ನಾನಿಗೆ ಖುಷಿಯೋ ಖುಷಿ

ಶುಕ್ರವಾರ, ಏಪ್ರಿಲ್ 19, 2019
23 °C

ನಾನಿಗೆ ಖುಷಿಯೋ ಖುಷಿ

Published:
Updated:

ಟಾಲಿವುಡ್‌ ನಟ ನಾನಿ ಸಂತುಷ್ಟರಾಗಿದ್ದಾರೆ. ಮುಖದಲ್ಲಿ ಅದರ ಹೊಳಪು ಸ್ಪಷ್ಟವಾಗಿ ಕಾಣುತ್ತಿದೆ. ಇದಕ್ಕೆ ಕಾರಣ ಈ ವಾರ ತೆರೆ ಕಾಣಲಿರುವ ‘ಜೆರ್ಸಿ’ ಸಿನಿಮಾ. ಅವರು ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಿರುವ ಹೊಸ ಬಗೆಯ ಚಿತ್ರಕತೆಯುಳ್ಳ ಚಿತ್ರ ಇದಾಗಿರುವುದು ಅವರ ಖುಷಿಯನ್ನು ದುಪ್ಪಟ್ಟು ಮಾಡಿದೆ.

‘ಪ್ರತಿಯೊಬ್ಬ ನಟನೂ ನಟಿಸಿದ ಎಲ್ಲಾ ಪಾತ್ರಗಳು ಪೂರ್ಣ ಸಂತೃಪ್ತಿ ಕೊಡಲಾರವು. ಅಂತಹ ಶಕ್ತಿ ಇರುವುದು ಕೆಲವೇ ಪಾತ್ರಗಳಿಗೆ. ’ಜೆರ್ಸಿ‘ ಅಂತಹ ಶಕ್ತಿಶಾಲಿ ಪಾತ್ರವನ್ನು ನನಗೆ ನೀಡಿದೆ’ ಎಂದು ನಾನಿ ಹೇಳಿಕೊಂಡಿದ್ದಾರೆ. ಕ್ರಿಕೆಟ್‌ ಮುಂದೆ ಬದುಕಿನ ಎಲ್ಲವೂ ಶೂನ್ಯ ಎಂದು ನಂಬಿದ ಮಹತ್ವಾಕಾಂಕ್ಷಿ ಕ್ರಿಕೆಟ್‌ ಪಟುವಿನ ಪಾತ್ರ ನಾನಿಯದು. ಕ್ರಿಕೆಟ್‌ ಪಟುವಾಗಿ ಬದುಕಿನಲ್ಲಿ ಕಾಣುವ ಏಳುಬೀಳುಗಳು, ಸಂಪಾದನೆಯಿಲ್ಲದೆ ಇತ್ತ ನಂಬಿದ ಕ್ರೀಡೆಯಲ್ಲಿಯೂ ಭವಿಷ್ಯ ಕಾಣಲಾಗದ ಅಸಹಾಯಕ ಸ್ಥಿತಿಯಲ್ಲಿ ಹೆಂಡತಿಯ ಹಣವನ್ನೇ ಕಳ್ಳತನ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಏನೇ ಬಂದರೂ ಎದೆಗುಂದಬಾರದು ಎಂಬ ಸಂದೇಶ ನೀಡಲಿಚ್ಚಿಸುವ ನಾಯಕ ತನ್ನ ಸೋಲುಗಳಲ್ಲಿ ಕುಸಿಯುವ ಈ ಸನ್ನಿವೇಶಗಳಲ್ಲಿ ನಾನಿ ಅತ್ಯಂತ ಮನೋಜ್ಞವಾಗಿ ನಟಿಸಿದ್ದಾರೆ. ಕಳೆದ ವಾರಾಂತ್ಯ ಬಿಡುಗಡೆಯಾಗಿರುವ ಟ್ರೇಲರ್‌ ಅವರ ಪರಿಪಕ್ವ ನಟನೆಗೆ ಕನ್ನಡಿ ಹಿಡಿಯುತ್ತವೆ. 

ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ನಾಯಕನಟಿಯಾಗಿ ಅಂದರೆ ನಾನಿ ಪತ್ನಿಯಾಗಿ ನಟಿಸಿದ್ದರೆ. ಈ ಚಿತ್ರವನ್ನು ಗೌತಮ್ ತಿನ್ನನೂರಿ ನಿರ್ದೇಶಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !