ಶುಕ್ರವಾರ, ಆಗಸ್ಟ್ 23, 2019
22 °C

ಜ್ಞಾನಭಾರತಿಯಲ್ಲೂ ‘ನಂದಿನಿ’

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಕೆಎಂಎಫ್‌ನ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕ್ಯಾಂಪಸ್‌ನಲ್ಲಿ ಹಲವೆಡೆ ನಂದಿನಿ ಹಾಲಿನ ಬೂತುಗಳನ್ನು ಸ್ಥಾಪಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂಬ
ಪ್ರಸ್ತಾವಕ್ಕೆ ಈಚೆಗೆ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. 

‘ಕ್ಯಾಂಪಸ್‌ನ ಹಲವೆಡೆ ಹಲವಾರು ಗೂಡಂಗಡಿಗಳಿದ್ದು, ಆರೋಗ್ಯಕ್ಕೆ ಹಾನಿಕರವಾದ ಪಾನೀಯವನ್ನು ಮಾರಾಟ ಮಾಡುತ್ತಿವೆ. ನಿಧಾನವಾಗಿ ಈ ಅಂಗಡಿಗಳನ್ನು ಮುಚ್ಚಿಸಿ, ನಂದಿನಿ ಬೂತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಸುವ ಚಿಂತನೆ ಇದೆ’ ಎಂದು ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೂತು ಇಡುವ ಸ್ಥಳ ಗುರುತಿಸಿದ್ದೇವೆ. ಕೆಎಂಎಫ್‌ ಅದನ್ನು ನೇರವಾಗಿ ಅಥವಾ ಮಾರಾಟಗಾರರ ಮೂಲಕ ನಡೆಸಬಹುದು. ಆದರೆ ನಾವು ಕೆಎಂಎಫ್‌ ಜತೆಗೆ ನೇರ ಸಂಪರ್ಕದಲ್ಲಿ ಇರುತ್ತೇವೆ’ ಎಂದು ಕುಲಪತಿ ತಿಳಿಸಿದರು.

ಈ ಮಧ್ಯೆ, ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್‌ (ಯುವಿಸಿಇ) ಬಳಿ 40 ವರ್ಷಗಳಿಂದ ನಡೆಯುತ್ತಿದ್ದ ಅನಧಿಕೃತ ಕ್ಯಾಂಟೀನ್‌ ಮುಚ್ಚಿಸಲಾಗಿದ್ದು, ಅಲ್ಲೂ ನಂದಿನಿ ಘಟಕ ಆರಂಭವಾಗಲಿದೆ.

Post Comments (+)