ಸೂರ್ಯನ ಅಧ್ಯಯನಕ್ಕೆ ರಾಕೆಟ್‌

7
ನಾಳೆ ಉಡಾವಣೆಗೆ ನಾಸಾ ವಿಜ್ಞಾನಿಗಳ ಸಿದ್ಧತೆ

ಸೂರ್ಯನ ಅಧ್ಯಯನಕ್ಕೆ ರಾಕೆಟ್‌

Published:
Updated:
Deccan Herald

ವಾಷಿಂಗ್ಟನ್‌: ಸೂರ್ಯನ ಕುರಿತು ಮತ್ತಷ್ಟು ಆಳ ಅಧ್ಯಯನಕ್ಕೆ ಮುಂದಾಗಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಮತ್ತೊಂದು ರಾಕೆಟ್‌ ಉಡಾವಣೆಗೆ ಸಿದ್ಧತೆ ನಡೆಸಿದೆ.

ಇದೇ 7ರಂದು ನ್ಯೂ ಮೆಕ್ಸಿಕೊದಿಂದ ಈ ರಾಕೆಟ್‌ ಉಡಾವಣೆಯಾಗಲಿದೆ. ‘ಫೋಕಸಿಂಗ್‌ ಆಪ್ಟಿಕ್ಸ್‌ ಎಕ್ಸ್‌–ರೇ ಸೋಲಾರ್‌ ಇಮೇಜರ್‌’ (ಫೋಕ್ಸಸಿ) ಎನ್ನುವ ಹೆಸರಿನ ಈ ರಾಕೆಟ್‌ನ ಕಾರ್ಯಾಚರಣೆಯನ್ನು ಮೂರನೇ ಬಾರಿ ಕೈಗೊಳ್ಳಲಾಗಿದೆ.

2012 ಮತ್ತು 2014ರಲ್ಲಿ ‘ಫೋಕ್ಸಸಿ’ ಕಾರ್ಯಾಚರಣೆ ಕೈಗೊಂಡಿತ್ತು. ಈ ಬಾರಿ ರಾಕೆಟ್‌ಗಾಗಿಯೇ ಹೊಸ ಟೆಲಿಸ್ಕೋಪ್‌ ವಿನ್ಯಾಸಗೊಳಿಸಲಾಗಿದೆ. ಭೂಮಿಯ ಮೇಲ್ಮೈಯಿಂದ 50ರಿಂದ 1,500 ಕಿಲೋ ಮೀಟರ್‌ ದೂರದವರೆಗೆ ಉಪಕರಣಗಳನ್ನು ಈ ರಾಕೆಟ್‌ ಕೊಂಡೊಯ್ಯುತ್ತದೆ. ಭೂಮಿಯ ಮೇಲಿನ ವಾತಾವರಣದಲ್ಲಿ 15 ನಿಮಿಷ ಸಂಚರಿಸುವ ಈ ರಾಕೆಟ್‌ ಮತ್ತೆ ನೆಲಕ್ಕೆ ಉರುಳಲಿದೆ. ‘ಸೌಂಡಿಂಗ್‌ ರಾಕೆಟ್‌’ ಎಂದು ಇದನ್ನು ಕರೆಯಲಾಗುತ್ತಿದ್ದು, ಸೂರ್ಯನಿಂದ ತಾಪಮಾನದಲ್ಲಿ ಉಂಟಾಗುವ ವ್ಯತ್ಯಾಸ ಮತ್ತು ಬೆಳಕಿನ ಪ್ರಮಾಣ ಕುರಿತ ಸಂಶೋಧನೆಗಾಗಿಯೇ ಬಳಸಲಾಗುತ್ತಿದೆ.

‘ಸೂರ್ಯನನನ್ನು ನೇರವಾಗಿ ದಿಟ್ಟಿಸಿ ನೋಡುವ ರೀತಿಯಲ್ಲಿ ಫೋಕ್ಸಸಿ ರೂಪಿಸಲಾಗಿದೆ. ಸೂರ್ಯನ ಅಧ್ಯಯನ ದೃಷ್ಟಿಯಿಂದ ಮೊದಲ ಬಾರಿಗೆ ಈ ರೀತಿಯ ರಾಕೆಟ್‌ ಅಭಿವೃದ್ಧಿಪಡಿಸಲಾಗಿದೆ’ ಎಂದು ಅಮೆರಿಕದ ಮಿನ್ನೆಸೊಟಾ ವಿಶ್ವವಿದ್ಯಾಲಯದ ಬಾಹ್ಯಾಕಾಶ ವಿಜ್ಞಾನಿ ಲಿಂಡ್ಸೆ ಗ್ಲೆಸೆನೆರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !