ನಾಸಾದಿಂದ ಹೊಸ ಗ್ರಹ ಸಂಶೋಧನೆ

7
ಅತಿ ತಂಪಾದ – ಭೂಮಿಗಿಂತ ದೊಡ್ಡದಾದ ಗ್ರಹ ಪತ್ತೆ

ನಾಸಾದಿಂದ ಹೊಸ ಗ್ರಹ ಸಂಶೋಧನೆ

Published:
Updated:

ಬೋಸ್ಟನ್‌: ನಾಸಾದ ಬಾಹ್ಯಾಕಾಶ ನೌಕೆಯೊಂದು ನಮ್ಮ ಸೌರವ್ಯೂಹ ಆಚೆಗೆ ನೂತನ ಗ್ರಹವೊಂದನ್ನು ಪತ್ತೆ ಹಚ್ಚಿದೆ. ಭೂಮಿಯಿಂದ 53 ಜ್ಯೋತಿರ್‌ವರ್ಷಗಳ ದೂರದಲ್ಲಿ ಕುಬ್ಜನಕ್ಷತ್ರವೊಂದರ (ಕಡಿಮೆ ಪ್ರಕಾಶಮಾನದ) ಬಳಿಯಲ್ಲಿ ಈ ಗ್ರಹವು ಸುತ್ತುತ್ತಿದೆ.

ಕಳೆದ ಏಪ್ರಿಲ್‌ನಲ್ಲಿ ಹೊಸ ಗ್ರಹದ ಶೋಧನೆಗೆಂದೇ ಉಡಾವಣೆ ಮಾಡಲಾಗಿರುವ ಗ್ರಹ ಸಮೀಕ್ಷಾ ಉಪಗ್ರಹ (ಟೆಸ್‌) ಪತ್ತೆ ಹಚ್ಚಲಾಗಿರುವ ಮೂರನೇ ಹೊಸ ಗ್ರಹವಿದು. ಇದಕ್ಕೆ, HD 21749b ಎಂದು ಹೆಸರಿಡಲಾಗಿದೆ. ನೂತನ ಮೂರು ಗ್ರಹಗಳ ‍ಪೈಕಿ, ಇದರ ಪರಿಭ್ರಮಣ ಅವಧಿ ಹೆಚ್ಚು ಎಂದು ಟೆಸ್‌ ಹೇಳಿದೆ.

ನೂತನ ಗ್ರಹದ ಲಕ್ಷಣಗಳು

* HD 21749b ನೂತನ ಗ್ರಹದ ಮೇಲ್ಮೈ ತಾಪಮಾನ 300 ಡಿಗ್ರಿ ಫ್ಯಾರನ್‌ಹೀಟ್‌

* ಸೌರಮಂಡಲದಲ್ಲಿಯೇ ಇದು ಅತಿ ಕಡಿಮೆ ತಾಪಮಾನದ ಗ್ರಹ

* ಈ ಗ್ರಹದ ಪರಿಭ್ರಮಣ ಅವಧಿ 36 ದಿನಗಳು

* ಭೂಮಿಗಿಂತ ಗಾತ್ರದಲ್ಲಿ ಮೂರು ಪಟ್ಟು ದೊಡ್ಡದು

* ಅನಿಲದಿಂದ (ಜಲಜನಕ ಹೆಚ್ಚು) ಕೂಡಿರುವ ಗ್ರಹ

* ನೆಪ್ಚೂನ್‌, ಯುರೇನಸ್‌ಗಿಂತ ಹೆಚ್ಚು ಸಾಂದ್ರತೆ ಹೊಂದಿರುವ ಗ್ರಹ

**

ಟೆಸ್‌ ಹೊಸದಾಗಿ ಕಂಡು ಹಿಡಿದ ಮೂರು ಗ್ರಹಗಳ ಪೈಕಿ HD 21749bನ ಪರಿಭ್ರಮಣ ಅವಧಿ ಹೆಚ್ಚಾಗಿದೆ. ಅತಿ ತಂಪಾದ ಗ್ರಹ ಇದಾಗಿದೆ

–ಡಯಾನಾ ಡ್ರಾಗೊಮಿರ್‌, ಮಸಾಚುಸೆಟ್ಸ್‌ ವಿವಿ ಸಂಶೋಧಕಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !