ರಾಷ್ಟ್ರಗೀತೆ ಜಾಗೃತಿ ಅಭಿಯಾನ

7

ರಾಷ್ಟ್ರಗೀತೆ ಜಾಗೃತಿ ಅಭಿಯಾನ

Published:
Updated:

ಬೆಂಗಳೂರು: ರಾಷ್ಟ್ರಗೀತೆ ಜಾಗೃತಿ ಅಭಿಯಾನ ಸಮಿತಿಯು ಇದೇ 15ರಂದು ಬೆಳಿಗ್ಗೆ 8ಕ್ಕೆ ಹೆಗ್ಗನಹಳ್ಳಿಯ ನ್ಯೂ ಬಾಲ್ಡ್‌ವಿನ್‌ ಶಾಲೆಯ ಮೈದಾನದಲ್ಲಿ ರಾಷ್ಟ್ರಗೀತೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಿದೆ.

‘ಜನಗಣ ಮನ ಹಾಡುವಾಗ ಮತ್ತು ತ್ರಿವರ್ಣ ಧ್ವಜಕ್ಕೆ ನಮನ ಸಲ್ಲಿಸುವಾಗ ಅನೇಕ ಜನ ಅಸಭ್ಯವಾಗಿ ವರ್ತಿಸುತ್ತಾರೆ. ಗೌರವಯುತವಾಗಿ ನಡೆದುಕೊಳ್ಳುವುದು ನಮ್ಮ ಕರ್ತವ್ಯ ಎಂಬುದನ್ನು ಮರೆತಿದ್ದಾರೆ. ಅಂತಹವರಿಗೆ ದೇಶಭಕ್ತಿ ಬಗ್ಗೆ ಅರಿವು ಮೂಡಿಸುವುದು ಅಗತ್ಯ’ ಎಂದು ಸಾಹಿತಿ ದೊಡ್ಡರಂಗೇಗೌಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಭಿಯಾನದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸಂಗೀತ ನಿರ್ದೇಶಕ ಹಂಸಲೇಖ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಸಾಹಿತಿ ದೊಡ್ಡರಂಗೇಗೌಡ ಭಾಗವಹಿಸಲಿದ್ದಾರೆ.

ಅಲೆಮಾರಿ ನಿಗಮ ಸ್ಥಾಪನೆಗೆ ಒತ್ತಾಯ

ಬೆಂಗಳೂರು: ಪರಿಶಿಷ್ಟ ಜಾತಿ, ವರ್ಗಗಳ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಸರ್ಕಾರಕ್ಕೆ ಒತ್ತಾಯಿಸಿದೆ.

‘ಸಮುದಾಯದ ಜನರು ಬೀದಿಬೀದಿಗಳಲ್ಲಿ ಕಲೆ ಪ್ರದರ್ಶನ ಮಾಡುವ ದುಃಸ್ಥಿತಿ ಬಂದೊದಗಿದೆ. ಅಲೆಮಾರಿಗಳಿಗೂ ಕಲಾ ಅಕಾಡೆಮಿ ಸ್ಥಾಪಿಸಬೇಕು. ಕಲಾವಿದರಿಗೆ ಮಾಸಾಶನ, ಪಡಿತರ ಚೀಟಿ, ಗುರುತಿನ ಚೀಟಿ ನೀಡಬೇಕು’ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎ.ಆರ್.ಗೋವಿಂದ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಜಾತಿವಾದಿಗಳಿಂದ‌ ನಿರಂತರವಾಗಿ ಆಗುತ್ತಿರುವ ಶೋಷಣೆಯನ್ನು ತಪ್ಪಿಸಬೇಕು’ ಎಂದರು.

ಉಚಿತ ಉಪನ್ಯಾಸ

ಬೆಂಗಳೂರು: ‘ವಿಶ್ವ ಕ್ವಾಂಟಮ್‌ ಶಕ್ತಿ’ ಕುರಿತು ಉಚಿತ ಉಪನ್ಯಾಸ ತಾತಗುಣಿ ಗ್ರಾಮದ ಫ್ಯಾಂಟಸಿ ಗಾರ್ಡನ್‌ನಲ್ಲಿರುವ ಕ್ವಾಂಟಮ್ ವೆಲ್‍ನೆಸ್‍ ಕೇಂದ್ರದಲ್ಲಿ ಇದೇ 11ರಂದು ಮಧ್ಯಾಹ್ನ 3 ರಿಂದ ನಡೆಯಲಿದೆ. ಸಂಪರ್ಕ: 080-41313777

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !