ಬಾಹ್ಯಾಕಾಶ ನಿಲ್ದಾಣ ಪ್ರವಾಸಿಗರಿಗೆ ಮುಕ್ತ

ಶುಕ್ರವಾರ, ಜೂನ್ 21, 2019
24 °C
ಮುಂದಿನ ವರ್ಷ ಚಾಲನೆ: ಪ್ರತಿ ರಾತ್ರಿಗೆ 35 ಸಾವಿರ ಡಾಲರ್‌ ಶುಲ್ಕ

ಬಾಹ್ಯಾಕಾಶ ನಿಲ್ದಾಣ ಪ್ರವಾಸಿಗರಿಗೆ ಮುಕ್ತ

Published:
Updated:
Prajavani

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇನ್ನು ಪ್ರವಾಸಿಗರು ಭೇಟಿ ನೀಡಬಹುದು. ಇಂತಹ ಅವಕಾಶವನ್ನು ನಾಸಾ ಕಲ್ಪಿಸುತ್ತಿದೆ.

2020ರಿಂದ ಈ ಯೋಜನೆ ಆರಂಭವಾಗಲಿದೆ. ಪ್ರತಿ ರಾತ್ರಿಗೆ 35 ಸಾವಿರ ಡಾಲರ್‌ (₹24.28 ಲಕ್ಷ) ಶುಲ್ಕ ನಿಗದಿಪಡಿಸಲಾಗಿದೆ ಎಂದು ನಾಸಾ ತಿಳಿಸಿದೆ.

‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ವಾಣಿಜ್ಯ ಚಟುವಟಿಕೆ ಕೈಗೊಳ್ಳಲು ಮುಕ್ತಗೊಳಿಸಲಾಗುವುದು’ ಎಂದು ನಾಸಾ ಮುಖ್ಯ ಹಣಕಾಸು ಅಧಿಕಾರಿ ಜೆಫ್‌ ಡೆವಿಟ್‌ ನ್ಯೂಯಾರ್ಕ್‌ನಲ್ಲಿ ತಿಳಿಸಿದ್ದಾರೆ.

ವಿಶೇಷ ಯೋಜನೆಗಾಗಿ ನಾಸಾ, ‘ಎಲಾನ್‌ ಮಸ್ಕ್ಸ್‌ ಸ್ಪೆಸ್‌ ಎಕ್ಸ್‌’ ಮತ್ತು ’ಬೋಯಿಂಗ್‌’ ಕಂಪನಿಗಳನ್ನು ನಿಯೋಜಿಸಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಗಗನಯಾತ್ರಿಗಳ ವೈದ್ಯಕೀಯ ಪರೀಕ್ಷೆ ಕೈಗೊಳ್ಳುವುದು ಮತ್ತು ತರಬೇತಿ ನೀಡುವುದು ಈ ಕಂಪನಿಗಳ ಜವಾಬ್ದಾರಿಯಾಗಿದೆ ಎಂದು ನಾಸಾ ತಿಳಿಸಿದೆ.

30 ದಿನಗಳ ಪ್ರವಾಸ ಇದಾಗಿದ್ದು, ಪ್ರತಿ ವರ್ಷ 12 ಗಗನ ಯಾತ್ರಿಗಳು ಭೇಟಿ ನೀಡಬಹುದಾಗಿದೆ. ಸಂಪೂರ್ಣ ಪ್ರವಾಸಕ್ಕೆ ಸುಮಾರು 58 ಮಿಲಿಯನ್‌ ಡಾಲರ್‌ (₹402.462 ಕೋಟಿ) ವೆಚ್ಚವಾಗಬಹುದು ಎಂದು ನಾಸಾ ತಿಳಿಸಿದೆ.

 ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಲು ಮತ್ತು ಆಹಾರಕ್ಕೆ, ನೀರಿಗಾಗಿ ಹಾಗೂ ಜೀವ ರಕ್ಷಕ ವ್ಯವಸ್ಥೆಗಾಗಿ ಈ ವೆಚ್ಚ ಮಾಡಲಾಗುವುದು.

ಬಾಹ್ಯಾಕಾಶ ನಿಲ್ದಾಣವನ್ನು ವಾಣಿಜ್ಯ ಬಳಕೆ ಮಾಡಿಕೊಳ್ಳುವುದನ್ನು ನಾಸಾ ಈ ಹಿಂದೆ ನಿಷೇಧಿಸಿತ್ತು. ಗಗನಯಾತ್ರಿಗಳು ಲಾಭಕ್ಕಾಗಿ ಸಂಶೋಧನೆ ಕೈಗೊಳ್ಳುವುದನ್ನು ಸಹ ನಿರ್ಬಂಧಿಸಿತ್ತು.

 2001ರಲ್ಲಿ ಅಮೆರಿಕದ ಉದ್ಯಮಿ ಡೆನ್ನಿಸ್‌ ಟಿಟೊ ಮೊದಲ ಬಾರಿ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಪ್ರವಾಸಿಗ. ಟಿಟೊ ಅವರು ರಷ್ಯಾಗೆ 20 ಮಿಲಿಯನ್‌ ಡಾಲರ್‌ ಪಾವತಿಸಿದ್ದರು.

ಚಂದ್ರ' ಯೋಜನೆಯ ಹೇಳಿಕೆ ನಿಲ್ಲಿಸಿ’

ವಾಷಿಂಗ್ಟನ್‌ (ಪಿಟಿಐ): ‘ಚಂದ್ರನ ಬಳಿ ತೆರಳುವ ಯೋಜನೆ ಕುರಿತು ಮಾತನಾಡುವುದನ್ನು ನಾಸಾ ನಿಲ್ಲಿಸಲಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

’50 ವರ್ಷಗಳ ಹಿಂದೆಯೇ ಅಮೆರಿಕ ಈ ಯೋಜನೆಯಲ್ಲಿ ಯಶಸ್ಸು ಕಂಡಿದೆ. ನಾವು ವೆಚ್ಚ ಮಾಡುತ್ತಿರುವ ಹಣದ ಬಗ್ಗೆ ನಾಸಾ ಮಾತನಾಡಬಾರದು’ ಎಂದು ಟ್ವೀಟ್‌ ಮಾಡಿದ್ದಾರೆ.

‘ಬೃಹತ್‌ ಯೋಜನೆಗಳ ಬಗ್ಗೆ ನಾಸಾ ಗಮನಹರಿಸಬೇಕು. ಮಂಗಳ ಗ್ರಹ, ರಕ್ಷಣೆ ಮತ್ತು ವಿಜ್ಞಾನ ಕ್ಷೇತ್ರಗಳಿಗೆ ಇನ್ನು ಹೆಚ್ಚು ಗಮನ ನೀಡಲಿ' ಎಂದು ಹೇಳಿದ್ದಾರೆ.

ಟ್ರಂಪ್‌ ಅವರ ಈ ಹೇಳಿಕೆ ಸ್ಪಷ್ಟವಾಗಿಲ್ಲ. ಆದರೆ, ಚಂದ್ರನ ಅಧ್ಯಯನಕ್ಕಿಂತಲೂ ಮಂಗಳ ಗ್ರಹದ ಬಗ್ಗೆ ಹೆಚ್ಚು ಗಮನಹರಿಸುವಂತೆ ಸೂಚಿಸಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2014ರ ಹೊತ್ತಿಗೆ ಚಂದ್ರನ ಬಳಿ ತೆರಳುವ ಯೋಜನೆಯನ್ನು ಉಪಾಧ್ಯಕ್ಷ ಮೈಕ್‌ ಪೈನ್ಸ್‌ ಕಳೆದ ಏಪ್ರಿಲ್‌ ತಿಂಗಳಲ್ಲಿ ಪ್ರಕಟಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !