ಬಾಲಕನ ಚಿಕಿತ್ಸೆಗೆ ಸಾರ್ವಜನಿಕರ ಸಹಾಯ ಹಸ್ತ

7

ಬಾಲಕನ ಚಿಕಿತ್ಸೆಗೆ ಸಾರ್ವಜನಿಕರ ಸಹಾಯ ಹಸ್ತ

Published:
Updated:
Deccan Herald

ಬೆಂಗಳೂರು: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 15 ವರ್ಷದ ಬಾಲಕ ಜಾಬರ್‌ ಅಲಿ ಸಾರ್ವಜನಿಕರ ನೆರವಿನಿಂದ ಚಿಕಿತ್ಸೆ ಪಡೆದುಕೊಂಡು ಈಗ ಚೇತರಿಸಿಕೊಂಡಿದ್ದಾನೆ.

ಕೋಲ್ಕತ್ತದಲ್ಲಿ ಕಟ್ಟಡ ಕಾರ್ಮಿಕರಾಗಿರುವ ಮುಜಬುರ್‌ ರೆಹಮಾನ್‌ ಅವರ ಎರಡನೇ ಮಗ ಅಲಿ, ಎರಡು ವರ್ಷದಿಂದ ಮುಖದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಇತ್ತೀಚೆಗೆ ಆತನ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಕಿಮೋಥೆರಪಿ ಹಾಗೂ ಆಸ್ಪತ್ರೆಯ ವೆಚ್ಚಕ್ಕಾಗಿ ಕುಟುಂಬದವರು ₹2 ಲಕ್ಷ ಹೊಂದಿಸಬೇಕಿತ್ತು. ದಿಕ್ಕುತೋಚದೆ ಕಂಗಾಲಾಗಿದ್ದ ಕುಟುಂಬಕ್ಕೆ ಮಿಲಾಪ್‌ ಸಂಸ್ಥೆಯವರು ಹಾಗೂ ಸಾರ್ವಜನಿಕರು ಆರ್ಥಿಕ ಸಹಾಯ ಮಾಡಿದ್ದರು. ಬಾಲಕನಿಗೆ ಆರಂಭಿಕ ಹಂತದ ಚಿಕಿತ್ಸೆ ಪೂರ್ಣಗೊಂಡಿದೆ.

‘ವೈದ್ಯರು ಈಗಾಗಲೇ ಮೂರು ಬಾರಿ ಕಿಮೋಥೆರಪಿ ಮಾಡಿದ್ದಾರೆ. ಇನ್ನೂ 15 ಬಾರಿ ಮಾಡಬೇಕು. ಸದ್ಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಂಪೂರ್ಣ ಗುಣಮುಖನಾಗುವ ಭರವಸೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ’ ಎಂದು ಮುಜಬರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !