ಶುರುವಾಯಿತು ಶರನ್ನವರಾತ್ರಿ ಸಂಭ್ರಮ

7

ಶುರುವಾಯಿತು ಶರನ್ನವರಾತ್ರಿ ಸಂಭ್ರಮ

Published:
Updated:
Deccan Herald

ನವರಾತ್ರಿ ಇದು ಭಾರತೀಯ ಪರಂಪರೆಯ ಹಬ್ಬಗಳಲ್ಲೊಂದು. ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ಕನ್ನಡಿಗರು ಈ ಹಬ್ಬವನ್ನು ದುರ್ಗಾದೇವಿಯ ಪೂಜೆ ಮಾಡುವ ಮೂಲಕ  ನವರಾತ್ರಿ ಹಬ್ಬವನ್ನು ಆಚರಿಸುತ್ತಾರೆ. ಜಗನ್ಮಾತೆಯನ್ನು ನವವಿಧವಾಗಿ ಪೂಜಿಸುವುದು ಈ ನವರಾತ್ರಿಯ ವೈಶಿಷ್ಟ.

9 ರಾತ್ರಿಗಳು, ದೇವಿಯ ಒಂಬತ್ತು ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೆಯ ದಿನ ‘ವಿಜಯ ದಶಮಿ’ ಹಬ್ಬವನ್ನು ಆಚರಿಸುತ್ತಾರೆ. ರೈತರು ತಮ್ಮ ಜಮೀನಿಗೆ ತೆರಳಿ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆ ದಿನ ಸಂಜೆ ಬನ್ನಿ ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯಾಗಿದೆ. ಇದೇ ದಿನ ಮೈಸೂರಿನಲ್ಲಿ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ  ನಡೆಯುತ್ತದೆ.  

ನವರಾತ್ರಿಯ ಆಚರಣೆ ಹೇಗೆ ?
ನವರಾತ್ರಿ ಒಂಬತ್ತು ರಾತ್ರಿಗಳ ಸಮೂಹ.  9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ. ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ಇರುತ್ತದೆ. 

ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ. ದೇವಜಾತ ದುರ್ಗಾ ಪೂಜಾ ಮಹಿಷಾಸುರ ಮರ್ಧಿನಿ ದುರ್ಗಾ ಪೂಜಾ ಶೈಲ ಜಾತಾ ದುರ್ಗಾ ಪೂಜಾ.

ದೂಮೃಹಾ ದುರ್ಗಾ ಪೂಜಾ ಚಂಡಿ ದುರ್ಗಾ ಪೂಜಾ. ರಕ್ತ ಬೀಜ ದುರ್ಗಾ ಪೂಜಾನಿ ಶುಂಭ ಹಾ ದುರ್ಗಾಪೂಜಾ (ದುರ್ಗಾಷ್ಟಮಿ)
ಒಂಬತ್ತನೆಯ ದಿನ ಮಹಾಲಕ್ಷ್ಮಿ ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯ ಸಪ್ತಮಿಗೆ ಕರ್ನಾಟಕದಲ್ಲಿ ವಿಶೇಷ ಸ್ಥಾನವಿದೆ. ಸಪ್ತಮಿಯ ಮೂಲಾನಕ್ಷತ್ರದಂದು ಚಿನ್ನ, ಬೆಳ್ಳಿ, ಕಬ್ಬಿಣದ ಆಯುಧಗಳನ್ನಿಟ್ಟು ಪೂಜೆ ನಡೆಸಲಾಗುತ್ತದೆ. ಹೀಗೆ ಆಯುಧಪೂಜೆ ಸಂಪನ್ನವಾಗುತ್ತದೆ.

ದಸರೆ (ವಿಜಯದಶಮಿ) ದಶಮಿಯಂದು ರಾವಣನ ಮೇಲೆ ಶ್ರೀರಾಮ ವಿಜಯ ಸಾಧಿಸಿದ ನೆನ್ನಲಾಗಿದೆ. ಕರ್ನಾಟಕದಲ್ಲಿ ದಸರಾವನ್ನು ನಾಡಹಬ್ಬವಾಗಿ ಆಚರಿಸಲಾಗುತ್ತದೆ. ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿಯನ್ನು ಬಂಗಾರದ ಪಲ್ಲಕ್ಕಿಯಲ್ಲಿ ಕೂರಿಸಿ ರಾಜ ಮರ್ಯಾದೆಯ ಮೂಲಕ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !