ಹೆಣ್ಣು ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್‌ ಪ್ರಧಾನಿ

7

ಹೆಣ್ಣು ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್‌ ಪ್ರಧಾನಿ

Published:
Updated:
ಮಗುವಿನೊಂದಿಗೆ ಜಸಿಂದಾ ಆರ್ಡೆರ್ನ್‌ ಮತ್ತು ಪತಿ ಕ್ಲಾರ್ಕ್‌ ಗೇಫೋರ್ಡ್‌ –ರಾಯಿಟರ್ಸ್‌ ಚಿತ್ರ

ಆಕ್ಲೆಂಡ್‌: ನ್ಯೂಜಿಲೆಂಡ್‌ ಪ್ರಧಾನಿ ಜಸಿಂದಾ ಆರ್ಡೆರ್ನ್‌ ಅವರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.‌

ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿರುವ ವಿಶ್ವದ ಎರಡನೇ ಪ್ರಧಾನಿ ಇವರು. 37 ವರ್ಷದ ಜಸಿಂದಾ ಅವರಿಗೆ ಇದು ಮೊದಲ ಮಗುವಾಗಿದ್ದು, ಮಗುವಿನ ಜೊತೆಗಿರುವ ಚಿತ್ರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು ಮಗು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.

‘ಆಕ್ಲೆಂಡ್ ಆಸ್ಪತ್ರೆಯ ಉತ್ತಮ ತಂಡಕ್ಕೆ ಧನ್ಯವಾದಗಳು’ ಎಂದೂ ಅವರು ಹೇಳಿದ್ದಾರೆ.

ಜಸಿಂದಾ ಅವರು 2017 ಅಕ್ಟೋಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿತ್ತು.

ಜಸಿಂದಾ ಆರು ವಾರಗಳ ಹೆರಿಗೆ ರಜೆ ಪಡೆದಿದ್ದು, ಈ ವೇಳೆ ಉಪಪ್ರಧಾನಿ ವಿನ್ಸ್‌ಟನ್‌ ಪೀಟರ್ಸ್ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಜೀರ್‌ ಭುಟ್ಟೊ ಅವರು 1990ರಲ್ಲಿ ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ್ದರು.

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !