2024ಕ್ಕೆ ಮಾನವಸಹಿತ ಚಂದ್ರಯಾನ

ಗುರುವಾರ , ಜೂನ್ 20, 2019
30 °C
ನಾಸಾ: ಮುಂದಿನ ವರ್ಷ ವೈಜ್ಞಾನಿಕ ಉಪಕರಣ ರವಾನೆ

2024ಕ್ಕೆ ಮಾನವಸಹಿತ ಚಂದ್ರಯಾನ

Published:
Updated:
Prajavani

ವಾಷಿಂಗ್ಟನ್: 2024ಕ್ಕೆ ಮಾನವ ಸಹಿತ ಚಂದ್ರಯಾನಕ್ಕೆ ಸಿದ್ಧತೆ ಆರಂಭಿಸಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ( ನಾಸಾ), 2020 ಹಾಗೂ 2021ರಲ್ಲಿ ಚಂದ್ರನ ಮೇಲೆ ವೈಜ್ಞಾನಿಕ ಉಪಕರಣಗಳನ್ನು ಇಳಿಸಲು ಯೋಜನೆ ರೂಪಿಸಿದೆ. 

ಅಪೋಲೊ ಯೋಜನೆಯಡಿ 1972ರಲ್ಲಿ  ನಾಸಾ ಮೊದಲ ಮಾನವ ಸಹಿತ ಚಂದ್ರಯಾನವನ್ನು ಕೈಗೆತ್ತಿಕೊಂಡಿತ್ತು. ಇದಾದ ನಂತರ ಮತ್ತೊಮ್ಮೆ ಚಂದ್ರಯಾನದ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಆರ್ಟಿಮಿಸ್‌ ಹೆಸರಿನ ಈ ಯೋಜನೆಯಡಿ ಉಪಕರಣಗಳ ರವಾನೆಗೆ ಅಮೆರಿಕದ ಆ್ಯಸ್ಟ್ರೋಬಾಟಿಕ್, ಆರ್ಬಿಟ್ ಬಿಯಾಂಡ್‌ ಹಾಗೂ ಇಂಟ್ಯುಟಿವ್‌ ಮಶಿನ್ಸ್‌ ಸಂಸ್ಥೆಗಳನ್ನು ಪಾಲುದಾರರಾಗಿ ಆಯ್ದುಕೊಂಡಿದೆ. 

ಉಡಾವಣೆ ನಿಗದಿ: ಆರ್ಬಿಟ್ ಬಿಯಾಂಡ್‌ ಸಂಸ್ಥೆ ಸ್ಪೇಸ್‌ ಎಕ್ಸ್‌ ಫಾಲ್ಕನ್‌ 9 ರಾಕೆಟ್‌ ಮೂಲಕ ಸೆಪ್ಟೆಂಬರ್‌ 2020ರಲ್ಲಿ ತನ್ನ ಗಗನನೌಕೆಯನ್ನು ಚಂದ್ರನ ಮೇಲಿನ ಜ್ವಾಲಾಮುಖಿಯ ಮಾರೇ ಇಂಬ್ರಿಯಂ ಕುಳಿಯಲ್ಲಿ ಇಳಿಸಲಿದೆ. 2021 ಜುಲೈ ವೇಳೆಗೆ ಸ್ಪೇಸ್‌ ಎಕ್ಸ್‌ ಸಹಕಾರದೊಂದಿಗೆ ಇಂಟ್ಯುಟಿವ್‌ ಮಶಿನ್ಸ್‌ ಸಂಸ್ಥೆ ಓಶಿಯಾನಸ್‌ ಪ್ರೊಸೆಲ್ಲರಂ ಪ್ರದೇಶದಲ್ಲಿ ಗಗನನೌಕೆ ಇಳಿಸಲಿದೆ. ಆ್ಯಸ್ಟ್ರೋಬಾಟಿಕ್‌ ಸಂಸ್ಥೆಯೂ 2021 ಜುಲೈನಲ್ಲಿ ಲ್ಯಾಕಸ್‌ ಮಾರ್ಟಿಸ್‌ ಕುಳಿಯಲ್ಲಿ ಗಗನನೌಕೆ ಇಳಿಸಲಿದೆ.

ಮಹಿಳಾ ಗಗನಯಾತ್ರಿ: ‘ಆರ್ಟಿಮಿಸ್‌ ಯೋಜನೆಯಡಿ ಮುಂದಿನ 5 ವರ್ಷದಲ್ಲಿ ಮೊದಲ ಮಹಿಳಾ ಗಗನಯಾತ್ರಿ ಹಾಗೂ ಮುಂದಿನ ಪುರುಷ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವುದು ನಮ್ಮ ಗುರಿಯಾಗಿದೆ’ ಎಂದು ನಾಸಾ ಆಡಳಿತಗಾರ ಜಿಮ್ ಬ್ರಿಂಡೆನ್‌ಸ್ಟ್ರೈನ್ ತಿಳಿಸಿದರು.

*
ಮುಂದಿನ ವರ್ಷ ನಾಸಾ ಚಂದ್ರನ ಮೇಲ್ಮೈ ಬಗ್ಗೆ ಹೆಚ್ಚಿನ ತಂತ್ರಜ್ಞಾನ ಸಂಶೋಧನೆಗೆ ಆದ್ಯತೆ ನೀಡಲಿದೆ.
-ಜಿಮ್ ಬ್ರಿಂಡೆನ್‌ಸ್ಟ್ರೈನ್, ನಾಸಾ ಆಡಳಿತಗಾರ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !