡಿಯನ್ ಮ್ಯೂಸಿಕ್ ಅಸೋಸಿಯೇಷನ್, ಸ್ಥಳ: ಆರೂಢ ಜ್ಞಾನ ಮಂದಿರ ಸಭಾಂಗಣ, ಸಿದ್ಧಾರೂಢಾಶ್ರಮ, ಮೈಸೂರು ರಸ್ತೆ ಮೆಟ್ರೊ ನಿಲ್ದಾಣದ ಹತ್ತಿರ, ಸಂಜೆ 4.30

‘ಕುಚಿಪುಡಿ’ ರಂಗಪ್ರವೇಶ: ಪೂಜಾ ರಾಜ್, ಅರ್ನವ್ ರಾಜ್, ಅತಿಥಿಗಳು: ಸಂಜಯ್ ಶಾಂತರಾಮ್, ಆಯೋಜನೆ: ಶಿವಪ್ರಿಯ ಸ್ಕೂಲ್ ಆಫ್ ಡಾನ್ಸ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

ಸುಸ್ಥಿರತೆಗಾಗಿ ಸಣ್ಣ ಬದಲಾವಣೆ: ಅತಿಥಿ: ಚೈತನ್ಯ ಸುಬ್ರಹ್ಮಣ್ಯ, ಆಯೋಜನೆ: ಹೊಸಚಿಗುರು, ಸ್ಥಳ: ಮುನಿವೆಂಕಟಪ್ಪ ಬಯಲು ರಂಗಮಂದಿರ, ಆರ್.ಆರ್. ನಗರ, ಸಂಜೆ 5.30

‘ಟಿ. ಸುನಂದಮ್ಮ ಪ್ರಶಸ್ತಿ’ ಪ್ರದಾನ, ‘ಟಿ. ಸುನಂದಮ್ಮ ಸಾಹಿತ್ಯ ಸಂಪುಟ–3’ ಮತ್ತು ‘ನಾನು ಕಂಡಂತೆ ಟಿ. ಸುನಂದಮ್ಮ’ ಪುಸ್ತಕಗಳ ಬಿಡುಗಡೆ: ಪ್ರಶಸ್ತಿ ಪ್ರದಾನ: ಎಂ.ಎಸ್. ನರಸಿಂಹಮೂರ್ತಿ, ಪ್ರಶಸ್ತಿ ಪುರಸ್ಕೃತರು: ಭುವನೇಶ್ವರಿ ಹೆಗಡೆ, ಪುಸ್ತಕಗಳ ಬಿಡುಗಡೆ: ಡುಂಡಿರಾಜ್ ಮತ್ತು ಎಲ್.ವಿ. ಶಾಂತಕುಮಾರಿ, ಅಧ್ಯಕ್ಷತೆ: ಎಂ. ನರಸಿಂಹಮೂರ್ತಿ, ಆಯೋಜನೆ: ಟಿ. ಸುನಂದಮ್ಮ ಸ್ಮಾರಕ ಪ್ರತಿಷ್ಠಾನ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಪ್ರವಚನ ವಾಹಿನಿ: ‘ಗೀತಾ ಜ್ಞಾನಯಜ್ಞ 9ನೇ ಅಧ್ಯಾಯ (ಭಗವದ್ಗೀತೆ)’ ಕುರಿತು ಪ್ರವಚನ: ಸ್ವಾಮಿ ಬ್ರಹ್ಮಾನಂದ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್‌ನ ಸಾಂಸ್ಕೃತಿಕ ಮಂದಿರ, ಜಯನಗರ, ಸಂಜೆ 6.30

‘ಹಸ್ಬೆಂಡ್–360’ ನಾಟಕ ಪ್ರದರ್ಶನ: ನಿರ್ದೇಶನ: ರಚನಾ ಶ್ಯಾಮ್, ವಿಜಯ್‌ ಜೋಯಿಸ್, ರಚನೆ: ನಾಗವೇಣಿ ರಂಗನ್, ಆಯೋಜನೆ: ಅಂತರಂಗ, ಸ್ಥಳ: ಪ್ರಭಾತ್ ಕೆ.ಎಚ್. ಕಲಾಸೌಧ, ಹನುಮಂತನಗರ, ಸಂಜೆ 7.15