ಕೊಕೇನ್ ಮಾರಾಟ: ಸೆರೆ

7

ಕೊಕೇನ್ ಮಾರಾಟ: ಸೆರೆ

Published:
Updated:
Prajavani

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲವು ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಮಹಮದ್ ಗುಲ್ರೇಜ್ (32) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ವರ್ಷಾಚರಣೆಯ ಪಾರ್ಟಿ ಸೇರಿದಂತೆ ಹಲವೆಡೆ ಮಾದಕ ವಸ್ತು ಮಾರಾಟ ಮಾಡುವ ಬಗ್ಗೆ ಮಾಹಿತಿ ಇತ್ತು. ಹೀಗಾಗಿ, ಸೋಮವಾರ ರಾತ್ರಿಯಿಂದ ಮಂಗಳವಾರ ನಸುಕಿನವರೆಗೂ ಸಿಬ್ಬಂದಿ ನಗರದಲ್ಲಿ ಗಸ್ತು ತಿರುಗಿದರು. ಅದೇ ವೇಳೆಯೇ ಗುಲ್ರೇಜ್ ಸಿಕ್ಕಿಬಿದ್ದ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ವಿಲಿಯಮ್ಸ್ ನಗರದ ನಿವಾಸಿಯಾದ ಗುಲ್ರೇಜ್, ಪುಲಕೇಶಿನಗರ ಸಮೀಪದ ಕುಮಾರಸ್ವಾಮಿ ನಾಯ್ಡು ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ದಾಳಿ ಮಾಡಿ ಆತನನ್ನು ವಶಕ್ಕೆ ಪಡೆದೆವು. 2 ಗ್ರಾಂ ಕೊಕೇನ್, ಮೊಬೈಲ್‌ ಹಾಗೂ ಕಾರು ಜಪ್ತಿ ಮಾಡಿದೆವು’ ಎಂದರು.

‘ದಾಳಿಗೂ ಮುನ್ನ ಆರೋಪಿ ಸಾಕಷ್ಟು ಪ್ರಮಾಣದ ಮಾದಕ ವಸ್ತುವನ್ನು ಮಾರಾಟ ಮಾಡಿದ್ದ. ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಯುವಕರು ಆತನ ಬಳಿ ಮಾದಕ ವಸ್ತು ಖರೀದಿಸಿದ್ದರೆಂದು ಗೊತ್ತಾಗಿದೆ’ ಎಂದರು.

ದರೋಡೆಗೆ ಸಂಚು ರೂಪಿಸಿದ್ದವರ ಬಂಧನ: ಪುಲಿಕೇಶಿನಗರ ಠಾಣೆ ವ್ಯಾಪ್ತಿಯ ರೈಲ್ವೆ ಕಾಂಪೌಂಡ್ ಬಳಿ ಓಡಾಡುವ ಸಾರ್ವಜನಿಕರನ್ನು ದರೋಡೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ಮಜರ್ ಅಹಮದ್, ಸೈಯದ್ ರಿಯಾನ್ ಅಹಮದ್, ಮಹಮದ್ ಹಕಿಬ್ ಹಾಗೂ ಮಹಮದ್ ಝಕಿ ಬಂಧಿತರು. ಅವರ ಬಳಿ ಇದ್ದ ಕತ್ತಿ, ಎರಡು ಚಾಕು, ಪೆಪ್ಪರ್ ಸ್ಪ್ರೇ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !