ನೆರವಿಗೆ ಸ್ಪಂದಿಸಿದ ‘ಪ್ರಜಾವಾಣಿ’ ಓದುಗರು: ಕಾಲೇಜು ಶುಲ್ಕ ಕಟ್ಟಿದ ಲಾವಣ್ಯ

7

ನೆರವಿಗೆ ಸ್ಪಂದಿಸಿದ ‘ಪ್ರಜಾವಾಣಿ’ ಓದುಗರು: ಕಾಲೇಜು ಶುಲ್ಕ ಕಟ್ಟಿದ ಲಾವಣ್ಯ

Published:
Updated:
Deccan Herald

ಬೆಂಗಳೂರು: ಕಂಪ್ಯೂಟರ್‌ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆಯುವ ಲಾವಣ್ಯ ಕನಸು ಈಗ ನನಸಾಗಿದೆ. ಸೋಮವಾರ ಒಂದೇ ದಿನದಲ್ಲಿ ಆಕೆಯ ಬ್ಯಾಂಕ್‌ ಖಾತೆಗೆ ₹ 1ಲಕ್ಷ ಹಣ ಸಂದಾಯವಾಗಿದೆ.

ಶುಲ್ಕ ಕಟ್ಟಲು ಸಾಧ್ಯವಾಗದ ಬಡ ವಿದ್ಯಾರ್ಥಿನಿಯ ಕುರಿತು ‘ಪ್ರಜಾವಾಣಿ’ ಸೋಮವಾರ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಓದುಗರು, ಲಾವಣ್ಯ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವ ಮೂಲಕ ಸಹಾಯಹಸ್ತ ಚಾಚಿದ್ದಾರೆ. ಇದರಿಂದ ನಿಟ್ಟೆ ಮೀನಾಕ್ಷಿ ಎಂಜಿನಿ
ಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯುವಲ್ಲಿ ಆಕೆ ಯಶಸ್ವಿಯಾಗಿದ್ದಾಳೆ.

‘ಒಂದೇ ದಿನ ₹1 ಲಕ್ಷ ಬಂದಿದೆ. ಪತ್ರಿಕೆಗೆ ಹಾಗೂ ಜನರಿಗೆ ನಾನು ಆಭಾರಿಯಾಗಿದ್ದೇನೆ. ಸಿಇಟಿ ಶುಲ್ಕ ₹ 53 ಸಾವಿರವನ್ನು ಕಟ್ಟಿದ್ದೇವೆ. ಮಂಗಳವಾರ ಕಾಲೇಜಿನ ಶುಲ್ಕವನ್ನೂ ಕಟ್ಟಲಿದ್ದೇವೆ’ ಎಂದು ಲಾವಣ್ಯ ತಂದೆ ಅನಂತ್‌ ಹೇಳಿದರು. 
ಇದನ್ನೂ ಓದಿರಿ...
ಓದುವ ಕನಸಿಗೆ ನೀರೆರೆಯುತ್ತೀರಾ?

ಬರಹ ಇಷ್ಟವಾಯಿತೆ?

 • 45

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !