ಸಿಗ್ನಲ್‌ಗೆ ಅಡಚಣೆ: ಅವಳಿ ಉಪಗ್ರಹ ಉಡಾವಣೆಗೆ ಮುಂದಾದ ನಾಸಾ

ಬುಧವಾರ, ಜೂನ್ 26, 2019
29 °C

ಸಿಗ್ನಲ್‌ಗೆ ಅಡಚಣೆ: ಅವಳಿ ಉಪಗ್ರಹ ಉಡಾವಣೆಗೆ ಮುಂದಾದ ನಾಸಾ

Published:
Updated:
Prajavani

ವಾಷಿಂಗ್ಟನ್‌: ಸಂವಹನಕ್ಕೆ ಸಂಬಂಧಿಸಿದ ಸಂಕೇತಗಳ (ಸಿಗ್ನಲ್‌) ಚಲನೆಗೆ ಬಾಹ್ಯಾಕಾಶದಲ್ಲಿ ಉಂಟಾಗುವ ಅಡಚಣೆಯನ್ನು ಅಧ್ಯಯನ ಮಾಡಲು ಮುಂದಾಗಿರುವ ನಾಸಾ, ಅವಳಿ ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿದೆ.

ಭೂಮಿಯ ಮೇಲ್ಮೈಯಲ್ಲಿನ ವಾತಾವರಣದ ಪರಿಣಾಮ ಸೇನೆ ಮತ್ತು ವಿಮಾನಯಾನ, ಜಿಪಿಎಸ್‌ ಸಿಗ್ನಲ್‌ಗಳು ವಿರೂಪಗೊಳ್ಳುತ್ತವೆ. ಅದರಲ್ಲೂ ಭೂಮಿಯ ಸಮಭಾಜಕ ವೃತ್ತದಲ್ಲಿ ಸಿಗ್ನಲ್‌ಗಳು ವಿರೂಪಗೊಳ್ಳುವ ಪ್ರಮಾಣವೂ ಅಧಿಕ. ಇದರಿಂದ ಮಿಲಿಟರಿ ಹಾಗೂ ವಿಮಾನಗಳ ಕಾರ್ಯಾಚರಣೆಗೆ ಸಾಕಷ್ಟು ತೊಂದರೆಯಾಗುತ್ತದೆ. 

ಅಮೆರಿಕದ ರಕ್ಷಣಾ ಇಲಾಖೆ ಸುಪರ್ದಿಯಲ್ಲಿರುವ ನೆಲೆಯಿಂದ ’ಇ–ಟಿಬಿಇಎಕ್ಸ್‌‘ ಎಂಬ ಅವಳಿ ಉಪಗ್ರಹಗಳನ್ನು ಜೂನ್‌ 24ರಂದು ಉಡಾವಣೆ ಮಾಡಲಾಗುತ್ತದೆ.

ಭೂಮಿಯ ಮೇಲ್ಮೈ ವಾತಾವರಣದಲ್ಲಿ ಕಂಡು ಬರುವ ಗುಳ್ಳೆಗಳಿಂದ (ಅಯಾನುಗಳು) ರೇಡಿಯೊ ಸಿಗ್ನಲ್‌ಗಳು ಹೇಗೆ ವಿರೂಪಗೊಳ್ಳುತ್ತವೆ ಎಂಬುದನ್ನು ಈ ಉಪಗ್ರಹಗಳು ಪತ್ತೆ ಹಚ್ಚಲಿವೆ.

’ಈ ಗುಳ್ಳೆಗಳು ಹೇಗೆ ಉತ್ಪತ್ತಿಯಾಗುತ್ತವೆ ಎಂಬುದು ಪತ್ತೆಯಾದರೆ, ಈಗ ನಾವು ಎದುರಿಸುತ್ತಿರುವ ತೊಂದರೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯ. ಆದರೆ, ಈ ಗುಳ್ಳೆಗಳು ಸೃಷ್ಟಿಯಾಗುವ ಬಗೆ, ಕಾಲ ಕಳೆದಂತೆ ಅವು ಬದಲಾಗುವುದನ್ನು ಇಲ್ಲಿಯೇ ಕುಳಿತು ಅಧ್ಯಯನ ಮಾಡುವುದು ಕಷ್ಟ. ಹೀಗಾಗಿ ಈ ಉಪಗ್ರಹಗಳನ್ನು ಹಾರಿಬಿಡಲಾಗುತ್ತದೆ‘ ಎಂದು ಈ ಯೋಜನೆಯ ವ್ಯವಸ್ಥಾಪಕ ರಿಕ್‌ ಡೋ ಹೇಳುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !