ಓದುವ ಕನಸಿಗೆ ನೀರೆರೆಯುತ್ತೀರಾ?

7
ಶುಲ್ಕ ಪಾವತಿಗೆ ಇಂದೇ ಕೊನೆಯ ದಿನ

ಓದುವ ಕನಸಿಗೆ ನೀರೆರೆಯುತ್ತೀರಾ?

Published:
Updated:
Deccan Herald

ಬೆಂಗಳೂರು: ಪಿಯು ಪರೀಕ್ಷೆಯಲ್ಲಿ ರಸಾಯನ ವಿಜ್ಞಾನ, ಗಣಿತ, ಕಂಪ್ಯೂಟರ್‌ ಸೈನ್ಸ್‌ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಇವಳು. ಕಡು ಬಡತನದ ನಡುವೆಯೂ ಈ ಸಾಧನೆ ಮಾಡಿದ ಹುಡುಗಿ ಈಗ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಕಲಿಯುವಾಸೆ ಕಮರಿ ಹೋಗುತ್ತದೇನೋ ಎಂಬ ಆತಂಕದಲ್ಲಿದ್ದಾಳೆ.

ಉನ್ನತ ವ್ಯಾಸಂಗದ ಅದಮ್ಯ ಕನಸು ಕಟ್ಟಿಕೊಂಡಿರುವ ನಗರದ ವಿದ್ಯಾರ್ಥಿನಿ ಎ.ಲಾವಣ್ಯಗೆ ನಗರದ ನಿಟ್ಟೆ ಮೀನಾಕ್ಷಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೀಟು ಲಭಿಸಿದೆ. ಆದರೆ, ಅದಕ್ಕೆ ಈಗ ₹ 83 ಸಾವಿರ ಶುಲ್ಕ ಕಟ್ಟಬೇಕು. ಆದರೆ, ಮನೆಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ಆಕೆಯ ಅಮ್ಮ– ಹೊಲಿಗೆ ಮಾಡುವ ಅಪ್ಪನಿಗೆ ಅಷ್ಟೊಂದು ಹಣ ಹೊಂದಿಸುವ ಶಕ್ತಿ ಇಲ್ಲ.

‘ಇದೇ 13 ( ಸೋಮವಾರ) ಶುಲ್ಕ ಕಟ್ಟದಿದ್ದರೆ, ಸೀಟು ರದ್ದಾಗುತ್ತದೆ. ಸರ್ಕಾರಿ ಶುಲ್ಕ ₹53 ಸಾವಿರ ಹಾಗೂ ಕಾಲೇಜು ಶುಲ್ಕ ₹30 ಸಾವಿರ ಕಟ್ಟಬೇಕಿದೆ. ಬ್ಯಾಂಕ್‌ ವ್ಯವಹಾರ ಅವಧಿ ಮುಗಿಯುವುದಕ್ಕೆ ಮುನ್ನ ಇಷ್ಟೊಂದು ಹಣ ಹೊಂದಿಸಬೇಕಿದೆ. ಆದರೆ, ಅಷ್ಟರಲ್ಲಿ ಯಾರಾದರೂ ಸಹಾಯ ಮಾಡಿದರೆ ನನ್ನ ಓದು ಮುಂದುವರಿಯುತ್ತದೆ’ ಎಂದು ಲಾವಣ್ಯ ತನ್ನ ಸ್ಥಿತಿಯನ್ನು ‘ಪ್ರಜಾವಾಣಿ’ಗೆ ವಿವರಿಸಿದಳು.

‘ಅಪ್ಪ– ಅಮ್ಮನ ದುಡಿಮೆಯಿಂದ ಬರುವ ಆದಾಯ, ಮನೆ ಖರ್ಚಿಗೆ ಸರಿಹೋಗುತ್ತದೆ. ಈಗ ಸಾಲ ಮಾಡುವಷ್ಟು ಸಮಯಾವಕಾಶವೂ ನನ್ನ ಬಳಿ ಇಲ್ಲ. ಅಮ್ಮ ಕೆಲಸ ಮಾಡುವ ಒಂದು ಮನೆಯವರು ನನ್ನ ಪಿಯುಸಿ ಓದಿಗೆ ನೆರವಾಗಿದ್ದರು’ ಎಂದು ನೋವನ್ನು ಹಂಚಿಕೊಂಡರು.
ಈ ವಿದ್ಯಾರ್ಥಿನಿಗೆ ಸಹಾಯ ಮಾಡಬಯಸುವವರು ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ ಖಾತೆ ಸಂಖ್ಯೆ 64179097966 (IFSC: SBIN 0040367) ಹಣ ಜಮೆ ಮಾಡಬಹುದು. ಸಂಪರ್ಕಕ್ಕೆ: 9900470366

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !