ಭಾರತದ ರಾಯಭಾರಿ: ನೀಲಾಂಬರ್‌ ಹೆಸರು ಸೂಚಿಸಿದ ನೇಪಾಳ

7

ಭಾರತದ ರಾಯಭಾರಿ: ನೀಲಾಂಬರ್‌ ಹೆಸರು ಸೂಚಿಸಿದ ನೇಪಾಳ

Published:
Updated:
Deccan Herald

ಕಠ್ಮಂಡು: ಮಾಜಿ ಕಾನೂನು ಸಚಿವ ಹಾಗೂ ಹಿರಿಯ ರಾಜಕಾರಣಿ ನೀಲಾಂಬರ್‌ ಆಚಾರ್ಯ ಅವರನ್ನು ಭಾರತದ ರಾಯಭಾರಿಯಾಗಿ ನೇಪಾಳ ಸರ್ಕಾರ ನೇಮಕ ಮಾಡಿದೆ. 

ನೇಪಾಳದ ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೀಪ್‌ ಕುಮಾರ್ ಉಪಾಧ್ಯಾಯ ಅವರು ರಾಜೀನಾಮೆ ನೀಡಿದ ನಂತರ ಈ ಸ್ಥಾನ ತೆರವಾಗಿತ್ತು. ನೀಲಾಂಬರ್ ಅವರ ಹೆಸರನ್ನು ಅನುಮೋದನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸಲಾಗಿದೆ. ನಂತರ ವಿದೇಶಾಂಗ ಸಚಿವಾಲಯಕ್ಕೆ ರವಾನಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !