ಉದ್ಯೋಗ ಕೊಡಿಸುವುದಾಗಿ ವಂಚನೆ; ಮೂವರ ಸೆರೆ

7
naukari fraud arrest

ಉದ್ಯೋಗ ಕೊಡಿಸುವುದಾಗಿ ವಂಚನೆ; ಮೂವರ ಸೆರೆ

Published:
Updated:

ಬೆಂಗಳೂರು: ಉದ್ಯೋಗ ಹಾಗೂ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ನಂಬಿಸಿ ಆಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುಂಕದಕಟ್ಟೆಯ ಮನುಕುಮಾರ್, ಬಿಹಾರದ ಸಂದೀಪ್ ಕುಮಾರ್ ಹಾಗೂ ವಿಕಾಸ್ ಕುಮಾರ್ ಬಂಧಿತರು. ವಂಚನೆ ಸಂಬಂಧ ಬಾಗಲಗುಂಟೆ ಹಾಗೂ ಇಂದಿರಾನಗರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು.

‘ಬಾಗಲಗುಂಟೆಯಲ್ಲಿ ಯುವತಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಮನುಕುಮಾರ್, ಅವರ ಮೂಲಕವೇ ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸಿದ್ದ. ‘ನನಗೆ ಬೆಸ್ಕಾಂನಲ್ಲಿ ಅಧಿಕಾರಿಗಳು ಪರಿಚಯವಿದ್ದಾರೆ. ಹಣ ಕೊಟ್ಟರೆ ಕೆಲಸ ಕೊಡಿಸುತ್ತೇನೆ’ ಎಂದು ಹೇಳಿ, ನಾಲ್ವರು ಆಕಾಂಕ್ಷಿಗಳಿಂದ ತಲಾ ₹2 ಲಕ್ಷ ಪಡೆದಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ, ಆಕಾಂಕ್ಷಿಯೊಬ್ಬರಿಗೆ ನಕಲಿ ನೇಮಕಾತಿ ಪತ್ರ ಕೊಟ್ಟಿದ್ದ. ಆ ಸಂಬಂಧ ಆಕಾಂಕ್ಷಿ ನೀಡಿದ್ದ ದೂರಿನಡಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದರು.

ಎಂಬಿಬಿಎಸ್ ಸೀಟು ಕೊಡಿಸುವುದಾಗಿ ವಂಚನೆ: ‘ಆರೋಪಿಗಳಾದ ಬಿಹಾರದ ಸಂದೀಪ್ ಕುಮಾರ್ ಹಾಗೂ ವಿಕಾಸ್ ಕುಮಾರ್, ಬೆಂಗಳೂರಿನ ಹಲವು ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ’ ಎಂದು ಇಂದಿರಾನಗರ ಪೊಲೀಸರು ಹೇಳಿದರು.

‘ನಕಲಿ ದಾಖಲೆ ಕೊಟ್ಟು ಸಿಮ್ ಖರೀದಿಸಿದ್ದ ಆರೋಪಿಗಳು, ‘ವೈದ್ಯಕೀಯ ಸೀಟು ಬೇಕಾದರೆ ಸಂಪರ್ಕಿಸಿ’ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರ ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದ್ದರು. ತಮ್ಮನ್ನು ಸಂಪರ್ಕಿಸುತ್ತಿದ್ದವರಿಂದ ಆನ್‌ಲೈನ್ ಮೂಲಕ ಹಣ ಜಮೆ ಮಾಡಿಸಿಕೊಂಡು ವಂಚಿಸುತ್ತಿದ್ದರು. ಆ ಬಗ್ಗೆ ಪೋಷಕರೊಬ್ಬರು ದೂರು ನೀಡಿದ್ದರು’ ಎಂದರು. 

₹5 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ಜ್ಯೋತಿಷಿ  ಬಂಧನ

ಬೆಂಗಳೂರು:‌ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯೊಬ್ಬರಿಂದ ₹5 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ಜ್ಯೋತಿಷಿ ಗಣೇಶರಾಜನ್ ಎಂಬುವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಆಶಾ ಎಂಬುವರು ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಸಹೋದರ ಗಂಗಾರಾಜನ್ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳಿಬ್ಬರು ಸೇರಿಕೊಂಡು, ಮುನೇಶ್ವರ ಬ್ಲಾಕ್‌ನಲ್ಲಿ ಜ್ಯೋತಿಷ್ಯ ಕೇಂದ್ರ ತೆರೆದಿದ್ದರು. ಶಾಸ್ತ್ರ ಕೇಳಲೆಂದು ಹೋಗಿದ್ದ ಆಶಾ ಅವರನ್ನು ಆತ್ಮೀಯವಾಗಿ ಮಾತನಾಡಿಸಿ, ‘ನಮಗೆ ಸಚಿವರ ಪರಿಚಯವಿದೆ. ಹಣ ಕೊಟ್ಟರೆ, ಸರ್ಕಾರಿ ಕೆಲಸ ಕೊಡಿಸುತ್ತೇವೆ’ ಎಂದು ಹೇಳಿದ್ದರು. ಅದನ್ನು ನಂಬಿದ್ದ ಆಶಾ, ₹5 ಲಕ್ಷ ಕೊಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಹಣ ಪಡೆದ ನಂತರ ಆರೋಪಿಗಳು, ಯಾವುದೇ ಕೆಲಸ ಕೊಡಿಸಿರಲಿಲ್ಲ. ನೊಂದ ಯುವತಿ, ಹಣ ವಾಪಸ್ ಕೊಡುವಂತೆ ಕೇಳಿ
ದಾಗ ಬೆದರಿಕೆ ಹಾಕಿದ್ದರು. ಅವಾ
ಗಲೇ ಯುವತಿ, ಠಾಣೆಗೆ ಬಂದು ದೂರು ನೀಡಿದ್ದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !