ಪ್ರಕೃತಿ ಚಿಕಿತ್ಸೆ ಎಲ್ಲರಿಗೂ ಸಿಗುವಂತಾಗಬೇಕು

7
ವಿಚಾರ ಸಂಕಿರಣದಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಆಶಯ

ಪ್ರಕೃತಿ ಚಿಕಿತ್ಸೆ ಎಲ್ಲರಿಗೂ ಸಿಗುವಂತಾಗಬೇಕು

Published:
Updated:
ಕಾರ್ಯಕ್ರಮದಲ್ಲಿ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದ ಸ್ಥಾಪಕ ಸೀತಾರಾಮ್ ಜಿಂದಾಲ್‌, ಸಚಿವ ಯು.ಟಿ. ಖಾದರ್, ಸಚ್ಚಿದಾನಂದ ಇದ್ದರು.

ಬೆಂಗಳೂರು: ‘ರಾಜ್ಯದ ಎಲ್ಲ ಆಯುರ್ವೇದ ಆಸ್ಪತ್ರೆಗಳಲ್ಲಿ ಪ್ರಕೃತಿ ಚಿಕತ್ಸಾ ಕೇಂದ್ರ ಆರಂಭಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.

‘ಜಿಂದಾಲ್‌ ನೇಚರ್‌ಕ್ಯೂರ್‌ ಇನ್‌ಸ್ಟಿಟ್ಯೂಟ್‌’ ಆಶ್ರಯದಲ್ಲಿ ಜಿಂದಾಲ್ ನಗರದ ಶನಿವಾರ ನಡೆದ ‘ಪ್ರಕೃತಿ ಚಿಕಿತ್ಸೆ ಮತ್ತು ಯೋಗ; ಇತ್ತೀಚಿನ ಪ್ರವೃತ್ತಿಗಳು’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಹಿಂದೆ ಆರೋಗ್ಯ ಸಚಿವನಾಗಿದ್ದಾಗ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಆದ್ಯತೆ ನೀಡುವ ಬಗ್ಗೆ ಗಮನ ಹರಿಸಿದ್ದೆ. ಪ್ರಕೃತಿ ಚಿಕಿತ್ಸೆ ಎಲ್ಲರಿಗೂ ಸಿಗುವಂತಾಗಬೇಕಾದರೆ ಒಂದೇ ಸೂರಿನಡಿ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ, ಯುನಾನಿ ಪದ್ಧತಿಯ ಚಿಕಿತ್ಸೆ ಮತ್ತು ಉಪಚಾರಗಳು ಲಭ್ಯ ಇರುವಂತೆ ನೋಡಿಕೊಳ್ಳಬೇಕಾಗಿದೆ. ಪ್ರತಿ ಮನೆಯಲ್ಲೂ ತುಳಸಿ, ಬೇವಿನಂತಹ ಔಷಧೀಯ ಗಿಡಗಳನ್ನು ಬೆಳೆಸಬೇಕು. ಆಗ ಅನೇಕ ಕಾಯಿಲೆಗಳಿಗೆ ಕಡಿವಾಣ ಹಾಕಬಹುದು’ ಎಂದು ಅವರು ಹೇಳಿದರು.

‘ನಾವು ಆರೋಗ್ಯವಂತ ಸಮಾಜವನ್ನು ಹುಟ್ಟು ಹಾಕಬೇಕೇ ಹೊರತು, ಆಸ್ಪತ್ರೆಗಳನ್ನು ನಿರ್ಮಿಸುವುದಲ್ಲ. ಪ್ರಕೃತಿ ಹಾಗೂ ಯೋ‌‌ಗದಿಂದ ಎಲ್ಲಾ ಸಮಸ್ಯೆಗೂ ಪರಿಹಾರ ಸಾಧ್ಯ’ ಎಂದು ಅವರು ತಿಳಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಎಸ್‌. ಸಚ್ಚಿದಾನಂದ ಮಾತನಾಡಿ, ‘ಆಲೋಪತಿ, ಆಯುರ್ವೇದ, ಸಿದ್ದ, ಯುನಾನಿ, ಹೋಮಿಯೋಪತಿ ಈ ಎಲ್ಲಾ ಪದ್ಧತಿಗಳನ್ನು ಸಮಗ್ರ ಚಿಕಿತ್ಸಾ ವಿಧಾನವಾಗಿ ಕಾಣುವಂತಾಗಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !