ಹೊಸ ವ್ಯಾಗನ್‌ ಆರ್ ಬುಕ್ಕಿಂಗ್ ಆರಂಭ

7
ಹೊಸ ವಿನ್ಯಾಸ, ಒಳಾಂಗಣದಲ್ಲೂ ನವೀನ

ಹೊಸ ವ್ಯಾಗನ್‌ ಆರ್ ಬುಕ್ಕಿಂಗ್ ಆರಂಭ

Published:
Updated:

ಮಾರುತಿ ಸುಜುಕಿ ಕಂಪನಿಯ ಕಾರುಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಸುಸ್ಥಿರತೆ ಕಾಯ್ದುಕೊಂಡಿದ್ದು ವ್ಯಾಗನ್‌ ಆರ್ ಕಾರು. ಆಲ್ಟೊ ಸರಣಿಯ ಕಾರುಗಳು ಕುಟುಂಬ ಪ್ರಯಾಣಕ್ಕೆ ಚಿಕ್ಕದಾಗುತ್ತದೆ ಎಂದು ಎನಿಸಿದ ಗ್ರಾಹಕರ ಮುಂದಿನ ಆಯ್ಕೆ ವ್ಯಾಗನ್ ಆರ್ ಆಗಿರುತ್ತಿತ್ತು.

ಹೀಗಾಗಿಯೇ ವ್ಯಾಗನ್‌ ಆರ್‌ನಲ್ಲಿ ನಮೂನೆ ನಮೂನೆ ಕಾರುಗಳನ್ನು ಕಂಪನಿ ಮಾರುಕಟ್ಟೆಗೆ ಪರಿಚಯಿಸುತ್ತಾ ಹೋಯಿತು. ಇತ್ತೀಚೆಗೆ ಗೇರ್ ಸಹಿತ, ಗೇರ್‌ ರಹಿತ (ಆಟೊಗೇರ್) ಕಾರುಗಳನ್ನು ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಮಾತ್ರವಲ್ಲ, ಗೇರ್ ರಹಿತ ಮತ್ತು ಸಹಿತ ಎರಡೂ ಆಪ್ಷನ್ ಒಂದೇ ಕಾರಿನಲ್ಲಿರುವಂತಹ ಮಾದರಿಯನ್ನು ಬಿಡುಗಡೆ ಮಾಡಿತ್ತು.

2019ಕ್ಕೆ ಕಂಪನಿ ಮತ್ತೊಂದು ಹೊಸ ಆವೃತ್ತಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಮತ್ತಷ್ಟು ವೈಶಿಷ್ಟ್ಯ ಮತ್ತು ವಿನ್ಯಾಸವನ್ನು ಹೊತ್ತು ಬರುತ್ತಿರುವ ಈ ಕಾರು ಜನವರಿ 23ರಂದು ಕಾರು ಮಾರುಕಟ್ಟೆಗೆ ಇಳಿಯಲಿದೆ. ಇದಕ್ಕಾಗಿ ದೇಶದಾದ್ಯಂತ ಮಾರುತಿ ಕಂಪನಿಯ ಅಧಿಕೃತ ಡೀಲರ್‌ಗಳ ಬಳಿ ₹11000 ಹಣವನ್ನು ಆರಂಭಿಕವಾಗಿ ಪಾವತಿಸಿ ಬುಕ್ಕಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಕಂಪನಿಯ ವೆಬ್‌ಸೈಟ್‌ ಮೂಲಕ ಆನ್‌ಲೈನ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕೆಲ ತಿಂಗಳುಗಳ ಹಿಂದಷ್ಟೆ ಬಿಡುಗಡೆಯಾದ ನ್ಯೂ ಜನರೇಷನ್ ಸ್ವಿಫ್ಟ್ ಫ್ಯಾಟ್‌ಫಾರ್ಮ್ ಅಡಿಯಲ್ಲೇ ವ್ಯಾಗನ್ ಆರ್ ಕೂಡಾ ಅಭಿವೃದ್ಧಿಗೊಂಡಿದ್ದು, ವ್ಯಾರ್ಪ್ ಮಾದರಿಯ ಹೆಡ್‌ಲ್ಯಾಂಪ್, ತ್ರಿ ಸ್ಲೈಟ್ ಕ್ರೋಮ್ ಗ್ರಿಲ್, ಸ್ಟೀಲ್ ಚಕ್ರಗಳು, ಎಲ್ಇಡಿ ಟೈಲ್ ಲೈಟ್ಸ್‌ಗಳನ್ನು ಹೊಂದಿದೆ.

ಹೊಸ ವ್ಯಾಗನ್ ಆರ್ ಕಾರಿನ ಮುಂಭಾಗದಲ್ಲಿ ತನ್ನ ಔಟ್‍‍‍ಗೋಯಿಂಗ್ ಮಾಡಲ್‍ನಂತೆಯೆ ಟಾಲ್ ಬಾಯ್ ಡಿಸೈನ್ ಅನ್ನು ಹೊಂದಿದ್ದು, ಹೊಸದಾಗಿ ರಿವಾಂಪ್ಡ್ ಚಾಸಿ ಮತ್ತು ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಗುಣಮಟ್ಟ ಕಾಯ್ದುಕೊಳ್ಳಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಶಾರ್ಪ್ ಎಡ್ಜ್‌ಗಳು ಮತ್ತು ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವನ್ನು ಅಳವಡಿಸಲಾಗಿದೆ.

ಹೊಸ ಆವೃತ್ತಿಯ ವ್ಯಾಗನ್‌ ಆರ್ ಕಾರು ತುಸು ಉದ್ದವಿದೆ. ಅಗಲವಾದ ಹೆಡ್‍ಲ್ಯಾಂಪ್, ಹೊಸ ಬಂಪರ್, ಫಾಗ್‍ಲೈಟ್, ಮುಂಭಾಗದಲ್ಲಿ ರೆಕ್ಟಾಂಗ್ಯುಲರ್ ಗ್ರಿಲ್, ಆಕರ್ಷಕವಾಗಿ ಕಾಣಲು ಕ್ರೋಮ್ ಸ್ಟ್ರಿಪ್ ಅನ್ನು ಒದಗಿಸಲಾಗಿದೆ. ಕಾರಿನ ಹಿಂಭಾಗದಲ್ಲಿ ಸಾಧಾರಣವಾದ ಬಂಪರ್, ಎಕ್ಸ್-ಮಾಸ್ ಟ್ರೀ ಆಕಾರದಲ್ಲಿರುವ ಟೈಲ್‍ಲೈಟ್ಸ್, ನಂಬರ್ ಪ್ಲೇಟ್ ನೀಡುವ ಜಾಗದಲ್ಲಿ ಕೂಡಾ ಕ್ರೋಮ್ ಅನ್ನು ಬಳಸಲಾಗಿದೆ. ಒಳಭಾಗದಲ್ಲಿ ಡ್ರೈವರ್‍‍ಗೆ ಸೈಡ್ ಏರ್‍‍ಬ್ಯಾಗ್ಸ್ ಮತ್ತು ರಿಯರ್ ಪಾರ್ಕಿಂಗ್ ವಿಂಡೊಗಳನ್ನು ನೀಡಲಾಗಿದೆ.

ಹೊಸ ವ್ಯಾಗನ್ ಆರ್ ಕಾರು ಈ ಬಾರಿ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಂಜಿನ್ ಅನ್ನು ಮ್ಯಾನುವಲ್ ಅಥವಾ ಆಟೊಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಗಳಲ್ಲಿ ದೊರೆಯಲಿದೆ. ಇದಲ್ಲದೇ ಸಿಎನ್‍ಜಿ ಮತ್ತು ಎಲ್‍ಪಿಜಿ ಆಯ್ಕೆಯಲ್ಲಿ ಕೂಡಾ ಬಿಡುಗಡೆಯಾಗಲಿದೆ.

ಹಿಂದಿನ ವ್ಯಾಗನ್ ಆರ್ ಮಾದರಿಯಲ್ಲೇ ಹೊಸ ವ್ಯಾಗನ್ ಆರ್ ಕಾರುಗಳಲ್ಲೂ ಒಂದೇ ರೀತಿಯಾದ ತಾಂತ್ರಿಕ ಅಂಶಗಳನ್ನು ಮುಂದುವರಿಸಲಾಗಿದ್ದರು, ಕಾರಿನ ಹೊರ ವಿನ್ಯಾಸದಲ್ಲಿ ಬದಲಾವಣೆ ತರಲಾಗಿದೆ.

ಈ ಹೊಸ ಆವೃತ್ತಿಯ ವಾಹನವನ್ನು ಸುಜುಕಿಯ ‘5ನೇ ಫ್ಲಾಟ್‌ಮಾರ್ಮ್‌ನ ಹಿಯರ್ಟೆಕ್ಟರ್ ಫ್ಲಾಟ್‌ಫಾರಂ’ ಮೇಲೆ ತಯಾರಿಸಲಾಗಿದೆ. ಇದರಿಂದ ಕಾರು ಮತ್ತು ಗ್ರಾಹಕರ ಸುರಕ್ಷತೆಗೆ ಮತ್ತಷ್ಟು ಒತ್ತು ನೀಡಿದಂತಾಗಿದೆ ಎಂದು ಕಂಪನಿ ಹೇಳಿದೆ. ಕಾರಿನ ಹೊರಕವಚ ಗಟ್ಟಿಯಾಗಿದೆ. ಇದಕ್ಕಾಗಿ ಎನ್‌ವಿಎಚ್ ತಂತ್ರಜ್ಞಾನದ ಹೊದಿಕೆ ಬಳಸಲಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !